Home Blog Page 72

ಉಡುಪಿ ಜಿಲ್ಲೆಯಾದ್ಯಂತ ಸರಕಾರದ ಹೆಸರು ದುರುಪಯೋಗ ಪಡಿಸಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸಲು ಆಸ್ಪದ ನೀಡುವುದಿಲ್ಲ- ಕೃಷ್ಣ ಶೆಟ್ಟಿ ಬಜಗೋಳಿ

0

ಉಡುಪಿ ಜಿಲ್ಲೆಯಾದ್ಯಂತ ಸರಕಾರದ ಹೆಸರು ದುರುಪಯೋಗ ಪಡಿಸಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸಲು ಆಸ್ಪದ ನೀಡುವುದಿಲ್ಲ- ಕೃಷ್ಣ ಶೆಟ್ಟಿ ಬಜಗೋಳಿ

ಶಾಸಕರ ಹೆಸರನ್ನು ಬಳಿಸಿಕೊಂಡು ಅಥವಾ ಕಾಂಗ್ರೆಸ್ ಸರಕಾರದ ಹೆಸರು ದುರುಪಯೋಗ ಪಡಿಸಿಕೊಂಡು ಉಡುಪಿ ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆಗಳು ,ಅಕ್ರಮ ಗಣಿಗಾರಿಕೆ , ಅಕ್ರಮ ಮರಳು ದಂಧೆ ಮಾಡುವವರ ವಿರುದ್ಧ ಸಂಬಂದಪಟ್ಟ ಇಲಾಖೆಯವರು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು. ಸೂಕ್ತ ಪರವಾನಗಿ ಇಲ್ಲದೇ ಸರ್ಕಾರದ ರಾಯಧನಕ್ಕೆ ಧಕ್ಕೆ ಉಂಟು ಮಾಡುವಂತಹ ಅಕ್ರಮ ದಂಧೆಗಳಲ್ಲಿ ಭಾಗಿಯಾಗುತ್ತಿದ್ದಲ್ಲಿ ಅಂತವರ ವಿರುದ್ದ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಸಮಿತಿಯು ಉಡುಪಿ ಜಿಲ್ಲೆಯಾದ್ಯಂತ ಯುವ ಸಮುದಾಯವನ್ನು ಸಂಘಟಿಸಿ ಒಗ್ಗಟ್ಟಿನಿಂದ ಸಾಮಾಜಿಕ ಕಳಕಳಿಯುಳ್ಳ ಸಮಾಜಮುಖಿ ಕಾರ್ಯಗಳು, ಧಾರ್ಮಿಕ ಕಾರ್ಯಕ್ರಮಗಳು, ಯುವ ಸಮುದಾಯಕ್ಕೆ ಉದ್ಯೊಗ ಸೃಷ್ಟಿಯ ಕುರಿತು ಚಿಂತನೆ, ಸಮಾಜದ ಕಟ್ಟಕಡೆಯ ಹಾಗೂ ಶೋಷಿತರ ದ್ವನಿಯಾಗುತ್ತದೆಯೇ ವಿನಹ ಅಕ್ರಮ ದಂಧೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ.

ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಯುವ ಕಾಂಗ್ರೆಸ್ ಸಮಿತಿಯು ಅಕ್ರಮ ಚಟುವಟಿಕೆಗಳನ್ನು ಹದ್ದುಬಸ್ತಿಗೆ ತರಲು ಶ್ರಮಿಸುತ್ತದೆ. ಯಾವುದೇ ಕಾರಣಕ್ಕೂ ಯಾರಿಂದನೂ ಕಾಂಗ್ರೆಸ್ ಸರಕಾರಕ್ಕೆ ಕೆಟ್ಟ ಹೆಸರು ತರಲು ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೃಷ್ಣ ಶೆಟ್ಟಿ ಬಜಗೋಳಿಯವರು ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷರಾದ ಬಳಿಕದ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಪರಶುರಾಮ ಥೀಮ್ ಪಾರ್ಕ್ ಹಗರಣದ ಕಾರಣಕರ್ತರೇ ನೀವು ಎನ್ನುವುದನ್ನು ಸುನೀಲ್ ಕುಮಾರ್ ಮರೆಯಬಾರದು: ಶಶಿದರ್ ಶಾಮ‌ ಹವಾಲ್ದಾರ್ ಬೆಟ್ಟು

0

ಪರಶುರಾಮ ಥೀಮ್ ಪಾರ್ಕ್ ಹಗರಣದ ಕಾರಣಕರ್ತರೇ ನೀವು ಎನ್ನುವುದನ್ನು ಸುನೀಲ್ ಕುಮಾರ್ ಮರೆಯಬಾರದು: ಶಶಿದರ್ ಶಾಮ‌ ಹವಾಲ್ದಾರ್ ಬೆಟ್ಟು

ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ನಡೆದ ಭ್ರಷ್ಟಾಚಾರ ಅನಾಚಾರಗಳ ಕುರಿತು ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ರವರು ಮಾತನಾಡುವುದೇ ತಪ್ಪು ಎನ್ನುವಂತೆ ಸುನೀಲ್ ‌ಕುಮಾರ್ ವರ್ತಿಸುತ್ತಿರುವುದು ಖಂಡನೀಯವಾಗಿದೆ.

ಸುನೀಲ್ ಅವರು ತಾನು ಏನೇ ಅನಾಚಾರ ಮಾಡಿದರೂ ನನ್ನನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಸರ್ವಾಧಿಕಾರಿ ನಿಲ್ಲುವನ್ನು ಹೊಂದಿರುವಂತಿದೆ, ಮಾನ್ಯ ಸುನಿಲ್ ಕುಮಾರ್ ಅವರೇ ಕಾರ್ಕಳ ಇರುವುದು ಭಾರತದಲ್ಲಿ, ಭಾರತ ಒಂದು ಪ್ರಜಾಸತ್ತಾತ್ಮಕ ರಾಷ್ಟ್ರ ಇಲ್ಲಿ ತಪ್ಪುಗಳು ಸಂಭವಿಸಿದಾಗ ಯಾರು ಯಾರನ್ನು ಬೇಕಾದರೂ ಪ್ರಶ್ನಿಸಬಹುದು. ಸುನೀಲ್ ಕುಮಾರ್ ಅವರೇ ನೀವು ಕಾರ್ಕಳದ ಶಾಸಕರು ಎಂದ ಮಾತ್ರಕ್ಕೆ ನೀವು ಪ್ರಶ್ನಾತೀತರಲ್ಲ.

ತಾನು ಏನೇ ಮಾಡಿದರೂ ಸರಿ! ಬೇರೆಯವರು ಮಾತನಾಡುವುದೇ ತಪ್ಪು ಎನ್ನುವ ನಿಲುವನ್ನು ಬಿಟ್ಟುಬಿಡಿ.

ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾದವರು ಅಷ್ಟ ಮಂಗಳ ಪ್ರಶ್ನಾ ಚಿಂತನೆ ನಡೆಯಲಿ ಎಂದು ಸಲಹೆ ನೀಡಿದ್ದು ಪರಶುರಾಮರ ನಕಲಿ ಪ್ರತಿಮೆ ನಿರ್ಮಾಣ ಸಮಯದಲ್ಲಿ ಆ ಜಾಗದಲ್ಲಿ ಹಿಂದೆ ಆರಾಧಿಸಿ ಕೊಂಡು ಬಂದಿರುವ ಸಾನಿಧ್ಯ ಶಕ್ತಿಗಳ ಕುರುಹು ಇತ್ತೆ,..? ಅಥವಾ ಅವುಗಳಿಗೆ ಅಪಚಾರವಾಗಿದಿಯೇ ಎನ್ನುವುದನ್ನು ತಿಳಿಯುವುದು ಪ್ರತಿಯೊಬ್ಬ ಆಸ್ತಿಕನ ಹಕ್ಕಾಗಿದೆ.

ಉಮಿಕಲ್ ಬೆಟ್ಟದ ಮೇಲೆ ತುಳುನಾಡ ಅವಳಿ ವೀರರಾದ ಕೋಟಿ ಚೆನ್ನಯರ ಪಾದದ ಕುರುಹುಗಳಿವೆ, ಅಲ್ಲಿ ಮುಂಚೆ‌ ದೈವ ಸಾನಿದ್ಯವಿತ್ತು, ಅಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು ಎಂದು ಅಲ್ಲಿನ ಹಿರಿಯ ಗ್ರಾಮಸ್ಥರು ಹೇಳುವುದನ್ನು ಕೇಳಿದ್ದೇವೆ. ಅಲ್ಲಿನ ಸಾನಿದ್ಯ ಶಕ್ತಿಗಳನ್ನು ಮುಚ್ಚಿಹಾಕಿ ಚುನಾವಣೆ ಗೆಲ್ಲುವ ಉದ್ದೇಶದಿಂದ ತರಾತುರಿಯಲ್ಲಿ ನೀವು ನಕಲಿ ಪರಶುರಾಮ ನಿರ್ಮಾಣ ಮಾಡಿರುವುದರಿಂದ ಅಲ್ಲಿನ ಸ್ಥಳ ಸಾನಿಧ್ಯ ಶಕ್ತಿಗಳಿಗೆ ಹಾನಿ ಉಂಟಾಗಿದೆ ಎನ್ನುವ ಮಾತುಗಳಿವೆ.

ಈ ಎಲ್ಲಾ ಗೊಂದಲಗಳು ನಿವಾರಣೆಗಾಗಿ ಅದೇ ಜಾಗದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೊಂದಲ ನಿವಾರಣೆ ಮಾಡಬಹುದು ಎಂದು ಒಬ್ಬ ಕಾರ್ಕಳ ಕ್ಷೇತ್ರದ ಹಿತ ಚಿಂತಕನಾಗಿ ಉದಯ ಶೆಟ್ಟಿ ಮುನಿಯಾಲು, ರವರು ಸಲಹೆ ನೀಡಿದರೆ ತಪ್ಪೆ…?

ಪರಶುರಾಮ ಪ್ರತಿಮೆಯ ವಿಚಾರವಾಗಿ ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣಕರ್ತರೇ ಸುನೀಲ್ ಕುಮಾರ್. ತಾವು ಸರ್ಕಾರದ ಸಚಿವರಾಗಿದ್ದಾಗ ಚುನಾವಣೆ ಗೆಲ್ಲುವ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ಸರಕಾರದ ಹಣವನ್ನು ಪೋಲು ಮಾಡಿ ನಕಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಿ ಇಷ್ಟೆಲ್ಲಾ ಗೊಂದಲಕ್ಕೆ ಕಾರಣರಾಗಿದ್ದೀರಿ, ಈಗ ಹೇಳಿ ನಿಮ್ಮದೇನು ತಪ್ಪಿಲ್ಲವೇ..?

ಉಮಿಕಲ್ ಬೆಟ್ಟದ ಮೇಲಿನ ಸ್ಥಳ ಸಾನಿಧ್ಯದ ಶಕ್ತಿಗಳಿಂದ ಮುಂದೆ ಏನಾದರೂ ತೊಂದರೆ ಇದೆಯೇ?ಎಂಬುದನ್ನು ತಿಳಿಯಲು ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಬೇಕೆಂದು ಮಾನ್ಯ ಉದಯ ಕುಮಾರ್ ಶೆಟ್ಟಿಯವರು ಸ್ಥಳೀಯ ಜನರ ಅಭಿಪ್ರಾಯದಂತೆ ನೀಡಿದ ಸಲಹೆ ಆಗಿತ್ತೇ ವಿನಃ ಪರಶು ರಾಮ ಮೂರ್ತಿ ಪ್ರತಿಷ್ಟಾಪನೆಗೆ ಅಷ್ಟಮಂಗಲ ಪ್ರಶ್ನೆ ಇಡಬೇಕಾಗಿತ್ತು ಎಂಬುದಾಗಿ ಅಲ್ಲ!!! ಹೇಗೂ ಮುಂದೆ ಆ ಸ್ಥಳ ಜನರ ಭಾವನೆಗೆ ತಕ್ಕಂತೆ ಧಾರ್ಮಿಕ ಶ್ರದ್ದಾ ಕೇಂದ್ರವಾಗಿಯೋ, ಪ್ರವಾಸದ್ಯೋಮ ವಾಗಿಯೋ, ಆರ್ಥಿಕ ಚಟುವಟಿಕೆಯ ಕೇಂದ್ರವಾಗಿಯೋ,ಬೆಳೆಯ ಬೇಕೆನ್ನುವ ದೃಷ್ಠಿ ಕೋನದಿಂದ ಹಾಗೂ ಮಹಾ ವಿಷ್ಣುವಿನ ದಶವತಾರದಲ್ಲಿನ 6ನೇ ಅವತಾರವಾದ ಭಾರ್ಗವರ ಮೂರ್ತಿ ಆದುದರಿಂದ ಪೂರ್ಣವಾಗಿ ಅಲ್ಲದಿದ್ದರೂ ಅಂಶಿಕ ವಾಗಿಯಾದರು ದೇವತಾಂಶ ಇರುತ್ತದೆ ಎನ್ನುವ ನಂಬಿಕೆ ಯಿಂದ ಅವರು ಹೇಳಿದ್ದರಲ್ಲಿ ತಪ್ಪೇನು?

ಸತತವಾಗಿ ಕಾರ್ಕಳದ ಜನತೆ ನಿಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದ ತಪ್ಪಿಗೆ ನೀವು ಕಾರ್ಕಳದ ಜನತೆಗೆ ಕೊಟ್ಟ ಬಹುದೊಡ್ಡ ಕಾಣಿಕೆ ಎಂದರೆ ಪರಶುರಾಮರ ನಕಲಿ ಪ್ರತಿಮೆ, ನಿಮ್ಮ ಸ್ವಯಂಕೃತ ಅಪರಾಧದ ಕಾರಣ ನಿಮ್ಮ ಸ್ವಾರ್ಥ ರಾಜಕಾರಣದ ಪರಿಣಾಮ ಇಂದು ಪರಶುರಾಮ ಥೀಮ್ ಪಾರ್ಕ್ ಎನ್ನುವ ವಿವಾದವು ಬಹುದೊಡ್ಡ ಸ್ವರೂಪವನ್ನು ತಡೆದುಕೊಂಡು ಕಾರ್ಕಳದ ಗೌರವವನ್ನು ಕಳೆಯುತ್ತಿರುವುದನ್ನು ಮರೆಯದಿರಿ, ಇನ್ನಾದರೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿಗಾಗಿ, ಕಾರ್ಕಳದ ಗೌರವವನ್ನು ಎತ್ತಿ ಹಿಡಿಯಲು ಕಾರ್ಕಳದ ಜನತೆ ನೀಡುವ ಸಲಹೆಗಳನ್ನು ಗೌರವದಿಂದ ಸ್ವೀಕರಿಸಲು ಕಲಿಯಿರಿ, ಸರ್ವಾಧಿಕಾರಿ ಧೋರಣೆ ಕೈಬಿಟ್ಟು ಕ್ಷೇತ್ರದ ಜನರ ಭಾವನೆಗಳನ್ನು ವಿನೀತವಾಗಿ ಸ್ವೀಕರಿಸಲು ಕಲಿಯಿರಿ ಎಂದು ಕಾರ್ಕಳ ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶಶಿಧರ್ ಶಾಮ‌ ಹವಾಲ್ದಾರ್ ಬೆಟ್ಟು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ

0

ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ

‘ಶಿವನೇರಿ ಜನಕನ ಸಿಂಹಘಡದ ಚರಿತ್ರೆ’-ಗಿರೀಶ್ ರಾವ್ ಛತ್ರಪತಿ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮಹಾರಾಜರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಯ ಮೂಲಕ ಆಚರಿಸಲಾಯಿತು.ದೇವಸ್ಥಾನದ ಆಡಳಿತ ಮೊಕ್ತೆಸರರದ ಗಿರೀಶ್ ರಾವ್ ಇವರು ದೀಪ ಪ್ರಜ್ವಲಿಸಿ ಶಿವಾಜಿಯ ಶಿವನೇರಿ ಜನಕನ ಸಿಂಹಘಡದ ಚರಿತ್ರೆಯ ಬಗ್ಗೆ ಉಲ್ಲೇಖಿಸಿ ಉದ್ಘಾಟನಾ ಭಾಷಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೆಸರರಾದ ಗಣೇಶ್ ರಾವ್ ರಾಮಚಂದ್ರರಾವ್ ಸುಧೀಂದ್ರರಾವ್ ಉಪಸ್ಥಿತರಿದ್ದರು.

ಇರೋ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ರಾಜೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಶಾಂತಿ ವಂದಿಸಿದರು.

ಕಾರ್ಕಳ:ಕಾಂಗ್ರೆಸ್ ಬೂತ್ ಅದ್ಯಕ್ಷರುಗಳಿಗೆ ಅಭಿನಂದನೆ ಮತ್ತು ಕಾರ್ಯಾಗಾರ

0

ಕಾಂಗ್ರೆಸ್ ಬೂತ್ ಅದ್ಯಕ್ಷರುಗಳಿಗೆ ಅಭಿನಂದನೆ ಮತ್ತು ಕಾರ್ಯಾಗಾರ

ಕಾರ್ಕಳ ಬ್ಲಾಕ್ ವ್ಯಾಪಿಯ ನೂತನ ಬೂತ್ ಅದ್ಯಕ್ಷರುಗಳಿಗೆ ಅಭಿನಂದನೆ ಮತ್ತು ಕಾರ್ಯಗಾರ ಅದಿತ್ಯವಾರ ಸಂಜೆ ಪ್ರಕಾಶ್ ಹೋಟೇಲ್ ನಲ್ಲಿ ಜರುಗಿತು.

ಕಾರ್ಕಳ ಬ್ಲಾಕ್ ನೂತನ 150 ಬೂತ್ ಅದ್ಯಕ್ಷರುಗಳನ್ನು ಅಭಿನಂದಿಸಿ ಉದಯ್ ಶೆಟ್ಟಿ ಮಾತನಾಡಿ ಪಕ್ಷದ ಸಂಘಟನೆಯಲ್ಲಿ ಬೂತ್ ಅದ್ಯಕ್ಷರ ಪಾತ್ರ ಅತೀ ಪ್ರಮುಖವಾದದ್ದು, ಬೂತ್ ಅದ್ಯಕ್ಷರು ಸ್ಥಳಿಯ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಸೇವೆ ಸಲ್ಲಿಸಿದರೆ ಸಮಸ್ಯೆಗೆ ಪರಿಹಾರ ಸುಲಭ ಹಾಗೂ ಅದರ ಪರಿಣಾಮ ಪಕ್ಷ ಸಂಘಟನೆಗೆ ಪೂರಕವಾಗುತ್ತದೆ ಎಂದರು.

ಅದ್ಯಕ್ಷತೆ ವಹಿಸಿದ್ದ ಬ್ಲಾಕ್ ಅದ್ಯಕ್ಷ ಶುಭದರಾವ್ ಮಾತನಾಡಿ ಈ ದೇಶದ ಇತಿಹಾಸ ಮತ್ತು ಕಾಂಗ್ರೆಸ್ ಇತಿಹಾಸ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅಂತಹ ಪಕ್ಷದ ಪದಾಧಿಕಾರಿಗಳಾಗಿರುವುದು ನಮ್ಮೆಲ್ಲರ ಪುಣ್ಯ, ಸಿಕ್ಕಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಪಕ್ಷದ ಬಲವರ್ಧನೆಗೆ ಸಂಪೂರ್ಣ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಹಿರಿಯ ನ್ಯಾಯವಾದಿ ಶೇಖರ್ ಮಡಿವಾಳ್ ಮಾತನಾಡಿ ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯಾವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸ ತಂದಿದೆ, ಪಕ್ಷ ಸಂಘಟನೆಯಲ್ಲಿ ಯುವ ಕಾಂಗ್ರೆಸ್ ಪಾತ್ರ ಅತ್ಯಂತ ಮಹತ್ವದ್ದು ಹಾಗಾಗಿ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಈ ಅಂಶವನ್ನು ಅರಿತುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ನಾಯಕರಿಂದ ಕಾಂಗ್ರೆಸ್ ಪಕ್ಷದ ಚಿಹ್ನೆಯುಳ್ಳ ಸಮವಸ್ತ್ರವನ್ನು ಬಿಡುಗಡೆಗೊಳಿಸಿ ಬೂತ್ ಅದ್ಯಕ್ಷರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ನೂತನ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್ ಶೆಟ್ಟಿ ನಕ್ರೆ, ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಲಿಕ್ ಅತ್ತೂರು, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾಜೇಂದ್ರ ದೇವಾಡಿಗ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ರೀನಾ ಡಿಸೋಜ, ಹಿಂದುಳಿದ ಘಟಕದ ಅದ್ಯಕ್ಷ ಅನಿಲ್ ನೆಲ್ಲಿಗುಡ್ಡೆ, ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ಶಬ್ಬೀರ್, ಕಾನೂನು ಘಟಕದ ಅದ್ಯಕ್ಷ ರೆಹಮ್ಮತ್ತುಲ್ಲಾ ಉಪಸ್ಥಿತರಿದ್ದರು.

ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಭಾನು ಭಾಸ್ಕರ್ ಪೂಜಾರಿ ವಂದನಾರ್ಪಣೆಗೈದರು, ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.

 

ನಿಟ್ಟೆ:ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಉಚಿತ ಕ್ರೀಡಾ ತರಬೇತಿ ಹಾಗೂ ಶಿಕ್ಷಣದ ಅವಕಾಶ

0

ನಿಟ್ಟೆ:ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಉಚಿತ ಕ್ರೀಡಾ ತರಬೇತಿ ಹಾಗೂ ಶಿಕ್ಷಣದ ಅವಕಾಶ

ನಿಟ್ಟೆ:2025-2026ನೇ ಶೈಕ್ಷಣಿಕ ಸಾಲಿನಲ್ಲಿ ಪ್ರೌಢಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ಹಾಗೂ ಪದವಿಪೂರ್ವ ವಿದ್ಯಾಭ್ಯಾಸವನ್ನು ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಕ್ರೀಡಾಕ್ಷೇತ್ರದೊಂದಿಗೆ ಉಚಿತವಾಗಿ ಪಡೆಯಬಯಸುವ ಪ್ರತಿಭಾನ್ವಿತ ಕ್ರೀಡಾಪಟುಗಳು ತಮ್ಮ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಬಾಸ್ಕೆಟ್‌ಬಾಲ್, ವಾಲಿಬಾಲ್, ಪುಟ್‌ಬಾಲ್, ಕ್ರಿಕೆಟ್, ವೈಟ್‌ಲಿಫ್ಟಿಂಗ್, ಹಾಕಿ ಮತ್ತು ಅಥ್ಲೆಟಿಕ್ಸ್ಗಳಲ್ಲಿ ವಿಶೇಷ ಸಾಧನೆ ಮಾಡಿದ ತಮ್ಮ ವಿವರಗಳನ್ನು ಪ್ರಮಾಣಪತ್ರದ ಪ್ರತಿಗಳೊಂದಿಗೆ ಕೆಳಕಂಡ ವಿಳಾಸಕ್ಕೆ ಫೆ. 28ರ ಒಳಗಾಗಿ ಕಳುಹಿಸಲು ಕೋರಲಾಗಿದೆ.
The Director
Campus Maintenance & Development
Nitte off Campus Centre, Nitte

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9482132079/ 9964319830

 

ಜ್ಞಾನಸುಧಾ:ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ಜ್ಞಾನಸುಧಾ:ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

3.075ಲಕ್ಷ ರೂಪಾಯಿ ಪ್ರೋತ್ಸಾಹ ಧನ ವಿತರಣೆ

ನಾಲ್ವರು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂಪಾಯಿ ನಗದು ಪುರಸ್ಕಾರ
ಕಾರ್ಕಳ: ತಂದೆ-ತಾಯಿ-ಗುರುಗಳಿಗೆ ವಂದಿಸಿ ಪಡೆದ ವಿದ್ಯೆಯು ವಿದ್ಯಾರ್ಥಿಯ ಸಾಧನೆಗೆ ಕಾರಣವಾಗುತ್ತದೆ. ಸಂಕಲ್ಪ ಶುದ್ಧದಿಂದ ಇಟ್ಟಹೆಜ್ಜೆಯು ಯಶಸ್ಸನ್ನೇ ತಂದುಕೊಡುತ್ತದೆ. ಯಶಸ್ವಿ ಬದುಕಿನ ಸಾರ್ಥಕತೆ ಪೋಷಕರದಾಗುತ್ತದೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹೇಳಿದರು.

ಅವರು ರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿAಗ್ ಪ್ರವೇಶಕ್ಕೆ ಎನ್.ಟಿ.ಎ ನಡೆಸಿದ ಪ್ರಥಮ ಹಂತದ ಜೆ.ಇ.ಇ ಮೈನ್ ಫಲಿತಾಂಶದಲ್ಲಿ 97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 47 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಸಾಧಕರಿಗೆ ಸನ್ಮಾನ ಹಾಗೂ ನಗದು ಪುರಸ್ಕಾರ
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 99.6ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ಧನುಶ್ ನಾಯಕ್, ತರುಣ್ ಎ. ಸುರಾನ, ಚಿಂತನ್ ಜೆ. ಎಂ ಮತ್ತು ಆಕಾಶ್ ಎಚ್ ಪ್ರಭು ಇವರಿಗೆ ತಲಾ 50 ಸಾವಿರ ರೂಪಾಯಿಯನ್ನು, 99ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಹೃತ್ವಿಕ್ ಶೆಟ್ಟಿ, ಮನೋಜ್ ಕಾಮತ್, ವೇದಾಂತ್ ಶೆಟ್ಟಿ ಮತ್ತು ಸತೀಶ್ ಎಸ್.ಕೆ. ಇವರಿಗೆ ತಲಾ 20 ಸಾವಿರ ರೂಪಾಯಿ ನೀಡಿ ಗೌರವಿಸಲಾಯಿತು.

98ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ಪ್ರೇರಣ್ ಕೆ..ಎ, ವಿಷ್ಣು ಧರ್ಮ ಪ್ರಕಾಶ್, ಸನತ್.ವಿ..ರಾವ್, ಅಪೂರ್ವ್ ವಿ.ಕುಮಾರ್, ಚಿರಾಗ್ ಆರ್ ಶೆರಿಗಾರ್, ಮನೋಜ್ ಎಸ್.ಎ, ಅಮರ್ಥ್ಯ ಭಟ್, ಅಮೋಘ್ ಎ, ಸರ್ವಜಿತ್ ಕೆ.ಆರ್. ಅದ್ವೆöÊತ್ ಬೀಡು, ಆದಿತ್ಯ ಕೃಷ್ಣ ಟಿ., ಸೃಷ್ಠಿ, ಸಿದ್ಧಾರ್ಥ್ ಎ, ಅಭಿರಾಮ್ ತೇಜ ಪಿ, ಆದಿತ್ಯ ಅಡಿಗ, ಹರ್ಷಿತ್, ಮಯೂರ್ ಎಂ ಗೌಡ.,
97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಶ್ರೀಹರಿ ಎಸ್.ಜಿ.ಯವ ತನ್ಮಯ್ ಜಿ.ಎಸ್, ಆಕಾಶ್ ಡಿ, ಸನಿಹ ದೇವಾಡಿಗ, ವಿಷ್ಣು ಜಿ.ನಾಯಕ್, ಪ್ರಣೀತ್ ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್, ನಿರಂಜನ್ ಎಂ. ಕೆ, ಶ್ರಾವ್ಯ, ಪ್ರತೀಕ್ ನಾಯಕ್, ವೈಷ್ಣವಿ ಶೆಟ್ಟಿ, ನಿಹಾರ್ ಜೆ. ಎಸ್, ಗೌರವ್ ಎನ್, ಹರ್ಷಾ ಯು ಪೂಜಾರಿ, ಚಿರಾಗ್ ಶೆಟ್ಟಿ ಬಿ, ವಿನುತ್ ನಾಯ್ಕವಾಡಿ, ಚೈತನ್ಯ ಎನ್. ಭಟ್, ರಕ್ಷಿತ್, ಉತ್ಸವ್ ಸಿ. ಪಟೇಲ್, ರಿಯಾ ರೀಶಾಲ್ ಡಿಸೋಜ, ವರುಣ್ ಪ್ರಭು ಮತ್ತು ದ್ರುವ ಗಂಗಾಧರ್ ವಾಲಿ ಇವರನ್ನು ತಲಾ ಒಂದು ಸಾವಿರ ನಗದು ನೀಡಿ ಸನ್ಮಾನಿಸಲಾಯಿತು.

ಜೆ.ಇ.ಇ ಮೈನ್ ಮೊದಲ ಹಂತದ ಪರೀಕ್ಷಾ ಫಲಿತಾಂಶದಲ್ಲಿ ಜ್ಞಾನಸುಧಾದ ೪ ವಿದ್ಯಾರ್ಥಿಗಳು 99.6ಕ್ಕೂ ಅಧಿಕ ಪರ್ಸಂಟೈಲ್, 8 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸಂಟೈಲ್, 25 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿ೦ತ ಅಧಿಕ, 47 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿ೦ತ ಅಧಿಕ, 98 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್, 194 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.

ವೇದಿಕೆಯಲ್ಲಿ ಎ.ಪಿ.ಜಿ.ಇ.ಟಿ. ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ.ಕೊಡವೂರ್, ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಶ್ರೀ ಸಂತೋಷ್, ಕಾರ್ಕಳ ಜ್ಞಾನಸುಧಾ ಪ.ಪೂ. ಉಪಪ್ರಾಂಶುಪಾಲರುಗಳಾದ ಸಾಹಿತ್ಯ, ಶ್ರೀಮತಿ ಉಷಾ ರಾವ್ ಯು, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ., ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಹಾರಗಳ ಡೀನ್ ಡಾ.ಮಿಥುನ್ ಯು, ಡೀನ್ ಸ್ಟೂಡೆಂಟ್ಸ್ ಅಫೈರ್ ಶ್ರೀಮತಿ ಶಕುಂತಲಾ ಎಂ ಸುವರ್ಣ, ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಮುಖ್ಯ ಸಂಯೋಜಕ ಹಾಗೂ ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಗಣಿತಶಾಸ್ತç ವಿಭಾಗದ ಮುಖ್ಯಸ್ಥ ಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಹಸಂಯೋಜಕ ಶ್ರೀ ಪ್ರವೀಣ್ ಜಾನ್ ಡಿ. ಅಲ್ಮೆಡಾ, ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥ ಶ್ರೀನಿಧಿ ಭಾಗವತ್, ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಜ್ಞಾನಗೋಪಾಲ ವಿದ್ಯಾರ್ಥಿನಿಲಯದ ಮುಖ್ಯ ನಿಲಯಪಾಲಕ ಶ್ರೀ ಮಂಜುನಾಥ ಮುದ್ರಾಡಿ, ಜೀವಶಾಸ್ತç ವಿಭಾಗದ ಮುಖ್ಯಸ್ಥೆ ಶ್ರೀಮತಿ ಜೂಲಿಯೆಟ್ ಬಬಿತಾ ಕ್ವಾಡ್ರಸ್, ಜ್ಞಾನಪದ್ಮ ವಿದ್ಯಾರ್ಥಿ ನಿಲಯದ ಮುಖ್ಯ ನಿಲಯಪಾಲಕಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ, ಹಿತೈಶಿ ತ್ರಿವಿಕ್ರಮ ಕಿಣಿ ಉಪಸ್ಥಿತರಿದ್ದರು.

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಕಾರ್ಕಳ:ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಮುಷ್ಕರಕ್ಕೆ ಕಾರ್ಕಳ ಬಿಜೆಪಿ ಮಂಡಲದ ಬೆಂಬಲ

0

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಮುಷ್ಕರಕ್ಕೆ ಕಾರ್ಕಳ ಬಿಜೆಪಿ ಮಂಡಲದ ಬೆಂಬಲ

ಕಾರ್ಕಳ:ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಸಂಘದ ವತಿಯಿಂದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ಕಾರ್ಕಳ ಬಿಜೆಪಿ ಮಂಡಲ ವತಿಯಿಂದ ಬೆಂಬಲ ಸೂಚಿಸಲಾಯಿತು.

ಇಂದು ಕಾರ್ಕಳ ತಾಲೂಕು ಕಚೇರಿಯ ಎದುರು ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಕಾರ್ಕಳ ಬಿಜೆಪಿ ಮಂಡಲ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ನೇತೃತ್ವದ ಬಿಜೆಪಿ ನಿಯೋಗವು ಭೇಟಿ ನೀಡಿ ಅವರ ಅಹವಾಲು ಹಾಗೂ ಮನವಿಯನ್ನು ಸ್ವೀಕರಿಸಿದರು. ಗ್ರಾಮ ಆಡಳಿತ ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಆಗ್ರಹಿಸುವುದಾಗಿ ಹಾಗೂ ಕಾರ್ಕಳ ಕ್ಷೇತ್ರದ ಶಾಸಕರ ವಿ.ಸುನಿಲ್ ಕುಮಾರ್ ಅವರ ಮುಖಾಂತರ ಮುಂದಿನ ಬಜೆಟ್ ಅಧಿವೇಶನದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳ ಕುರಿತು ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಹುಟ್ಟಿನಿಂದ ಮರಣದ ತನಕ ಪ್ರತಿಯೊಂದು ಹಂತದಲ್ಲಿಯೂ, ಸರಕಾರದ ಯೋಜನೆಗಳನ್ನು ಸಕಾಲದಲ್ಲಿ ಅರ್ಹರಿಗೆ ತಲುಪಿಸುವ ವಿಷಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಕರ್ತವ್ಯವು ಬಹಳ ದೊಡ್ಡ ಪ್ರಮಾಣದಲ್ಲಿದ್ದು ಗ್ರಾಮಮಟ್ಟದಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳ ಕುರಿತು ಸರ್ಕಾರ ಆದಷ್ಟು ಶೀಘ್ರವಾಗಿ ಗಮನಹರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷರಾದ ನವೀನ್‌ ನಾಯಕ್‌, ಜಿಲ್ಲಾ ಉಪಾಧ್ಯಕ್ಷರಾದ ಜಯರಾಮ್‌ ಸಾಲ್ಯಾನ್‌, ಉದಯ್‌ ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ್‌ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬೋಳ ಸತೀಶ್‌ ಪೂಜಾರಿ, ಕಾರ್ಯದರ್ಶಿಗಳಾದ ಪ್ರವೀಣ್‌ ಸಾಲ್ಯಾನ್‌, ಪುರಸಭಾ ಅಧ್ಯಕ್ಷರಾದ ಯೋಗೀಶ್‌ ದೇವಾಡಿಗ, ಪುರಸಭಾ ಸದಸ್ಯರಾದ ಪಲ್ಲವಿ, ಉಪಾಧ್ಯಕ್ಷರಾದ ಪ್ರಶಾಂತ್‌ ಕೋಟ್ಯಾನ್‌, ನಗರಾಧ್ಯಕ್ಷರಾದ ನಿರಂಜನ್‌ ಜೈನ್‌, ಸೋಜನ್‌ ಪಿ.ಜೇಮ್ಸ್‌, ಸೂರ್ಯಕಾಂತ್‌ ಶೆಟ್ಟಿ, ಮೋಹನ್‌ ಶೆಟ್ಟಿ, ಪ್ರದೀಪ್‌ ರಾಣೆ, ಮೋಹನ್‌ ಶೆಟ್ಟಿ ಬೋಳ, ಕಿರಣ್‌ ಶೆಟ್ಟಿ ಬೋಳ, ಸುರೇಶ್‌ ಅತ್ತೂರು ಉಪಸ್ಥಿತರಿದ್ದರು.

 

ಕಾರ್ಕಳ:ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಿಯೋಗ ಬೇಟಿ

0

ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಿಯೋಗ ಬೇಟಿ

ಕಾರ್ಕಳ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಿಯೋಗ ಬೇಟಿ‌ ನೀಡಿ ಮನವಿಯನ್ನು ಸ್ವೀಕರಿಸಿದರು.‌

ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭದರಾವ್ ಅವರ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರ ಮತ್ತು ಕಾಂಗ್ರೆಸ್ ನಾಯಕರ ಗಮನಕ್ಕೆ ತಂದು ಈಡೇರಿಸುವಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಭೂ ನ್ಯಾಯ‌ ಮಂಡಳಿಯ ಸದಸ್ಯ ಸುನೀಲ್ ಭಂಡಾರಿ, ಕಾನೂನು ಘಟಕದ ಅದ್ಯಕ್ಷ ರೆಹಮತ್ತುಲ್ಲಾ, ದೀಪಕ್ ಶೆಟ್ಟಿ, ಮಂಜುನಾಥ್ ಜೋಗಿ ಉಪಸ್ಥಿತರಿದ್ದರು.

ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಜೋಗಿ

0

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಜೋಗಿ ಆನೆಕೆರೆ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಆಚಾರ್ಯ ಇನ್ನಾ ಆಯ್ಕೆ

0

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಆಚಾರ್ಯ ಇನ್ನಾ ಆಯ್ಕೆ
ರಾಜ್ಯ ಯುವ ಕಾಂಗ್ರೇಸ್ ನ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಯೋಗೀಶ್ ಆಚಾರ್ಯ ಇನ್ನಾ ಕಾರ್ಕಳ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ 4 ವರ್ಷಗಳಿಂದ ಕಾರ್ಯನಿರ್ವಹಿಸಿದ್ದರು