ಸಾಧನೆ ,ಪರಿಶ್ರಮಗಳ ತಪಸ್ಸಿನಿಂದ ಭವ್ಯ ಕಲಾಕೃತಿ ನಿರ್ಮಾಣ:ಕಾರ್ಕಳ ಕಮಲಾಕ್ಷ ಕಾಮತ್
ಕಾರ್ಕಳ: ಚಾಕ್ ಪೀಸ್ ಮಾಧ್ಯಮದಲ್ಲಿ ಗೀತೋಪದೇಶ ಮಂಟಪ ರಚನೆ ಒಂದು ಅಪೂರ್ವ ಕಲಾಕೃತಿಯಾಗಿದೆ . ಅನೇಕ ವರ್ಷಗಳ ಸಾಧನೆ , ಪರಿಣತಿ , ಪರಿಶ್ರಮಗಳ ತಪಸ್ಸಿನಿಂದ ಇಂತಹ ಭವ್ಯ ಕೃತಿಗಳು ಮೈದಳೆಯುತ್ತವೆ. ದೇವರ ಅನುಗ್ರಹವಿದ್ದಾಗ ಮಾತ್ರ ಇಂತಹ ಅತ್ಯಂತ ವಿರಳ ಎನ್ನ ಬಹುದಾದ ಸಾಧನೆ ಸಾಧ್ಯ . 1200 ಚಾಕ್ ಪೀಸ್ ಉಪಯೋಗಿಸಿ ರಚಿಸಿದ ಸಮಗ್ರ ಗೀತೋಪದೇಶ ಮಹತ್ವ ಸಾರುವ ಈ ಕೃತಿ ಸಂಗ್ರಹಯೋಗ್ಯ ಎಂದು ನಿವೃತ್ತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಹೇಳಿದರು.
1200 ಚಾಕ್ ಪೀಸ್ ಬಳಸಿ ಗೀತೋಪದೇಶ ಕಲಾಕೃತಿ ನಿರ್ಮಿಸಿದ 73ರ ಹರೆಯದ ಹಿರಿಯ ಕಲಾವಿದ ಚೋಲ್ಪಾಡಿ ರಾಮಕೃಷ್ಣ ಕಾಮತ್ ಅವರನ್ನು ಎಸ್ ವಿ ಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ. ಶೆಣೈ, ಎಸ್ ವಿ ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನೇಮಿರಾಜ್ ಶೆಟ್ಟಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಹೊಸಸಂಜೆ ಬಳಗದ ಅಧ್ಯಕ್ಷ ಆರ್ . ದೇವರಾಯ ಪ್ರಭು ಸ್ವಾಗತಿಸಿದರು.ಶಿವಾ ಜಾಹೀರಾತು ಸಂಸ್ಥೆಯ ಮಾಲಕ ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು .ಚೋಲ್ಪಾಡಿ ಸದಾಶಿವ ಕಾಮತ್ ವಂದಿಸಿದರು.