Home Blog Page 15

ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಕಾರ್ಯಾಗಾರ

0

 

ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅರ್ಥಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 28 ರಂದು ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು.

ಕಾರ್ಯಗಾರದ ಉದ್ಘಾಟನೆಯನ್ನು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ಕಾರ್ಕಳದ ಉದ್ಯಮಿ ಸೂರಜ್ ಶೆಟ್ಟಿ ನೆರವೇರಿಸಿ ಉದ್ಘಾಟನಾ ಮಾತುಗಳನ್ನಾಡುತ್ತ ” ಮನೆ ಬಜೆಟ್ ನಿಂದ ಹಿಡಿದು ರಾಷ್ಟ್ರದ ಬಜೆಟ್ ತನಕ ಎಲ್ಲದರ ಹಿಂದೆ ಅರ್ಥಶಾಸ್ತ್ರದ ತತ್ವಗಳು ಕಾರ್ಯನಿರ್ವಹಿಸುತ್ತವೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಶ್ಲೇಷಣಾ ಕೌಶಲ್ಯ, ಆರ್ಥಿಕ ತರ್ಕ ಮತ್ತು ನಿರ್ಣಾಯಕತೆ ಅಗತ್ಯ ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಮಾರುತಿ ರವರು ” ಅರ್ಥಶಾಸ್ತ್ರ ಮತ್ತು ಆರ್ಥಿಕತೆ ಎಂದರೆ ಕೇವಲ ಹಣದ ಚಲಾವಣೆ ಅಲ್ಲ, ಅದು ನಮ್ಮ ಆಯ್ಕೆಗಳು, ಆದ್ಯತೆಗಳು ಮತ್ತು ಜೀವನ ಪಾಠಗಳ ಚಿಹ್ನೆಯಾಗಿದೆ ” ಎಂದು ಹೇಳುತ್ತಾ ಜಾಗತಿಕ ಆರ್ಥಿಕತೆಯ ಪ್ರವಾಹದಲ್ಲಿ ಹೇಗೆ ಸಮತೋಲನ ವಹಿಸಬೇಕು ಎಂದು ತಿಳಿಸಿದರು.

ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರೂ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ಅರ್ಥಶಾಸ್ತ್ರದ ಮಹತ್ವ, ಅದರ ಪ್ರಾಯೋಗಿಕ ಬಳಕೆ ಹಾಗೂ ಅರ್ಥಶಾಸ್ತ್ರವನ್ನು ವೃತ್ತಿಯಾಗಿ ಹೇಗೆ ಆಚರಿಸಬಹುದು ಎಂಬುದರ ಕುರಿತು ಮಾತುಗಳನ್ನಾಡಿದರು.

ಕಾರ್ಯಗಾರದಲ್ಲಿ 2025 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಲ್ಲದೆ 2025 ನೇ ಸಾಲಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಶೇ. 100 ಫಲಿತಾಂಶ ಸಾಧಿಸಿದ ಕಾಲೇಜುಗಳ ಉಪನ್ಯಾಸಕರನ್ನು ಪುರಸ್ಕರಿಸಿ ಗೌರವಿಸಲಾಯಿತು.

2025 ರಲ್ಲಿ ಅರ್ಥಶಾಸ್ತ್ರ ವಿಷಯದಿಂದ ಪ್ರಾಂಶುಪಾಲರಾಗಿ ಮುಂಬಡ್ತಿ ಹೊಂದಿದ ವಿನ್ಸೆಂಟ್ ವಿನೋದ್ ಡಿಸೋಜಾ, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ಬೆಳ್ಮಣ್ಣು ಇವರನ್ನು ಅಭಿನಂದಿಸಲಾಯಿತು.

2025 ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಗೋಪಾಲ್ ಭಟ್, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿ ಮತ್ತು ನಾಗರಾಜ್ ವೈದ್ಯ, ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಗೋಳಿಯಂಗಡಿ.ಇವರನ್ನು ಸನ್ಮಾನಿಸಲಾಯಿತು.

ಕಾರ್ಯಗಾರದಲ್ಲಿ ಪೂರ್ವಾಹ್ನ “ಎರಡನೇ ವರ್ಷದ ಅರ್ಥಶಾಸ್ತ್ರದಲ್ಲಿ ಗಣಿತದ ಸಮಸ್ಯೆಗಳಿಗೆ ಪರಿಹಾರ ” ಎಂಬ ವಿಚಾರದ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದ ಅರ್ಥಶಾಸ್ತ್ರ ಉಪನ್ಯಾಸಕರಾದ ದಿನಕರ ಶೆಟ್ಟಿ ಇವರು ವಿಚಾರ ಮಂಡಿಸಿದರು.

ಅಪರಾಹ್ನ ” ಹೊಸ ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆ ತಯಾರಿಕೆಗೆ ಸಂಬಂಧಿಸಿದ ಮಾಹಿತಿಗಳು ” ಎಂಬ ವಿಚಾರದ ಕುರಿತು ಸರ್ಕಾರಿ ಸ್ವತಂತ್ರ ಪಿ.ಯು. ಕಾಲೇಜು, ಹಾಸನದ ಅರ್ಥಶಾಸ್ತ್ರ ಉಪನ್ಯಾಸಕರಾದ ಧರ್ಮೇಂದ್ರ ಬಿ.ಜಿ ಇವರು ವಿಚಾರ ಮಂಡಿಸಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಗಾರದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಮಂಡಳಿ, ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರು, ಕ್ರಿಯೇಟಿವ್ ಕಾಲೇಜಿನ ಬೋಧಕ- ಬೋಧಕೇತರವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷೆ ಅನುರಾಧ. ಎಚ್. ರವರು ಸ್ವಾಗತಿಸಿ, ಉಪನ್ಯಾಸಕಿ ಜ್ಯೋತಿ ಕೊಲ್ಲೂರು ರವರು ವಂದಿಸಿದರು. ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಕ್ಷಯ ಹೆಗ್ಡೆ ಮೊಳಹಳ್ಳಿ ರವರು ಕಾರ್ಯಕ್ರಮ ನಿರ್ವಹಿಸಿದರು.

ಪರಶುರಾಮನ ಪ್ರತಿಮೆ ಕಂಚಿನದ್ದು ಅಲ್ಲ ಎಂದು ಸಾಬೀತಾದರೂ ಸಮರ್ಥನೆ ಧರ್ಮ ದ್ರೋಹಕ್ಕೆ ಸಮಾನ-ಶುಭದರಾವ್

0

 

ಧೈರ್ಯವಿದ್ದರೆ ಬೈಲೂರು ಮಾರಿಗುಡಿಯಲ್ಲಿ ಪ್ರಮಾಣಿಸಲಿ ನಾವು ಸಿದ್ದ

ಅರೋಪ ಪ್ರತ್ಯಾರೋಪದ ಹೇಳಿಕೆಗಳು ಇಂದೇ ಕೊನೆಯಾಗಲಿ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ‌ ಶುಭದರಾವ್ ಸವಾಲು

ಪರಶುರಾಮನ ಪ್ರತಿಮೆ‌ ಕಂಚಿನಿಂದ ನಿರ್ಮಾಣ ಮಾಡದೆ ವಂಚಿಸಲಾಗಿದೆ, ಅದರ ಅರ್ಧ ಮೇಲ್ಭಾಗ ನಾಲ್ಕು ತಿಂಗಳ ಕಾಲ ಬೇರೆ ಸ್ಥಳದಲ್ಲಿ ಅಡಗಿಸಿಟ್ಟು ಓಳಸಂಚು ರೂಪಿಸಲಾಗಿತ್ತು ಎಂದು ವಂಚನೆ, ನಂಬಿಕೆ ದ್ರೋಹ, ಒಳಸಂಚು ಹಾಗೂ ಸಾಕ್ಷಿನಾಶ ಎಂಬ ಗಂಬೀರ ಆರೋಪ ಹೋರಿಸಿ ಪೋಲೀಸರು ನ್ಯಾಯಾಲಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರಿಂದ ಪ್ರತಿಮೆಯ ನೈಜ್ಯತೆಯ ಬಗ್ಗೆ ಇರುವ ಗೊಂದಲಕ್ಕೆ ಸಾಕ್ಷೀ ಸಹಿತವಾದ ಉತ್ತರ ಸಿಕ್ಕಿದೆ. ಆದರೆ, ಬಿಜೆಪಿ ಕೆಲ ನಾಯಕರು ಇನ್ನೂ ಸಮರ್ಥನೆ ಮಾಡುತ್ತಿದ್ದು ಇದು ಧರ್ಮ ದ್ರೋಹದ ಕೆಲಸವಾಗಿದೆ ಅವರಿಗೆ ಇನ್ನೂ ಮಾನ ಉಳಿದಿದ್ದರೆ ಬೈಲೂರಿನ ಮಾರಿಗುಡಿಗೆ ಬಂದು ಪ್ರಮಾಣಿಸಲಿ ನಾವೂ ಸಿದ್ದರಿದ್ದೇವೆ ಎಂದು ಶುಭದರಾವ್ ಸವಾಲು ಹಾಕಿದ್ದಾರೆ.

ಪ್ರತಿಮೆ ಕಂಚಿನಿಂದಲೇ ಮಾಡಿದ್ದರೆ ವಂಚನೆ, ನಂಬಿಕೆ ದ್ರೋಹ, ಒಳಸಂಚು, ಮತ್ತು ಸಾಕ್ಷಿ ನಾಶದಂತಹ ಗಂಬೀರ ಆರೋಪಗಳು ಯಾಕೆ ಬರುತ್ತಿದ್ದವು? ಕೇವಲ ಒಂದು ಕಂಚಿನ ಪ್ರತಿಮೆ ನಿರ್ಮಾಣವಾಗಿದ್ದರೆ ಬೆಟ್ಟದ ಮೇಲೊಂದು ಠಾಣೆಯಲ್ಲಿ ಮತ್ತೊಂದು ಇರಲು ಹೇಗೆ ಸಾದ್ಯ? ಹಾಗೂ ಅದನ್ನು ಕಂಚಿನಿಂದಲೇ ಮಾಡಿದ್ದರೆ ರಾತ್ರಿ ಕಳ್ಳರ ಹಾಗೆ ಕೊಂಡೊಯ್ದು ನಾಲ್ಕು ತಿಂಗಳ ಕಾಲ ಅಡಗಿಸಿ ಇಡುವ ಅಗತ್ಯವಿತ್ತೇ ಎನ್ನುವ ಪ್ರಶ್ನೆಗೆ ಉತ್ತರವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಅಡಗಿಸಿ ಇಡಲಾಗಿದ್ದ ಪ್ರತಿಮೆಯ ಮೇಲಿನ ಅರ್ಧ ಭಾಗ ಯಾವುದರಿಂದ ಮಾಡಲಾಗಿತ್ತು ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಸಾಕ್ಷಿ ನಾಶವೆಂದರೆ ಆ ಅರ್ಧ ಭಾಗ ಏನು ಮಾಡಲಾಗಿದೆ ಎನ್ನುವ ಬಗ್ಗೆಯೇ ಅಲ್ಲವೇ? ಅದು ಪತ್ತೆಯಾದರೆ ಅದರ ಸತ್ಯಾಸತ್ಯತೆ ಇನ್ನೂ ಆಶ್ಚರ್ಯಕರವಾಗಿರಬೇಕಲ್ಲವೇ?

ರಾಜ್ಯದ ಮುಖ್ಯಮಂತ್ರಿಗಳು ಅಂದು ಉದ್ಘಾಟಿಸಿದ್ದ ಪ್ರತಿಮೆ ಕಂಚಿನದ್ದು ಆಗಿರಲೇ ಇಲ್ಲ ಎನ್ನುವುದು ನಮ್ಮ ಅರೋಪವಾಗಿತ್ತು. ಈಗ ಅದೇ ಸತ್ಯವಾಗಿದೆ. ಬಿಜೆಪಿಯ ನಾಯಕರು ಅನಾವಶ್ಯಕ ಹೇಳಿಕೆಗಳನ್ನು ಕೊಡುವ ಬದಲು ಪ್ರತಿಮೆ ಕಂಚಿನದ್ದೇ ಎಂದು ದೃಡ ನಂಬಿಕೆ ಮತ್ತು ಧೈರ್ಯವಿದ್ದರೆ ಬೈಲೂರು ಮಾರಿಗುಡಿಗೆ ಬಂದು ಪ್ರಮಾಣಿಸಲಿ ನಾವು ಸಿದ್ದರಿದ್ದೇವೆ. ಪ್ರತಿಮೆ ಕಂಚಿನದ್ದು ಅಲ್ಲ ಪೈಬರ್ ಬಳಸಲಾಗಿತ್ತು ಎಂದು ನಾವು ಹೇಳಲು ಸಿದ್ದ. ಪ್ರತಿಮೆ‌ ಕಂಚಿನಿಂದಲೇ ಮಾಡಲಾಗಿತ್ತು ಪೈಬರ್ ಬಳಸಿಲ್ಲ ಎಂದು ದೇವರ ಮುಂದೆ ಹೇಳಲು ನೀವು ಸಿದ್ದರಿದ್ದೀರಾ? ಎಂದು ಸವಾಲು ಹಾಕಿದ್ದಾರೆ. ಎರಡು ವರ್ಷದಲ್ಲಿ ಪ್ರತಿಮೆ‌ ಕಂಚಿನದ್ದು ಅಲ್ಲವೆಂದು ಜಗತ್ತಿಗೆ ತಿಳಿಯಿತು. ಇನ್ನೂ ಸ್ವಲ ದಿನದಲ್ಲಿ ಉಳಿದ ಅರ್ಧ ಕಾಣೆಯಾದ ಪ್ರತಿಮೆ ಪೈಬರ್ ನಿಂದಲೇ ಮಾಡಲಾಗಿತ್ತು ಎನ್ನುವುದೂ ಸಾಬಿತ್ತಾಗುತ್ತದೆ ಎಂದರು. ಕಾರ್ಯಕರ್ತರ ಸಮಾದಾನಕ್ಕೆ ನೀಡುವ ಹೇಳಿಕೆಗಳಿಂದ ಸತ್ಯ ಬದಲಾಗುವುದಿಲ್ಲ. ಆದರೆ, ಪ್ರಮಾಣದಿಂದ ಪ್ರತಿಮೆಯ ಬಗ್ಗೆ ಇರುವ ಅರೋಪ ಪ್ರತ್ಯಾರೋಪಗಳು ಇಂದೇ ಕೊನೆಯಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: 25ನೇ ವಾರ್ಷಿಕೋತ್ಸವ ಮತ್ತು 19ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಆಗಸ್ಟ್ ೨೫ರಂದು ಬುಧವಾರ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ಜರಗಲಿರುವ 25ನೇ ವರ್ಷದ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ವಾರ್ಷಿಕೋತ್ಸವ ಸಂಭ್ರಮ ಮತ್ತು 19ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸರಬೈಲು, ಕಾರ್ಯದರ್ಶಿ ಯೋಗೀಶ್ ಆಚಾರ್ಯ, ಅಬ್ಬನಡ್ಕ ಫ್ರಂಡ್ಸ್ ಕ್ಲಬ್‌ನ ಪೂರ್ವಾಧ್ಯಕ್ಷ ಆನಂದ ಪೂಜಾರಿ, ಸತೀಶ್ ಅಬ್ಬನಡ್ಕ, ಉದಯ ಅಂಚನ್, ಸದಸ್ಯರಾದ ಮಂಜುನಾಥ ಆಚಾರ್ಯ, ಹರೀಶ್ ಗೋಳಿಕಟ್ಟೆ, ಬಾಲಕೃಷ್ಣ ಮಡಿವಾಳ, ಸುರೇಶ್ ಅಬ್ಬನಡ್ಕ, ಸುದರ್ಶನ್ ಕುಂದರ್, ಕೀರ್ತನ್ ಬೋಳ, ಪ್ರದೀಪ್ ಸುವರ್ಣ, ಲೀಲಾ ಪೂಜಾರಿ, ಲಲಿತಾ ಆಚಾರ್ಯ, ವೀಣಾ ಪೂಜಾರಿ, ಅನ್ನಪೂರ್ಣ ಕಾಮತ್, ಪದ್ಮಶ್ರೀ ಪೂಜಾರಿ, ಸುಲೋಚನಾ ಕೋಟ್ಯಾನ್, ಪುಷ್ಪ ಕುಲಾಲ್, ಹರಿಣಾಕ್ಷಿ ಪೂಜಾರಿ, ಹರಿಣಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಈದು: ಅಪಘಾತ ಗಾಯಾಳು ಕುಟುಂಬಕ್ಕೆ 1.10 ಲಕ್ಷ ಧನ ಸಹಾಯ ಮಾಡಿದ ಪರಸ್ಪರ ಸೇವಾ ಬ್ರಿಗೇಡ್ ಸಂಸ್ಥೆ

0

 

ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗೈಗೊಂಡಿದ್ದ ಈದು ಗ್ರಾಮದ ಶ್ರವಣ್ ಪೂಜಾರಿ ಇವರಿಗೆ ಪರಸ್ಪರ ಸೇವಾ ಬ್ರಿಗೇಡ್ ಸಂಸ್ಥೆಯಿಂದ 1,10,032 ಧನ ಸಹಾಯ ಮಾಡಲಾಯಿತು.

ಕಾರ್ಕಳ ತಾಲೂಕಿನ ಈದು ಗ್ರಾಮದ ನಿವಾಸಿಗಳಾದ ಲತಾ ಹಾಗೂ ಸದಾನಂದ ಪೂಜಾರಿ ದಂಪತಿಯ ಏಕೈಕ ಪುತ್ರ ಶ್ರವಣ್ ಪೂಜಾರಿ ಇವರು, ಬಂಟ್ವಾಳದಲ್ಲಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಬೆಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಚಿಕಿತ್ಸೆಗೆ ಸುಮಾರು 5 ಲಕ್ಷಕ್ಕೂ ಅಧಿಕ ವೆಚ್ಚವಾಗಿದ್ದು, ಕುಟುಂಬದ ಆರ್ಥಿಕ ಪರಿಸ್ಥಿತಿ ಅತಿ ದುರ್ಬಲವಾಗಿದೆ. ಈ ವಿಷಯ ತಿಳಿದ ಪರಸ್ಪರ ಸೇವಾ ಬ್ರಿಗೇಡ್ ಸಂಸ್ಥೆಯು ಸುಮಾರು 1,10,032 ರೂಪಾಯಿಯನ್ನು ಊರಿನ ಪ್ರಮುಖರು ದಾನಿಗಳೊಂದಿಗೆ ಗಾಯಾಳುವಿನ ಕುಟುಂಬಕ್ಕೆ ಹಸ್ತಾಂತರಿಸಿತು.

ಮುಡಾರು: ಕಂಪ್ಯೂಟರ್ ಕಲಿಕಾ ತರಗತಿ ಉದ್ಘಾಟನೆ

0

 

ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆಗೈಯುತ್ತಿರುವ ಕಾರ್ಕಳದ ಲೆಕ್ಕಪರಿಶೋಧಕರಾದ ಕಮಲಾಕ್ಷ ಕಾಮತ್ ಇವರು ಪತ್ನಿ ಮೀರಾ .ಕೆ.ಕಾಮತ್ ಇವರ ಸ್ಮರಣಾರ್ಥ ಶಾಲೆಗೆ ಕಂಪ್ಯೂಟರ್ ಟೇಬಲ್ ಸಹಿತ ಐದು ಕಂಪ್ಯೂಟರ್ ಗಳ ಕೊಡುಗೆ ನೀಡಿದ್ದಾರೆ. ಇದರ ಕಂಪ್ಯೂಟರ್ ಕಲಿಕಾ ತರಗತಿ ಉದ್ಘಾಟನಾ ಕಾರ್ಯಕ್ರಮವು ಜು. 25 ರಂದು ನಡೆಯಿತು.

ಕಂಪ್ಯೂಟರ್ ಕಲಿಕಾ ತರಗತಿ ಉದ್ಘಾಟಿಸಿ, ಶಾಲಾ ಅಭಿನಂದನೆಯನ್ನು ಸ್ವೀಕರಿಸಿ, ಮಾತನಾಡಿದ ಕಮಲಾಕ್ಷ ಕಾಮತ್ ರವರು, ನಮ್ಮ ವ್ಯಕ್ತಿತ್ವ ನಮ್ಮ ಕೈಯಲ್ಲಿದೆ. ಕಂಪ್ಯೂಟರ್ ಅನ್ನು ಉತ್ತಮ ರೀತಿಯಲ್ಲಿ ಬಳಸಿ, ತಂತ್ರಜ್ಞಾನದ ಜ್ಞಾನ ಹೊಂದಬೇಕು. ಪ್ರತಿಭಾವಂತ ಮಕ್ಕಳಾಗಿ ಉತ್ತಮ ವ್ಯಕ್ತಿತ್ವ ಅಳವಡಿಸಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಕಾರ್ಕಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಎಸ್ ಗಿರಿಜಮ್ಮ ಇವರು ಮಾತನಾಡಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಪೋಷಕರು ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾ ಮಟ್ಟ ತಿಳಿದುಕೊಳ್ಳಬೇಕು. ಮಕ್ಕಳು ಮುಂದೊಂದು ದಿನ ಕಮಲಾಕ್ಷ ಕಾಮತ್ ರವರಂತೆ ಸಮಾಜದಲ್ಲಿ ಬೆಳೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ನಿವೃತ್ತ ಪ್ರಾಂಶುಪಾಲರು ಆದ ಶ್ರೀವರ್ಮ ಅಜ್ರಿ ಯವರು ಮಾತನಾಡಿ ಮಕ್ಕಳಲ್ಲಿ ನೈತಿಕತೆ ಬೆಳೆಯಬೇಕು, ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕು, ಕಂಪ್ಯೂಟರ್ ಗಳನ್ನು ಉತ್ತಮ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು, ಶಾಲೆಯು ಇಂದು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ತಿಳಿಸಿದರು.

ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗೋಪಾಲ್ ಪೂಜಾರಿ ಅವರು ಮಾತನಾಡಿ ಕಂಪ್ಯೂಟರ್ ಕೊಡುಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರುತಿ.ಡಿ.ಅತಿಕಾರಿ ಮಾತನಾಡಿ ಶಾಲೆಯ ಗುಣಮಟ್ಟ ಸುಧಾರಿಸುವ ಸಲುವಾಗಿ ಕಂಪ್ಯೂಟರ್ ಜ್ಞಾನ ಅಗತ್ಯ. ಅದಕ್ಕೆ ಈಗ ಅವಕಾಶ ದೊರಕಿದೆ. ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು . ಪ್ರಾಸ್ತಾವಿಕ ನುಡಿಗಳಲ್ಲಿ ಕಮಲಾಕ್ಷ ಕಾಮತ್ ಅವರ ಸಾಮಾಜಿಕ ಕಾರ್ಯಗಳ ಪರಿಚಯ ಅವರ ವ್ಯಕ್ತಿತ್ವ ಕಾಳಜಿಯ ಬಗ್ಗೆ ವಿಸ್ತಾರವಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಕೃಷ್ಣ ಮೊಯಿಲಿ ತಿಳಿಸಿದರು.

ಪಂಚಾಯತ್ ಸದಸ್ಯರಾದ ಶಿವಪ್ರಸಾದ್, ಲಕ್ಷ್ಮಿ, CRP ಯೋಗೀಶ್ ಕಿಣಿ ,BIERT ಜ್ಯೋತಿ ,ಎಸ್‌ಡಿಎಂಸಿ ಉಪಾಧ್ಯಕ್ಷೆ ವಾಣಿ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಜೈನ್ ,ಕಾರ್ಯದರ್ಶಿ ಭಾಸ್ಕರ್ ನಾಯಕ್ , ರಾಜೇಂದ್ರ ಜೈನ್, ಚಂದ್ರರಾಜ ಅಜ್ರಿ, ದಿವಾಕರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಜಯಾಕೃಷ್ಣ ಮೊಯಿಲಿ ಸ್ವಾಗತಿಸಿದರು. ಸಹ ಶಿಕ್ಷಕಿ ವೀಣಾ ಸರಸ್ವತಿ ಧನ್ಯವಾದವಿತ್ತರು. ಶಿಕ್ಷಕಿ ಲತಾ ಕಾರ್ಯಕ್ರಮ ನಿರೂಪಿಸಿದರು.

ಪುರಸಭಾ ವ್ಯಾಪ್ತಿಯ ರಸ್ತೆ ಹೊಂಡಗಳನ್ನು ತಕ್ಷಣ ಮುಚ್ಚಿ ಇಲ್ಲವಾದರೆ ಪ್ರತಿಭಟನೆ ಎದುರಿಸಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ

0

ಪುರಸಭಾ ವ್ಯಾಪ್ತಿಯ ರಸ್ತೆ ಹೊಂಡಗಳನ್ನು ತಕ್ಷಣ ಮುಚ್ಚಿ ಇಲ್ಲವಾದರೆ ಪ್ರತಿಭಟನೆ ಎದುರಿಸಿ
ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ

ಕಾರ್ಕಳ ಪುರಸಭಾ ವ್ಯಾಪ್ತಿಯ ರಸ್ತೆಗಳಲ್ಲಿ ಹೊಂಡಗಳೇ ತುಂಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ ಪುರಸಭಾ ಆಡಳಿತ ತಕ್ಷಣ ಎಲ್ಲಾ ಹೊಂಡಗಳನ್ನು ಮುಚ್ಚಬೇಕು ಇಲ್ಲವಾದರೆ ಸಾರ್ವಜನಿಕರ ಜೊತೆಗೂಡಿ ಮಾಡುವ ಪ್ರತಿಭಟನೆಯನ್ನು ಎದುರಿಸಬೇಕಾದಿತು ಎಂದು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ ಪುರಸಭೆಯನ್ನು ಎಚ್ಚರಿಸಿದ್ದಾರೆ.

ಪುರಸಭೆಯ ಪ್ರಮುಖ ರಸ್ತೆಗಳು ಹೊಂಡಗಳಿಂದ ತುಂಬಿದ್ದು ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದೆ ಪ್ರತಿನಿತ್ಯ ದ್ವಿಚಕ್ರ ವಾಹನಗಳ ಅಪಘಾತಗಳಾಗಿ ಸವಾರರು ರಸ್ತೆಗೆ ಬಿದ್ದು ದೈಹಿಕ ಹಾನಿಗೊಳಗಾಗಿದ್ದಾರೆ ಈ ಬಗ್ಗೆ ಎಷ್ಟೇ ‌ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಪುರಸಭೆಯ ಈ ನಿರ್ಲಕ್ಷ ಧೋರಣೆ ಸರಿಯಲ್ಲ ಎಂದಿದ್ದಾರೆ.

ರಥಬೀದಿ ಮತ್ತು ಅನೇಕ ಕಡೆಗಳಲ್ಲಿ ಒಳಚರಂಡಿಯ ಮಲ ಮೂತ್ರದ ನೀರು ರಸ್ತೆಯಲ್ಲಿ ಹರಿಯುತ್ತಿದೆ ಅದನ್ನೇ ತುಳಿದು ದೇವಸ್ಥಾನಕ್ಕೆ ಹೋಗಬೇಕಾದ ಅನಿವಾರ್ಯತೆ ಭಕ್ತರಿಗಾಗಿದೆ ಆದರೂ ಪುರಸಭೆಯ ಮೌನ ಆಶ್ಚರ್ಯ ತಂದಿದೆ ತಕ್ಷಣ ಈ ಬಗ್ಗೆ ಗಮನ ಹರಿಸಿ ಸೂಕ್ತಕ್ರಮ ಜರುಗಿಸಬೇಕು ಇಲ್ಲವಾದರೆ ಸಾರ್ವಜನಿಕರ ಜೊತೆಗೂಡಿ ಮಾಡುವ ಪ್ರತಿಭೆ ಎದುರಿಸಬೇಕಾದೀತು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಬೋಳ:ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಜೀವಬೆದರಿಕೆ

0

ಬೋಳ:ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಜೀವಬೆದರಿಕೆ

ಕಾರ್ಕಳ:ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಜೀವ ಬೆದರಿಕೆಯೊಡ್ಡಿದ ಘಟನೆ ಕಾರ್ಕಳ ತಾಲೂಕು ಬೋಳ ಗ್ರಾಮದಲ್ಲಿ ನಡೆದಿದೆ.

ಬೋಳ ಗ್ರಾಮದ ಗ್ರಾಮ ಪಂಚಾಯತ್ ಸಭೆಯಲ್ಲಿ ರಾಜ್ಯ ಸರ್ಕಾರ ನೀಡುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ ಬಿಜೆಪಿ ಪಂಚಾಯತ್ ಸದಸ್ಯರ ದುರ್ನಡತೆಯ ವಿರುದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಬೋಳ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಬೋಳ ಗ್ರಾಮ ಪಂಚಾಯತ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಸಭೆ ನಡೆದಿತ್ತು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೊನಾಲ್ಡ್‌ ಅಲ್ಪೋನ್ಸ್‌ (51) ಎಂಬುವವರಿಗೆ ಬಿಜೆಪಿ ಬೆಂಬಲಿತ ಬೋಳ ಗ್ರಾಮ ಪಂಚಾಯತ್‌ ಸದಸ್ಯ ಕಿರಣ್ ಎಂಬಾತ ಜೀವಬೆದರಿಕೆ ಒಡ್ಡಿದ್ದಾನೆ.ರೊನಾಲ್ಡ್‌ ಅಲ್ಪೋನ್ಸ್‌ ರವರ ಬೈಕ್ ಅಡ್ಡಕಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದ, ನಿಂದಿಸಿ ಜೀವ ಬೆದರಿಕೆ ಹಾಕಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೇಸಿಐ ಕಾರ್ಕಳದ ಲೇಡಿ ಜೆಸಿ ವಿಭಾಗಕ್ಕೆ ಆತಿ ಹೆಚ್ಚು ಪ್ರಶಸ್ತಿಯೊಂದಿಗೆ ಟಾಪ್ 1 ಲೇಡಿ ಜೆಸಿ ಔಸ್ಟ್ಯಾಂಡಿಂಗ್ ಪ್ರಶಸ್ತಿ

0

ಜೆಸಿಐ ಭಾರತ ವಲಯ 15ರ ಲೇಡಿ ಜೇಸಿ ಹಾಗೂ ಜೂನಿಯರ್ ಜೆಸಿ ಸಮ್ಮೇಳನ ಕುಂದಾಪುರ ಸಿಟಿಯ ಆತಿಥ್ಯದಲ್ಲಿ ಕುಂದಾಪುರದ ಸಹನ ಕನ್ವೆನ್ಷನ್ ಹಾಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳದ ಲೇಡಿ ಜೆಸಿ ವಿಭಾಗವು ಆತಿ ಹೆಚ್ಚು ಪ್ರಶಸ್ತಿಯೊಂದಿಗೆ ಟಾಪ್ 1 ಲೇಡಿ ಜೆಸಿ ಔಸ್ಟ್ಯಾಂಡಿಂಗ್ ಪ್ರಶಸ್ತಿಯನ್ನು ತನ್ನದಾಗಿಸಿದೆ ಅಲ್ಲದೆ ಜೂನಿಯರ್ ಜೆಸಿ ವಿಭಾಗದಲ್ಲಿ ಕೆಲವು ಪ್ರಶಸ್ತಿ ಮನ್ನಣೆಗಳನ್ನು ಪಡೆಯಿತು.

ಜೆಸಿಐ ಭಾರತ ವಲಯ 15ರ ಲೇಡಿ ಜೆಸಿ, ಮಹಿಳೆಯರಿಗಾಗಿ ಆಯೋಜಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ, ಪ್ರಾಯಸ್ ಡೇ, ಕಾರ್ಯಕ್ರಮವು ಪ್ರಥಮ ಸ್ಥಾನದೊಂದಿಗೆ ರಾಷ್ಟ್ರೀಯ ಮನ್ನಣೆಯನ್ನು ತನ್ನದಾಗಿಸುವುದರ ಜೊತೆಗೆ ಈ ಮಹಿಳಾ ಜೆಸಿ ಸಮ್ಮೇಳನ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಿದ ಪ್ಯಾಷನ್ ಸ್ಪರ್ಧೆಯಲ್ಲಿ ಜೆಸಿಐ ಕಾರ್ಕಳ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದೆ.

ಪ್ರಶಸ್ತಿ ಹಾಗೂ ಮನ್ನಣೆಗಳನ್ನು ವಲಯ ಅಧ್ಯಕ್ಷರಾದ ಜೆಸಿಐ ಸೆನೆಟರ್ ಅಭಿಲಾಶ್ ಬಿಎ ಇವರು ಲೇಡಿ ಜೇಸಿ ನಿರ್ದೇಶಕರಾದ ಜಯಶ್ರೀ ಮಿತ್ರ ಅವರ ಸಮ್ಮುಖದಲ್ಲಿ ಜೆಸಿಐ ಕಾರ್ಕಳ ಲೇಡಿ ಜೆಸಿ ನಿರ್ದೇಶಕಿ ಶಾಹಿನಾ ರಿಜ್ವಾನ್ ಖಾನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ಜೆಸಿ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್ ಮತ್ತು ವಲಯದ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರು ವಿಗ್ನೇಶ್ ಪ್ರಸಾದ್ ಜೆಸಿಐ ಕಾರ್ಕಳದ ಪೂರ್ವ ಅಧ್ಯಕ್ಷರು ಸಮದ್ ಖಾನ್, ದಿವ್ಯಾಸ್ಮಿತಾ ಭಟ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಉಡುಪಿ: ಸೌಹಾರ್ದ ಸಹಕಾರಿ ಚುನಾವಣೆ ನಡೆಸಲು ಲಂಚ ಪ್ರಕರಣ, ಇಬ್ಬರು ಸೆರೆ

0

ಸೌಹಾರ್ದ ಸಹಕಾರ ಸಂಘ ದ ಆಡಳಿತ ಮಂಡಳಿ ಚುನಾವಣೆ ಮಾಡಿ ಕೊಡಲು ಲಂಚ ಕೇಳುವ ವೇಳೆ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಉಡುಪಿ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿದ್ದಾರೆ.

ಉಡುಪಿ ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನ ಇಲಾಖೆ ಯ ಉಪ ನಿರ್ದೇಶಕಿ ರೇಣುಕಾ ಹಾಗೂ ಪ್ರಥಮ ದರ್ಜೆ ಸಹಾಯಕ ಜಯರಾಮ್ ಇಂದು (ಗುರುವಾರ) ತಲಾ 5000 ದಂತೆ ಒಟ್ಟು 10000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಾಂತಿನಿಕೇತನ ಸೌಹರ್ದ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ನರೇಂದ್ರ ಎಸ್ ದೂರಿನ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರರವರ ಮಾರ್ಗದರ್ಶನದ ತಂಡ ಭ್ರಷ್ಟ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಭ್ರಷ್ಟರನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಮಂಜುನಾಥ್ ಶಂಕರ ಹಳ್ಳಿ, ಪ್ರಭಾರ ಪೊಲೀಸ್ ಉಪಾಧೀಕ್ಷಕರು,ಪೊಲೀಸ್ ನಿರೀಕ್ಷಕರಾದ ರಾಜೇಂದ್ರ ನಾಯಕ್ ಎಂ, ಎನ್ ., ಮಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಚಂದ್ರ ಶೇಖರ, ಉಡುಪಿ ಲೋಕಾಯುಕ್ತ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರೋಹಿತ್, ಸತೀಶ್ ಹಂದಾಡಿ, ಮಲ್ಲಿಕಾ, ಪುಷ್ಪಾವತಿ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ರಮೇಶ್, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟೆ, ಸೂರಜ್,ಸುಧೀರ್ ಹಾಗೂ ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಹಕಾರಿ ರಂಗದಲ್ಲಿ ಸರ್ಕಾರಿ ಅಧಿಕಾರಿಗಳ ಅತಿಯಾದ ಭ್ರಷ್ಟಾಚಾರ -ಶಾಂತಿನಿಕೇತನ ಸೌಹಾರ್ದ ಸಹಕಾರಿ ಆಡಳಿತ ಮಂಡಳಿ ಹೇಳಿಕೆ

ಶಾಂತಿನಿಕೇತನ ಸೌಹರ್ದ ಸಹಕಾರಿ ಆಡಳಿತ ಮಂಡಳಿಯ ಸದಸ್ಯರು ಯಾವುದೇ ಸಂಭಾವನೆ ಪಡೆಯದೇ ಮತ್ತು ಸಿಬ್ಬಂದಿ ವರ್ಗ ಸಹಾ ಕಡಿಮೆ ಸಂಬಳಕ್ಕೆ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದು‌, ಸಹಕಾರಿ ಕ್ಷೇತ್ರದ ಮೂಲಕ ಜನಸಾಮಾನ್ಯರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶದಿಂದ ಈ ತಂಡ ಕಾರ್ಯನಿರ್ವಹಿಸುತ್ತಿದೆ. ಆದರೆ ಇಂತಯ ಭ್ರಷ್ಟ ವ್ಯವಸ್ಥೆ ನಮಗೆ ಅಪಾರ ನೋವು ಮತ್ತು ಬೇಸರ ಉಂಟು ಮಾಡಿದ್ದು ಅದನ್ನು ಸರಿ ಮಾಡುವುದೇ ನಮ್ಮ ತಂಡದ ಪ್ರಯತ್ನ.

ಶಾಂತಿನಿಕೇತನದ ಆಡಳಿತ ಮಂಡಳಿ ಈ ಭ್ರಷ್ಟಾಚಾರ ನಿರ್ಮೂಲನೆಗೆ ಸಂಪೂರ್ಣ ಸಹಕಾರ ನೀಡಿ ದಿಟ್ಟ ಹೆಜ್ಜೆ ತೆಗೆದುಕೊಂಡು ಸಿಬ್ಬಂದಿ ವರ್ಗಕ್ಕೆ ಸಂಪೂರ್ಣ ಸಹಕಾರ ನೀಡಲಾಗಿತ್ತು.

ನಿಟ್ಟೆ: ರೋಟರಿ ಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಜಿಲ್ಲಾ ಕಾರ್ಯಕ್ರಮ “ಹಸಿರೇ ಉಸಿರು”

0

 

ಜಿಲ್ಲಾ ಕಾರ್ಯಕ್ರಮವಾದ ಹಸಿರೇ ಉಸಿರು ಕಾರ್ಯಕ್ರಮದ ಅಡಿಯಲ್ಲಿ ಜು.೨೩ ರಂದು ನಿಟ್ಟೆ ರೋಟರಿ ಕ್ಲಬ್ ಪ್ರಾಯೋಜಿತ ಅಂಗ ಸಂಸ್ಥೆ ಇಂಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ Dr. ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪರಿಸರದ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ “ಪರಿಸರದ ಅಪಾಯ: ಪರಿಣಾಮಕಾರಿಯಾದ ತ್ಯಾಜ್ಯ ನಿರ್ವಹಣೆಯ ತುರ್ತು ಅಗತ್ಯತೆ ಮತ್ತು ಬದಲಾವಣೆಗೆ ಪ್ರೇರಕವಾಗಿ ವಿದ್ಯಾರ್ಥಿಗಳ ಪಾತ್ರ” ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು 43 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ವಿಜೇತರಿಗೆ ರೊ. ಡಾ. ರಘುನಂದನ್ ಪ್ರಶಸ್ತಿ ನೀಡಿ ಗೌರವಿಸಿದರು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇಂಟರಾಕ್ಟ್ ಕ್ಲಬ್ ನ ಮಕ್ಕಳಿಂದ ವಿವಿಧ ಬಗೆಗಳ ಹಣ್ಣು ಮತ್ತು ಗಿಡಮೂಲಿಕೆಯ ಸಸಿಗಳನ್ನು ನೆಡಲಾಯಿತು.

Dr. ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಾ ಪ್ರಭು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೊ. ವಿಷ್ಣುಮೂರ್ತಿ ಸರಳಾಯ, ವಲಯ ಸಂಯೋಜಕರು, ರೋಟರಿ ಜಿಲ್ಲೆ 3182 ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನಿಟ್ಟೆಯ ಸದಸ್ಯರು, ಇಂಟರಾಕ್ಟ್ ಕ್ಲಬ್ ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.