ಕಾರ್ಕಳ, ಮಂಗಳವಾರ ಸಂಜೆ ಧರ್ಮಸ್ಥಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾಸಗಿ ಬಸ್ ಪೆರ್ನೋಡಿಯಲ್ಲಿ ತಯಾರ್ ಪಂಚರ್ ಆಗಿ ನಿಯಂತ್ರಣ ತಪ್ಪಿ ಪಕ್ಕದ ಬರೆಗೆ ಗುದ್ದಿದೆ.
ಟಯರ್ ಪಂಚರ್ ಆದ ಅನಂತರ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬಿಟ್ಟು ಹೋಗಿ ಬರೆಗೆ ಗುದ್ದಿದೆ.ಬಸ್ಸಿನಲ್ಲಿ 15 ಮಂದಿ ಪ್ರಯಾಣಿಕರಿದ್ದು,ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ:ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು
ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ(44) ಕೊಲೆ ಪ್ರಕಣದ ಆರೋಪಿ ದಿಲೀಪ್ ಹೆಗ್ಡೆ(28)ಗೆ ರಾಜ್ಯ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ದಿಲೀಪ್ ಹೆಗ್ಡೆ ಜಾಮೀನು ಅರ್ಜಿಯನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರ ಪೀಠ ಕಾರ್ಕಳ ಮಾ.4ರಂದು ತಿರಸ್ಕರಿಸಿತ್ತು.ಈ ಹಿನ್ನಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು.ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆರೋಪಿ ದಿಲೀಪ್ ಹೆಗ್ಡೆಗೆ ಜಾಮೀನು ನೀಡಿದೆ.
ಆರೋಪಿ ಪರ ನ್ಯಾಯವಾದಿ ನಿಶ್ಚಿತ್ ಕುಮಾರ್ ಶೆಟ್ಟಿ ವಾದಿಸಿದ್ದರು.
2024ರ ಅ.20ರಂದು ಬಾಲಕೃಷ್ಣ ಪೂಜಾರಿ ಅವರನ್ನು ಅವರ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಕೊಲೆಗೈದಿದ್ದರು.ಆರೋಪಿಗಳನ್ನು ಅ.25ರಂದು ಅಜೆಕಾರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.
ಕಲ್ಯಾ ಗ್ರಾಮ ವಾರ್ಡ್ ಕಾರ್ಯಕರ್ತರ ಸಭೆಯು
ಮಾರ್ಚ್ 29 ಅದಿತ್ಯವಾರ ಗ್ರಾಮೀಣ ಸಮಿತಿಯ ಅದ್ಯಕ್ಷ ರಘುಪತಿ ಪೂಜಾರಿಯವರ ಮನೆಯಲ್ಲಿ ಜರುಗಿತು.
ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯ ಮೂಲಕ ಜನಪರ ಆಡಳಿತವನ್ನು ನೀಡುತಿದೆ, ಇದರ ಪರಿಣಾಮ ಜನರ ಜೀವನ ಮಟ್ಟ ಸುಧಾರಿಸಿ ಎಲ್ಲರೂ ನೆಮ್ಮದಿಯ ಬದುಕು ಕಟ್ಟುವಂತಾಗಿದೆ, ಸ್ಥಳಿಯ ಸಂಸ್ಥೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಆಡಳಿತವಿದ್ದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಹಾಗಾಗಿ ಸ್ಥಳಿಯ ಕಾಂಗ್ರೆಸ್ ಅಡಳಿತಕ್ಕಾಗಕ ಪಕ್ಷ ಸಂಘಟನೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಬ್ಲಾಕ್ ಅದ್ಯಕ್ಷ ಶುಭದರಾವ್ ಮಾತನಾಡಿ ಬ್ಲಾಕ್ ಕಾಂಗ್ರೆಸ್ ಸ್ಥಳಿಯ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮೀಣ ಸಮಿತಿಗೆ ಸರ್ವ ಸಹಕಾರ ನೀಡುತ್ತೇವೆ. ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದೇವೆ ಎಂದರು.
ಪಕ್ಷದ ಹಿರಿಯರಾದ ಅಚ್ಚುತ ಆಚಾರ್ಯ, ಅರುಣ ಜೋಗಿ, ಮತ್ತು ಸಾಧಕ ಯುವ ಕಾರ್ಯಕರ್ತ ರಿತಿನ್ ಪೂಜಾರಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಬದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಪಕ್ಷದ ಪಧಾದಿಕಾರಿಗಳಾದ ಸೋಮನಾಥ ನಾಯಕ್, ದೀಪಕ್ ಕೋಟ್ಯಾನ್, ಸಂತೋಷ್ ದೇವಾಡಿಗ, ಕಿರಣ್ ನಾಯಕ್, ಮಂಜುನಾಥ್ ಜೋಗಿ, ಅವಿನಾಶ್ ಶೆಟ್ಟಿ ಬೋಳ, ಯೋಗೀಶ್ ಬೋಳ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮೀಣ ಸಮಿತಿಯ ಅದ್ಯಕ್ಷ ರಘುಪತಿ ಪೂಜಾರಿ ಸ್ವಾಗತಿಸಿದರು ಗ್ಯಾರಂಟಿ ಸಮಿತಿ ಸದಸ್ಯ ಯತೀಶ್ ನಿರೂಪಿಸಿ ಬೂತ್ ಅದ್ಯಕ್ಷ ಸತೀಶ್ ಧನ್ಯವಾದವಿತ್ತರು.
ಹೊಸದಿಲ್ಲಿ, ಕರ್ನಾಟಕದಲ್ಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುತ್ತಾರೆಯೇ ಅಥವಾ ಹೊಸಬರ ನೇಮಕ ಆಗಲಿದೆಯೇ ಎಂಬ ಪ್ರಶ್ನೆಗೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.
ಜತೆಗೆ ಬಿಜೆಪಿಯ ರಾಷ್ಟೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಅಧಿಕಾರಾವಧಿಯೂ ಮುಕ್ತಾಯ ಆಗಿರುವುದರಿಂದ ಏಪ್ರಿಲ್ ಅಂತ್ಯದೊಳಗೆ ಹೊಸ ಅಧ್ಯಕ್ಷರ ನೇಮಕ ಸಾಧ್ಯತೆ ಇದೆ.
ಇದಕ್ಕೆ ಮುನ್ನ ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.ಬಿಜೆಪಿಯ ವರಿಷ್ಠರು ಇನ್ನೊಂದು ವಾರದಲ್ಲಿ ಕರ್ನಾಟಕ,ಉ.ಪ್ರದೇಶ,ತ.ನಾಡು,ಪ.ಬಂಗಾಲ ರಾಜ್ಯಗಳ ಬಿಜೆಪಿ ಅಧ್ಯಕ್ಷರನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ನವದೆಹಲಿ:ವಿಪಕ್ಷಗಳ ವ್ಯಾಪಕ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಇಂದು ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು.
ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಿದರು.
ಎರಡು ಮನೆಗಳ ಜಂಟಿ ಸಮಿತಿಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ನಡೆದ ಚರ್ಚೆಯನ್ನು ಭಾರತದ ಸಂಸತ್ತಿನ ಇತಿಹಾಸದಲ್ಲಿ ಇಲ್ಲಿಯವರೆಗೂ ಮಾಡಲಾಗಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ.
ಜಂಟಿ ಸಮಿತಿಯ ಎಲ್ಲ ಸದಸ್ಯರಿಗೆ ನಾನು ಧನ್ಯವಾದ ಮತ್ತು ಅಭಿನಂದಿಸುತ್ತೇನೆ.ಇಲ್ಲಿಯವರೆಗೆ,ವಿವಿಧ ಸಮುದಾಯಗಳ ರಾಜ್ಯ ಹೊಂದಿರುವವರ ಒಟ್ಟು 284 ನಿಯೋಗಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಸಮಿತಿಯ ಮುಂದೆ ಮಂಡಿಸಿವೆ.25 ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಪ್ರಾಂತ್ಯಗಳ ವಕ್ಫ್ ಮಂಡಳಿಗಳು ಸಹ ತಮ್ಮ ಸಲ್ಲಿಕೆಗಳನ್ನು ಪ್ರಸ್ತುತ ಪಡಿಸಿವೆ ಎಂದು ರಿಜಿಜು ತಿಳಿಸಿದ್ದಾರೆ.
ಭರವಸೆ ಮಾತ್ರವಲ್ಲ,ಈ ಮಸೂದೆಯನ್ನು ವಿರೋಧಿಸುವವರು ಸಹ ತಮ್ಮ ಹೃದಯದಲ್ಲಿ ಬದಲಾವಣೆಗಳನ್ನು ಹೊಂದಿರುತ್ತಾರೆ ಎಂದು ನನಗೆ ಖಾತ್ರಿಯಿದೆ.ಪ್ರತಿಯೊಬ್ಬರೂ ಈ ಮಸೂದೆಯನ್ನು ಸರಕಾತ್ಮಕ ಮನೋಭಾವದಿಂದ ಬೆಂಬಲಿಸುತ್ತಾರೆ ಎಂದು ರಿಜಿಜು ಆಶಯ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ : ಹೆಬ್ರಿ ಎಸ್.ಆರ್. ವಿದ್ಯಾರ್ಥಿನಿ ಆಪ್ತಿ ಆಚಾರ್ಯ ಸಾಧನೆ.
ಹೆಬ್ರಿಯ ಎಸ್.ಆರ್ ಪಬ್ಲಿಕ್ ಸ್ಕೂಲ್ ನಲ್ಲಿ 4ನೇ ತರಗತಿಯ ವಿದ್ಯಾರ್ಥಿನಿ ಆಪ್ತಿ ಆಚಾರ್ಯ ಅವರು, 2025 ಮಾರ್ಚ್ 1 ರಂದು ಜಿಮ್ನಾಸ್ಟಿಕ್ ನ ಒಂದು ಭಾಗವಾದ ಹೈಡ್ರೋಲ್ ಅನ್ನು ಗರಿಷ್ಟ 4 ನಿಮಿಷ 40 ಸೆಕೆಂಡ್ ನಲ್ಲಿ ಸತತ 65 ರೌಂಡುಗಳನ್ನು ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿದ್ದಾಳೆ. ಈಕೆ ಮುನಿಯಾಲಿನ ಶ್ರೀಮತಿ ಲತಾ ಹಾಗೂ ಶಿವಾನಂದ ಆಚಾರ್ಯ ಅವರ ಮಗಳು.
ವಿದ್ಯಾರ್ಥಿನಿಯನ್ನು ಎಸ್. ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾದ ಸಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.
ಕಾರ್ಕಳ:ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಸತತ 6 ದಿನ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಆಪ್ತ ಸಮಾಲೋಚಕರಾದ ಸಿಸ್ಟರ್ ಶ್ಯಾಲೆಟ್ ಸಿಕ್ವೇರಾರವರು ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿದ ವಿದ್ಯಾರ್ಥಿಗಳಿಗೂ, ಸಹಕರಿಸಿದ ಶಿಕ್ಷಕ- ಶಿಕ್ಷಕೇತರ ವೃಂದದವರಿಗೂ ಶುಭಾಶಯ ಸಲ್ಲಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಡೊಮಿನಿಕ್ ಅಂದ್ರಾದೆಯವರು ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೋರವರು ಶಿಬಿರದ ಯಶಸ್ಸಿನ ಹಿಂದೆ ಹಲವಾರು ವ್ಯಕ್ತಿಗಳ ಪರಿಶ್ರಮವಿದ್ದು ಉತ್ತಮ ಅನುಭವ ನೀಡಿದೆ ಎಂದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸರಳ ವ್ಯಾಯಮ, ಅಭಿನಯಗೀತೆ, ಜಾದೂ, ಮಣ್ಣಿನ ಹಣತೆ ತಯಾರಿ, ಕೀಬೋರ್ಡ್, ನೃತ್ಯ, ನಾಟಕ, ಏರೋಬಿಕ್, ಚಾರ್ಕೋಲ್ ಪೇಂಟಿಂಗ್, ಅಗ್ನಿಶಾಮಕದಳ ಪ್ರಾತ್ಯಕ್ಷಿಕತೆ, ಕರಕುಶಲ ವಸ್ತು ತಯಾರಿ, ಹೊರಸಂಚಾರ, ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಶಿಕ್ಷಣದ ಅರಿವು, ಆರೋಗ್ಯ ಮತ್ತು ದಂತ ತಪಾಸಣೆ ಅಲ್ಲದೇ ಶಾಲಾ ಶಿಕ್ಷಕ-ಶಿಕ್ಷಕಿಯರು ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು.
ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಲಿನೆಟ್ ಮರೀನಾ ಡಿಸೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಶ್ರೀಮತಿ ದೀಪ್ತಿಯವರು ಶಿಬಿರದ ಅನುಭವ ಹಂಚಿಕೊAಡರು. ಶಿಕ್ಷಕಿಯರಾದ ಶ್ರೀಮತಿ ಜಯಲಕ್ಷ್ಮಿ ಸ್ವಾಗತಿಸಿ, ಸಿಸ್ಟರ್ ಲವೀನಾ ಕ್ರಾಸ್ತ ವಂದಿಸಿ, ಶ್ರೀಮತಿ ನಾಗಲಕ್ಷ್ಮಿ ಮತ್ತು ಶ್ರೀಮತಿ ವಿಜೇತಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾರೋಪ ಸಮಾರಂಭವು ಮುಕ್ತಾಯಗೊಂಡಿತು.
ಕಾರ್ಕಳದ ಸುಪ್ರಸಿದ್ದ ಚಿನ್ನದ ಮಳಿಗೆ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಸಲುವಾಗಿ ಮಾರ್ಚ್ 31ರ ವರೆಗೆ ವಿಶೇಷ ಆಫರ್ ಲಭ್ಯವಿದೆ.ಪ್ರತೀ ಗ್ರಾಂ ಚಿನ್ನಾಭರಣಗಳ ಮೇಲೆ 200 ರೂಪಾಯಿ ರಿಯಾಯಿತಿ,ಬೆಳ್ಳಿಯ ಸಾಮಗ್ರಿ ಪ್ರತೀ ಕೆಜಿಗೆ 3,000 ರೂಪಾಯಿ ರೀಯಾಯಿತಿ ಹಾಗೂ ಪ್ರತೀ ಕ್ಯಾರೆಟ್ ವಜ್ರಾಭರಣಕ್ಕೆ 7,000ರೂಪಾಯಿ ರಿಯಾಯಿತಿ ಸಿಗಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಗೆ ಬಳಸಿತ್ತೇ ವಿನಹ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನು ಪದೇಪದೇ ತಿದ್ದುಪಡಿಗೊಳಿಸಿ ಅವರನ್ನು ಅವಮಾನಿಸಿತ್ತು-ಮಣಿರಾಜ್ ಶೆಟ್ಟಿ
ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಸರ್ಕಾರಿ ಗುತ್ತಿಗೆಯಲ್ಲಿ ಶೇಕಡಾ 4 ಮೀಸಲಾತಿ ನೀಡಿದ್ದನ್ನು ಸಮರ್ಥೀಸುತ್ತಾ ಅಗತ್ಯ ಬಿದ್ದರೆ ಸಂವಿಧಾನ ಬದಲಿಸಬೇಕಾಗಬಹುದು ಎಂಬ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಕಾರ್ಕಳ ತಾಲ್ಲೂಕು ಆಫೀಸ್ ಸರ್ಕಲ್ ಬಳಿ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಕಾರ್ಕಳ ಬಿಜೆಪಿಯ ಮಂಡಲಾದ್ಯಕ್ಷ ನವೀನ್ ನಾಯಕ್ ನೇತೃತ್ವದಲ್ಲಿ ನಡೆಯಿತು. ನವೀನ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕಾದವರಿಂದ ಸಂವಿಧಾನಕ್ಕೆ ಅಪಮಾನವಾಗಿದೆ ಎಂದರು.
ಸಭೆಯಲ್ಲಿ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ ಸಂವಿಧಾನದ ಪುಸ್ತಕ ಹಿಡಿದು ಸಂಸತ್ ಕಲಾಪದಲ್ಲಿ ಭಾಗವಹಿಸಿದ ಕಾಂಗ್ರೆಸ್ಸಿನ ನಾಯಕರುಗಳಿಗೆ ಸಂವಿಧಾನದಲ್ಲಿ ಎಷ್ಟು ಪರಿಚ್ಛೇದಗಳಿವೆ ಗೊತ್ತಿದೆಯೇ.? ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ಸ್ ಅಂಬೇಡ್ಕರ್ ಹೆಸರು ಬಳಸುತ್ತಿದ್ದು ಅವರಿಗೆ ಯಾವುದೇ ಗೌರವ ನೀಡಿಲ್ಲ. ಷಹಭಾನು ಕೇಸ್ ನಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅನೂರ್ಜಿತಗೊಳಿಸಲಾಯಿತು. ಅಂಬೇಡ್ಕರ್ ಸಂಸತ್ ಪ್ರವೇಶಿಸಲು ಕಾಂಗ್ರೆಸ್ಸ್ ಅಡ್ಡಗಾಲು ಹಾಕಿತ್ತು ಎಂದರು.
ಭಾರತೀಯ ಜನತಾಪಾರ್ಟಿಯ ವಕ್ತಾರ ರವೀಂದ್ರ ಮೊಯ್ಲಿ ಮಾತನಾಡಿ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿಯವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. 1952 ರ ಲಾಗಾಯ್ತು ಸುಮಾರು 80 ಸಲ ಸಂವಿಧಾನ ತಿದ್ದುಪಡಿಯು ಕಾಂಗ್ರೆಸ್ಸ್ ನೇತೃತ್ವದ ಸರ್ಕಾರದ ಅವಧಿಯಲ್ಲಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಕಾಂಗ್ರೆಸ್ ಸಂವಿಧಾನ ಶಿಲ್ಪಿ ಮಹಾನ್ ಮೇಧಾವಿ ಬಾಬ ಸಾಹೇಬ್ ಅಂಬೇಡ್ಕರ್ ರವರನ್ನೇ 1952 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ಸಿನಿಂದ ಜನತೆ ಏನನ್ನು ನಿರೀಕ್ಷಿಸಬಹುದು ಎಂದರು.
ಪ್ರತಿಭಟನಾ ಸಭೆಯಲ್ಲಿ ತಿಳಿಸಿದರು ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷರುಗಳಾದ ಮಹಾವೀರ ಹೆಗ್ಡೆ, ಉದಯ ಕೋಟ್ಯಾನ್, ಜಯರಾಮ್ ಸಾಲ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಬೋಳ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ತಾಲೂಕು ಯುವಮೋರ್ಚಾ ಅಧ್ಯಕ್ಷರಾದ ರಾಕೇಶ್ ಶೆಟ್ಟಿ, ಪ್ರಕಾಶ್ ರಾವ್, ಸುಧಾಕರ್ ಹೆಗ್ಡೆ ಹೆಬ್ರಿ, ಲಕ್ಷ್ಮೀನಾರಯಣ್ ಹೆಬ್ರಿ, ಸಮೃದ್ಧಿ ಪ್ರಕಾಶ್, ಯೋಗಿಶ್ ನಾಯಕ್, ಪ್ರಸಾದ್ ಐಸಿರಾ ಹಾಗೂ ಪುರಸಭಾ ಸದಸ್ಯರುಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.