Home Blog Page 16

ಸೂರಾಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ತಾರಾನಾಥ್ ಕೋಟ್ಯಾನ್ ಆಯ್ಕೆ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.) ಸೂರಾಲು ಇದರ ಮಹಾಸಭೆಯು ಸೂರಾಲು ಗುಂಡಾಜೆ ಶಾಲಾ ಸಭಾಂಗಣದಲ್ಲಿ ಜೂ. 29ರಂದು ನಡೆಯಿತು.ಸಭೆಯಲ್ಲಿ 33 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಕಾರ್ಕಳ ತಾಲೂಕು ಭೂನ್ಯಾಯ ಮಂಡಳಿ ಮತ್ತು ಮಿಯ್ಯಾರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ತಾರಾನಾಥ್ ಕೋಟ್ಯಾನ್ ಸೂರಾಲು ಮತ್ತು ಕಾರ್ಯದರ್ಶಿಯಾಗಿ ಜೆಸಿಐ ಕಾರ್ಕಳ ರೂರಲ್ ನ ಪೂರ್ವಾಧ್ಯಕ್ಷರಾದ ಮಂಜುನಾಥ ಕೋಟ್ಯಾನ್ ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಮಾದೇಶ್ಎಂ, ಸುಧಾಕರ್ ಎಂ ಶೆಟ್ಟಿ, ಜಯಪ್ರಕಾಶ್ ದೇವಾಡಿಗ, ಶಿವಾಜಿ ರಾವ್ ಉಪಾಧ್ಯಕ್ಷರಾಗಿ ವಸಂತ ಕುಲಾಲ್, ಪ್ರವೀಶ್ ಎಚ್ ರಾವ್,ಮೀರಾ ಜಯಪ್ರಕಾಶ್,ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ ಎಸ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಶುಭಾಶ್ ಪೂಜಾರಿ, ಅರ್ಫಾನ್, ದಿನೇಶ್ ಹೆಚ್ ರಾವ್, ಕೋಶಾಧಿಕಾರಿಯಾಗಿ ಹರೀಶ್ ಅಂಚನ್,ಸಂಘಟನಾ ಕಾರ್ಯದರ್ಶಿಗಳಾಗಿ ಉಮೇಶ್ ಕುಲಾಲ್,ಪ್ರಕಾಶ್ ರಾವ್, ರಾಜೇಶ್ವರಿ ರಾವ್, ರಮೇಶ್ ಪೂಜಾರಿ ಆಯ್ಕೆಯಾದರು.

ಕ್ರೀಡಾ ಕಾರ್ಯದರ್ಶಿಗಳಾಗಿ, ವಿಷ್ಣು ಕೋಟ್ಯಾನ್, ಮನೀಶ್ ಕುಮಾರ್ ಕಾರ್ತಿಕ್ ಶೆಟ್ಟಿ, ನಿತೇಶ್, ಸುಮಂತ್ ರಾವ್,ಮಹೇಶ್ ರಾವ್, ಶುಭದರ ಪೂಜಾರಿ,ರಾಕೇಶ್.ಸಾಂಸ್ಕೃತಿಕ ಕಾರ್ಯದರ್ಶಿಳಾಗಿ ಸುರೇಶ್ ಬಂಗೇರ, ಸತೀಶ್ ಬಂಗೇರ, ಶಾಲಿನಿ ದೇವಾಡಿಗ, ವೆಂಕಟೇಶ್, ಕಾಂಚನ ರಾವ್, ದೀಕ್ಷಿತ, ದಿಶಾ, ನಿಶ್ಮಿತ ಆಯ್ಕೆಯಾದರು. ಸ್ವಚ್ಛತಾ ಸಮಿತಿಯ ಸದಸ್ಯರಾಗಿ ದೇಜಪ್ಪ ಕುಲಾಲ್, ಪ್ರವೀಶ್ ಪಿ ರಾವ್, ರಾಮಚಂದ್ರ ಭಂಡಾರಿ, ದೀಕ್ಷಿತ್ ಕೋಟ್ಯಾನ್, ಪ್ರವೀಣ್ ಪೂಜಾರಿ, ಸುಕೇಶ್ ಕುಲಾಲ್, ಆಶಾ ರಮೇಶ್, ಲೋಲಾಕ್ಷಿ ,ಜಯಂತಿ, ಶಿವಾನಂದ ಪೂಜಾರಿ, ಶ್ತೀಜಿತ್, ಸುನಿತಾ ಸತೀಶ್ ಆಯ್ಕೆಯಾದರು.

ಪ್ರಸಾದ ವಿತರಣಾ ಸಮಿತಿಯ ಸದಸ್ಯರಾಗಿ ರಾಘವೇಂದ್ರ ಕುಲಾಲ್,ಗಣೇಶ್ ರಾವ್, ವಿಕೇಶ್ ರಾವ್, ಗಣೇಶ್ ಕುಲಾಲ್, ರಕ್ಷಿತ್ ಕುಲಾಲ್, ಪ್ರಶಾಂತ್ ಪೂಜಾರಿ, ಅಶೋಕ್ ಕುಲಾಲ್, ಶಂಕರ, ಪ್ರವೀಣ್ ಮೂಲ್ಯ, ವಿಶಾಲ್ ಕುಮಾರ್, ಭರತ್ ರಾಜ್, ಸುಧಾಕರ್ ಪೂಜಾರಿ, ವಸಂತ ಶೆಟ್ಟಿ, ಅಲ್ತಾಫ್, ಮನೋಜ್ ಕುಮಾರ್, ನಿಶಿತ್ ಶೆಟ್ಟಿ, ಯತೀಶ್, ಧನುಷ್ ರಾವ್ ಆಯ್ಕೆಯಾದರು. ಸಲಹಾ ಸಮಿತಿಯ ಸದಸ್ಯರಾಗಿ ರಮೇಶ್ ದೇವಾಡಿಗ, ಓಬಯ್ಯ ಕೋಟ್ಯಾನ್, ರಮೇಶ್ಎಂ ಆಯ್ಕೆಯಾದರು.

ಕಾರ್ಯಕಾರಿ ಸದಸ್ಯರಾಗಿ ರಮೇಶ್ ದೇವಾಡಿಗ, ಸುರೇಶ್ ಕುಲಾಲ್, ಅನಿಲ್ ಕುಲಾಲ್, ರಿತೇಶ್ ರಾವ್, ಪ್ರಸನ್ನ ಕುಲಾಲ್, ಹೇಮಂತ್, ಸುನಿಲ್ ಹೆಗ್ಡೆ, ರಿತೇಶ್ ಕೋಟ್ಯಾನ್, ಪ್ರಣಾಮ್ ಕೋಟ್ಯಾನ್, ಸಂಕೇತ್, ತೇಜಸ್ ಕೋಟ್ಯಾನ್, ಶ್ರೀನಿವಾಸ ಶೆಟ್ಟಿಗಾರ್, ಪ್ರತೀಕ್ ರಾವ್, ಅಂಕಿತ್ ಕೋಟ್ಯಾನ್, ಹರ್ಷ ಬಂಗೇರ, ರಕ್ಷಿತ್ ಕೋಟ್ಯಾನ್, ವಿಶ್ವನಾಥ ನಾಯಕ್, ಸುಮಂತ್ ಪೂಜಾರಿ, ಸುಶಾಂತ್ ಪೂಜಾರಿ, ಆಯುಷ್, ಶಶಾಂಕ್ ಪೂಜಾರಿ, ಶೈಲೇಶ್, ಮಂಜುನಾಥ್ ನಾಯಕ್, ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕಾರ್ಕಳ: ಅನ್ಯಾಯವನ್ನು ನೇರವಾಗಿ ಪ್ರತಿಭಟಿಸುವ ಗುಣವನ್ನು ಮಹಿಳೆಯರು ಬೆಳೆಸಿಕೊಳ್ಳಿ-ಸಂಧ್ಯಾ ಶೆಣೈ

0

ಕಾರ್ಕಳ ರೋಟರಿ ಆನ್ಸ್ ಕ್ಲಬ್ ಪದಗ್ರಹಣ

ಮಹಿಳೆಯರು ಸಮಾಜದಲ್ಲಿ ಆಗುವ ಅನ್ಯಾಯವನ್ನು ನೇರವಾಗಿ ಪ್ರತಿಭಟಿಸುವ ಗುಣವನ್ನು ಬೆಳೆಸಿಕೊಳ್ಳಬೇಕು, ಇನ್ನೊಬ್ಬರ ಸಂತೋಷವನ್ನು ಮೆಚ್ಚುವ ಗುಣಗ್ರಾಹಿಗಳಾಗಬೇಕು ಎಂದು ಕಾರ್ಕಳ ಆನ್ಸ್ ಕ್ಲಬ್ ನ ನೂತನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಖ್ಯಾತ ಹಾಸ್ಯ ಮತ್ತು ಪ್ರೇರಕ ಭಾಷಣಗಾರರಾದ ಸಂಧ್ಯಾ ಶೆಣೈಯವರು ಹೇಳಿದರು.

ಸಮಾರಂಭದಲ್ಲಿ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರು ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರಿಗೆ ಪದ ಪ್ರಧಾನ ನೆರವೇರಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷೆ ಜಯಂತಿ ಆನಂದ ನಾಯ್ಕ್ ರವರು ಮುಂದಿನ ವರ್ಷದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ತನ್ನ ತಂಡದ ಪರಿಚಯ ಮಾಡಿದರು.

ಆನ್ಸ್ ನ ನಿಕಟ ಪೂರ್ವ ಚೇರ್ಮನ್ ಪ್ರಭಾ ನಿರಂಜನ್,ಅಧ್ಯಕ್ಷೆ ವಿನಯ ಅರುಣ್ ಶೆಟ್ಟಿ, ಕಾರ್ಯದರ್ಶಿ ರಕ್ಷಾ ಪ್ರಭಾತ್ ರನ್ನು ಗೌರವಿಸಿ ಸನ್ಮಾನಿಸಲಾಯಿತು.

ನೂತನ ಚೇರ್ಮನ್ ವೃಂದಾ ಹರಿಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಸುಮಾ ಸುರೇಶ್ ನಾಯಕ್, ಸವಿತಾ ಹೆಗ್ಡೆ,ಉಷಾ ಪ್ರಕಾಶ್ ಆಚಾರ್ಯ ಅತಿಥಿ ಗಣ್ಯರನ್ನು ಪರಿಚಯಿಸಿದರು. ಡಾ. ಉಷಾ ಕಿರಣ್ ಮತ್ತು ಟೆಲ್ಮಾ ಪ್ರಕಾಶ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ‌

ಕಾರ್ಕಳ : ಜೋರು ಗಾಳಿ ಮಳೆ, ರಸ್ತೆಗೆ ಬಿದ್ದ ಮರ

0

 

ಕರಾವಳಿ ಜಿಲ್ಲೆಗಳಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕಾರ್ಕಳದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಆನೆಕೆರೆಯಲ್ಲಿ ಮರವೊಂದು ರಸ್ತೆಗೆ ಬಿದ್ದ ಘಟನೆ ಇಂದು ನಡೆದಿದೆ.

ಮರ ರಸ್ತೆಗೆ ಬಿದ್ದ ಪರಿಣಾಮ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಸಂಚಾರ ಕೆಲಕಾಲ ಅಸ್ಥವ್ಯಸ್ಥವಾಯಿತು. ಇನ್ನು ಎರಡು ದಿನಗಳ ಕಾಲ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಕೇಂದ್ರ ಸರ್ಕಾರ ಜಿ.ಎಸ್.ಟಿ ನೋಟೀಸ್ ನೀಡಿದ್ದರೆ ರಾಜ್ಯ ಸರ್ಕಾರ ಹಿಂಪಡೆಯಲು ಸಾಧ್ಯವೇ..? ಸಾಮಾನ್ಯ ಜ್ಞಾನವಿಲ್ಲದ ಕಾಂಗ್ರೆಸ್ ನಾಯಕರು-ರವೀಂದ್ರ ಮೊಯ್ಲಿ

0

 

ಸರ್ಕಾರದ ಅಡಿಯಲ್ಲಿ CGST ಮತ್ತು ರಾಜ್ಯ ಸರ್ಕಾರಗಳ‌ ಅಡಿಯಲ್ಲಿ SGST ಎರಡು ಭಾಗಗಳಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಟೀ ಅಂಗಡಿಗಳಿಗೆ, ಕಾಂಡಿಮೆಂಡ್ಸ್, ಬೇಕರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಹೇಳಿದ್ದಾರೆ.

ಜಿ. ಎಸ್. ಟಿ‌ ಕೌನ್ಸಿಲ್ ನಲ್ಲಿ ಯಾವುದೇ ತೀರ್ಮಾನ‌ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3 ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ‌ಸರ್ಕಾರಗಳ ನಿರ್ಣಯವೇ ಅಂತಿಮವಾಗಿರಲಿದೆ.

ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ‌, ಅವರಿಗೆ ತೊಂದರೆ ಕೊಡುತ್ತಿದ್ದಾರೆ.ಬೇರೆ ಯಾವುದೇ ರಾಜ್ಯಗಳಲ್ಲಿ ನೀಡದ ನೋಟಿಸ್, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ. ಯುಪಿಐ ಟ್ರಾನ್ಸಾಕ್ಷನ್ ಇದೀಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಹದಗೆಡಿಸುವ ದುಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿರುವುದು ನಿಜಕ್ಕೂ ದುರಂತ.

ಇದೀಗ ಸಣ್ಣಪುಟ್ಟ ವ್ಯಾಪಾರಸ್ಥರಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಣ್ಣ ವ್ಯಾಪಾರಿಗಳ ಮೇಲೆ ಬಲವಂತದ ಕ್ರಮ ಸದ್ಯಕ್ಕಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ಸಿನ ನಾಯಕರುಗಳು ನೋಟೀಸು ಕೇಂದ್ರ ಸರ್ಕಾರದ ಅಧೀನದಲ್ಲಿರುವ ತೆರಿಗೆ ಇಲಾಖೆ ನೀಡಿದೆ ಎಂದು ತಪ್ಪು ಮತ್ತು ಸುಳ್ಳು ಮಾಹಿತಿ ನೀಡುತಿದ್ದಾರೆ ಕೇಂದ್ರ ಸರ್ಕಾರ ನೋಟೀಸ್ ನೀಡಿದ್ದರೆ ರಾಜ್ಯ ಸರ್ಕಾರ ಹಿಂಪಡೆಯಲು ಸಾಧ್ಯವೇ.? ಎಂಬ ಸಾಮಾನ್ಯ ಜ್ಞಾನ ಕಾಂಗ್ರೆಸಿನ ನಾಯಕರಿಗಿಲ್ಲವೇ.?ಎಲ್ಲದಕ್ಕೂ ಕೇಂದ್ರದ ಮೇಲೆ ಬೆರಳು ತೋರಿಸುವುದನ್ನು ಬಿಟ್ಟು ವಾಸ್ತವ ವಿಷಯ ಜನರಿಗೆ ತಿಳಿಯಪಡಿಸಿ. ನಿಮ್ಮ ಸುಳ್ಳನ್ನು ನಂಬುವಷ್ಟು ಜನ ದಡ್ಡರಲ್ಲ. ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ತೆರಿಗೆಯ ಹೊರೆ ಹಾಕಲು ಹೋಗಿ ಕೈ ಸುಟ್ಟುಕೊಂಡ ಕಾಂಗ್ರೇಸ್ ಸರ್ಕಾರದ ನಡೆಯನ್ನು ಜನತೆಯ ಗಮನಿಸುತ್ತಿದ್ದಾರೆ. ಇನ್ನಾದರೂ ಕಪಟ ನಾಟಕ ಬಿಟ್ಟು ಜನಪರ ಆಡಳಿತದ ಕಡೆ ಗಮನ ನೀಡಿ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆಯಿಂದ ಬಿಜೆಪಿ ಹತಾಶೆಗೊಂಡಿದೆ -ಕಾಂಗ್ರೆಸ್ ಮುಖಂಡ ಚಂದ್ರಹಾಸ ಪುತ್ರನ್

0

 

ಗ್ಯಾರಂಟಿ ಯೋಜನೆಗಳ ವಿರೋದಿ ಮನಸ್ಥಿಯ ಬೋಳ ಗ್ರಾಮ ಪಂಚಾಯತಿನ ವಿರುದ್ದ ಮತ್ತು ಬಿಜೆಪಿ ಬೆಂಬಲಿತ ಸದಸ್ಯನ ದುಂಡಾವರ್ತನೆಯ ವಿರುದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಿಂದ ವಿಚಲಿತರಾದ ಕಾರ್ಕಳ ಬಿಜೆಪಿಯ ಒಂದು ತಂಡ ಕಾಂಗ್ರೆಸ್ ವಿರುದ್ದ ಮತ್ತೆ ಸುಳ್ಳು ಆರೋಪಗಳನ್ನು ನಡೆಸಿ ಜನರ ಹಾದಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಬೋಳ ಕಾಂಗ್ರೆಸ್ ಮುಖಂಡರಾದ ಚಂದ್ರಹಾಸ ಪುತ್ರನ್ ಹೇಳಿದ್ದಾರೆ.

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಗ್ರಾಮ ಸಭೆಯಲ್ಲಿ ಪ್ರಶ್ನೆ ಮಾಡಿದ ಗ್ರಾಮಸ್ಥರನ್ನು ಪದೇ ಪದೇ ಅಸಂವಿಧಾನಿಕ ಪದಗಳಿಂದ ಏಕವಚನದಲ್ಲಿ ಗದರಿಸುವ ದ್ವನಿಯಲ್ಲಿ ಮಾತನಾಡುತ್ತುದ್ದರು. ತಮ್ಮದೇ ಸದಸ್ಯನ ಈ ಉದ್ದಟತನದ ವರ್ತನೆಯನ್ನು ನೋಡಿಯು ಸುಮ್ಮನೆ ಕುಳಿತಿದ್ದ ಪಂಚಾಯತ್ ಅಧ್ಯಕ್ಷರಿಂದ ಕಾರ್ಕಳ ಕಾಂಗ್ರೆಸ್ ನವರು ನೈತಿಕ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಕಾರ್ಕಳ ಬಿಜೆಪಿಯ ಒಂದು ತಂಡದ ಕೈಗೊಂಬೆಯಾಗಿರುವ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಸಭೆಯಲ್ಲಿ ಅಸಹಾಯಕರಾಗಿದ್ದಾರೆ, ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ನಾಮಕಾವಸ್ಥೆ ಗೆ ಎಂಬುದಕ್ಕೆ ಸಾಕ್ಷಿ ಗ್ರಾಮ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರು ಮಾತನಾಡಲು ಎದ್ದು ನಿಂತಾಗ ಪದೇ ಪದೇ ಅವರ ಕೈಯಿಂದ ಮೈಕ್ ಕಿತ್ತು ಕೊಂಡಾಗಲೇ ಜನರಿಗೆ ಸತ್ಯ ಅರ್ಥವಾಗಿದೆ, ಪಂಚಾಯತ್ ಅಧ್ಯಕ್ಷರು ಕಾರ್ಕಳ ಬಿಜೆಪಿಯ ಒಂದು ತಂಡದ ಒತ್ತಡಕ್ಕೆ ಒಳಗಾಗಿ ಆನೆಯ ಕಾಲಿನೆಡೆಗೆ ಸಿಲುಕಿದ ಬಾಳೆ ಹಣ್ಣಿನಂತಾಗಿದ್ದಾರೆ, ಇವರ ಪರಿಸ್ಥಿತಿಯ ಬಗ್ಗೆ ನಮಗೆ ಅನುಕಂಪವಿದೆ. ಬೋಳ ಗ್ರಾಮ ಪಂಚಾಯತಿನಲ್ಲಿ ಪ್ರಜಾಪ್ರಭುತ್ವ ಮಾಯವಾಗಿದ್ದು ಇದು ಶಾಸಕರ ಬೇನಾಮಿ ಮುಖಂಡನ ಆಡಂಬೋಲವಾಗಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.

ಬೋಳ ಗ್ರಾಮದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂದು ನಿಮ್ಮ ಶಾಸಕರು ಮಾಡಿದ ಗುದ್ದಲಿ ಪೂಜೆ ಯನ್ನು ಲೆಕ್ಕ ಹಾಕಿದರೆ ನಿಮಗೆ ತಿಳಿಯುತ್ತದೆ, ಬಿಜೆಪಿಯ ಇಂತಾ ಹೇಳಿಕೆಗಳಿಂದ ಬೋಳದ ಪ್ರಜ್ಞಾವಂತ ನಾಗರಿಕರನ್ನು ಮೋಸಗೊಳಿಸಲಾಗದು ಎಂದರು.

ಬೋಳ ಗ್ರಾಮ ಪಂಚಾಯತಿನ ಆದಾಯದ ಮೂಲಗಳನ್ನು ಬಿಜೆಪಿ ಬೆಂಬಲಿತ ಪಂಚಾಯತ್ ಆಡಳಿತ ಸರಿಯಾಗಿ ಉಪಯೋಗಿಸುತ್ತಿಲ್ಲ, ಪಂಚಾಯತ್ ಕಚೇರಿ ಮುಂಬಾಗದಲ್ಲಿಯೇ ಇರುವ ಅಂಗಡಿ ಕೋಣೆಗಳನ್ನು ಸಾರ್ವಜನಿಕರಿಗೆ ಅನುಭೋಗಿಸಲು ಏಲಾಂ ಪ್ರಕ್ರಿಯೆ ನಡೆಸದೆ ರಾತ್ರಿ ಸಮಯದಲ್ಲಿ ಬಿಜೆಪಿ ಪಕ್ಷದವರು ಎಣ್ಣೆ ಪಾರ್ಟಿ, ಅಕ್ರಮ ಚಟುವಟಿಕೆಯ ತಾಣಗಳನ್ನಾಗಿಸಿರುವುದು ಖೇದಕರ.

ಬೋಳ ಗ್ರಾಮಕ್ಕೆ ಕಾಂಗ್ರೆಸ್ ನೀಡಿದ ಅನುದಾನದ ಲೆಕ್ಕ ಕೊಡಲು ನಾವು ಬಹಿರಂಗ ಚರ್ಚೆಗೆ ಸಿದ್ದರಿದ್ದೇವೆ, ಸ್ಥಳ ಮತ್ತು ಸಮಯವನ್ನು ನಿಗದಿ ಪಡಿಸಿ ಎಂದು ಬೋಳ ಕಾಂಗ್ರೆಸ್ ಮುಖಂಡ ಚಂದ್ರಹಾಸ ಪುತ್ರನ್ ಸವಾಲು ಎಸೆದಿದ್ದಾರೆ.

ಕಾರ್ಕಳ : ನಾಳೆ (ಜು.25) A1 ಸೂಪರ್ ಮಾರ್ಟ್ ನ ಎರಡನೇ ಶಾಖೆ ಉದ್ಘಾಟನೆ

0

 

 

ಕಾರ್ಕಳದ ಜನಪ್ರಿಯ ಸೂಪರ್ ಮಾರ್ಟ್ ಆಗಿರುವ A1 ಸೂಪರ್ ಮಾರ್ಟ್ ನ ಎರಡನೇ ಶಾಖೆ ಇದೀಗ ಕಾರ್ಕಳದ ಮಾರಿಗುಡಿ ಪಕ್ಕದಲ್ಲಿರುವ ಪ್ರೈಮ್ ಸಿಟಿ ಸೆಂಟರ್ ನಲ್ಲಿ ಜು. 25 ರಂದು ಉದ್ಘಾಟನೆಗೊಳ್ಳಲಿದೆ.

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಮಳಿಗೆ ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ತರವಾಡ್ ತುಳು ಚಿತ್ರದ ನಟ ಶೋಧನ್ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾರ್ಕಳ ಪುರಸಭೆ ಸದಸ್ಯೆ ಸುಮ ಕೇಶವ, ನ್ಯಾಯವಾದಿ ಸುವ್ರತ್ ಕುಮಾರ್, ಕಾರ್ಕಳ ಶಾಖೆಯ ಯೂನಿಯನ್ ಬ್ಯಾಂಕ್ ಒಫ್ ಇಂಡಿಯಾದ ಮುಖ್ಯ ಪ್ರಬಂಧಕ ಮಯೂರ್ ರಾವಲ್ ಉಪಸ್ಥಿತರಿರಲಿದ್ದಾರೆ.

ಹೊಸ ಶಾಖೆಯು ಪೂರ್ತಿಯಾಗಿ ಹವಾ ನಿಯಂತ್ರಕವಾಗಿದ್ದು, ಕಾರ್ಕಳ ಪೇಟೆಯ ಗ್ರಾಹಕರು ಬೆರಳೆಣಿಕೆ ಹೆಜ್ಜೆ ನಡೆದು ದಿನಬಳಕೆ ವಸ್ತುಗಳು, ದಿನಸಿ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ.

ಹೊಸ ಶಾಖೆ ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗೆ ಆಕರ್ಷಕ ಆಫರ್ ಗಳು, ಲಕ್ಕಿ ಡ್ರಾ, ವಿಶೇಷ ರಿಯಾಯಿತಿಗಳು ಸಿಗಲಿವೆ. ಎಲ್ಲರೂ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 27ರಂದು ಅಬ್ಬನಡ್ಕದಲ್ಲಿ ತುಳು ಪರ್ಬ

0

 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ರಜತ ಸಂಭ್ರಮದ ಸವಿ ನೆನಪಿಗಾಗಿ ತುಳು ಪರ್ಬ ಸಮಾರಂಭವು ಜುಲೈ 27ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 11-00ಕ್ಕೆ ಸರಿಯಾಗಿ ಜರಗಲಿದೆ.

ಹಿರಿಯ ಸಾಹಿತಿಗಳು ಮತ್ತು ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಜನಾರ್ಧನ ಭಟ್ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ದಿನೇಶ್ ಪೂಜಾರಿ ಅವರು ಗೌರವ ಉಪಸ್ಥಿತಿತರಿರುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಪಾಂಗಾಳ ಬಾಬು ಕೊರಗ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತುಳು ಪರ್ಬದ ಅಂಗವಾಗಿ ತುಳು ಕವಿಗೋಷ್ಠಿ ನಡೆಯಲಿದ್ದು ಕವಿಗೋಷ್ಠಿಯಲ್ಲಿ ವಾಸಂತಿ ಅಂಬಲಪಾಡಿ, ಹರಿಪ್ರಸಾದ್ ನಂದಳಿಕೆ, ದೀಪಿಕಾ ಉಡುಪಿ, ಸುಲೋಚನಾ ಪಚ್ಚಿನಡ್ಕ, ಶ್ರೀ ಮುದ್ರಾಡಿ ಅವರು ಭಾಗವಹಿಸಲಿದ್ದಾರೆ.

ತುಳು ಪರ್ಬದ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ ಜರಗಲಿದ್ದು ನಂತರ ತುಳುನಾಡ ಶೈಲಿಯ ಭೋಜನಕೂಟ ನಡೆಯಲಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಇಂದು ಕಾರ್ಕಳದಲ್ಲಿ ವಿಶ್ವಕುಂದಾಪ್ರ ಕನ್ನಡ ದಿನ

0

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಸಂಯೋಜನೆಯಲ್ಲಿ ಜು. 24ರ ಸಂಜೆ 4.30ಕ್ಕೆ ಕಾರ್ಕಳದ ಹೋಟೆಲ್ ಪ್ರಕಾಶ್ ಸಂಭ್ರಮ ಹಾಲ್ ನಲ್ಲಿ ವಿಶ್ವಕುಂದಾಪ್ರ ಕನ್ನಡ ದಿನಾಚರಣೆ ಜರಗಲಿದೆ.

ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎ. ಎಸ್. ಎನ್. ಹೆಬ್ಬಾರ್ ಕುಂದಾಪುರ ಅವರು ಭಾಷಿ ಅಲ್ಲ ಬದ್ಕ್ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಷಾಡ ದಿನಗಳ ವಿಶೇಷ ತಿಂಡಿ ತಿನಿಸುಗಳ ಖಾದ್ಯವಿರುತ್ತದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಲ್ಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ: ಬಡ ವರ್ತಕರನ್ನು ಜಿ.ಎಸ್.ಟಿ ಸಂಕಟದಿಂದ ಪಾರು ಮಾಡಿದ ರಾಜ್ಯ ಕಾಂಗ್ರೆಸ್ ಸರಕಾರ-ಕಾರ್ಕಳ ಕಾಂಗ್ರೆಸ್ ಹರ್ಷ

0

 

ಅವೈಜ್ಙಾನಿಕ ನೋಟಿಸ್ ಜಾರಿಗೊಳಿಸಿದ ಕೇಂದ್ರ ಸರ್ಕಾರದ ತೆರಿಗೆ ಇಲಾಖೆಯ ಕ್ರಮದಿಂದ ಆತಂಕ ಹಾಗೂ ಗೊಂದಲಕ್ಕೊಳಗಾಗಿದ್ದ ರಾಜ್ಯದ ವರ್ತಕ ವಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿಶೇಷ ಕಾಳಜಿಯಿಂದ ರಕ್ಷಿಸಿದ್ದಾರೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.

ಟೀ ಅಂಗಡಿ, ಕಾಂಡಿಮೆಂಡ್ಸ್, ಬೇಕರಿ ಮುಂತಾದ ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಅಭಿವೃದ್ಧಿಗೊಂಡ ಯುಪಿಐ ಆ್ಯಪ್ ಮೂಲಕ ವ್ಯಾಪಾರ ವ್ಯವಹಾರ ನಡೆಸುತ್ತಿದ್ದು ಇದನ್ನೇ ಮಾನದಂಡವಾಗಿಸಿದ ಕೇಂದ್ರ ಸರ್ಕಾರ ನಿಯಂತ್ರಿತ ತೆರಿಗೆ ಇಲಾಖೆಯು ವ್ಯಾಪಾರಿಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ಹಾಕಿ ನೋಟಿಸ್ ಜಾರಿಗೊಳಿಸಿದ್ದರಿಂದಾಗಿ ರಾಜ್ಯದ ವರ್ತಕ ವಲಯವು ಆತಂಕಕ್ಕೀಡಾಗಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಮಯೋಚಿತ ನಿರ್ಧಾರದಿಂದ ವ್ಯಾಪಾರಿ ವಲಯದ ಈ ಎಲ್ಲಾ ಆತಂಕವನ್ನು ದೂರಗೊಳಿಸಿದ್ದು ಇದು ಸಿದ್ದರಾಮಯ್ಯನವರ ಆಡಳಿತ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ನಿಯಂತ್ರಿಯ ತೆರಿಗೆ ಇಲಾಖೆಯ ಅವೈಜ್ಞಾನಿಕ ತೆರಿಗೆ ಸಂಗ್ರಹದ ಕ್ರಮಗಳು ನಿತ್ಯ ಜನರನ್ನು ಶೋಷಣೆಗೊಳಪಡಿಸುತ್ತಿದೆ, ಅದರಲ್ಲಿ ಪ್ರಮುಖವಾಗಿ ವ್ಯಾಪಾರಸ್ಥರಿಗೆ ದಿನ ಒಂದಕ್ಕೆ 2000 ರೂಪಾಯಿಗಿಂತ ಹೆಚ್ಚುವರಿ ಹಣವು ಗೂಗಲ್ ಪೆ ಮೂಲಕ ಜಮಾವಣೆಯಾದರೆ ಅದರಿಂದ ಶೇಕಡಾ 1.8 ರಷ್ಟು ಹಣವನ್ನು GST ಪಾವತಿಸಬೇಕಾಗಿದೆ.

ಕಷ್ಟಕಾಲದಲ್ಲಿ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಜನರು ತಮ್ಮ ಕುಟುಂಬ ಸದಸ್ಯರಿಗೆ ಅರೋಗ್ಯ ವಿಮೆ ಹಾಗು ಜೀವ ವಿಮೆ ಮಾಡಿಸಿಕೊಂಡರೆ ಅಲ್ಲಿಯೂ ತೆರಿಗೆ ಇಲಾಖೆ ಶೇಕಡಾ 18 ರಷ್ಟು gst ಬರೆ ಹಾಕಿ ಜನರನ್ನು ಶೋಷಿಸುತ್ತಿದೆ. ತಮ್ಮ ಕಷ್ಟಕ್ಕೆ ಸಹಾಯವಾಗಲಿ ಎಂದು ಆರೋಗ್ಯ ವಿಮೆ ಮಾಡಿಸುವ ಜನರಿಗೆ ತೆರಿಗೆ ಇಲಾಖೆ ಕಷ್ಟಕೊಡುವುದು ಅಮಾನವೀಯ ಕ್ರಮ, ಇದರಿಂದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ. ತಮ್ಮ ಕಷ್ಟ ಕಾಲಕ್ಕೆ ಸಹಾಯ ಆಗಲಿ ಎಂದು ಅರೋಗ್ಯ ವಿಮೆ, ಜೀವ ವಿಮೆ ಜನಸಾಮಾನ್ಯರು ವಿಮೆಗಳನ್ನು ಮಾಡುತ್ತಾರೆ, ಆದರೆ ಶೇಕಡಾ 18 ರಷ್ಟು ಹಣ ಹೆಚ್ಚುವರಿಯಾಗಿ GST ಮುಖಾಂತರ ಯಾಕೆ ಕಟ್ಟಬೇಕು? ವಿಮೆಯನ್ನು ಕ್ಕೈಮು ಮಾಡುವ ಸಂದರ್ಭದಲ್ಲಿಯೂ ಪುನಃ ಅದೇ GST ತೆರಿಗೆ ಹಾಕಿ ಅದರಲ್ಲೂ ಹಣ ವಸೂಲಿ ಮಾಡುವ ಕ್ರಮ ಎಷ್ಟು ಸರಿ?

ನಾವು ಬ್ಯಾಂಕ್ ನಲ್ಲಿ ನಮ್ಮ ತೆಗೆಯಲು GST, ನಮ್ಮ ಖಾತೆಗೆ ಹಣ ಹಾಕಲು GST ಇದು ಯಾವ ನ್ಯಾಯ. ನಾವು ದುಡಿದ ಹಣದ ಮೇಲೂ GST ಹಾಕಿ ನಮ್ಮನ್ನು ಪುನಃ ಮೋಸ ಗೊಳಿಸುತ್ತಾರೆ.

ಹೋಟೆಲುಗಳಲ್ಲಿ ಆಹಾರ ತಯಾರಿಸಲು ಬಳಸುವ ಪ್ರತಿಯೊಂದು ಆಹಾರ ಸಾಮಗ್ರಿಗಳ ಮೇಲೆಯೂ GST ಭರಿಸಿಯೇ ಹೊಟೇಲ್ ಮಾಲೀಕರು ಖರೀದಿ ಮಾಡುತ್ತಾರೆ, ಹೊಟೇಲಿಗೆ ತಂದು ಅದನ್ನು ಬೇಯಿಸಿ ಗ್ರಾಹಕರಿಗೆ ಬಡಿಸುವಾಗ ಮತ್ತೆ ಗ್ರಾಹಕರ ಮೇಲೆ GST ಹಾಕಲಾಗುತ್ತಿದೆ…! ಇದು ಯಾವ ನ್ಯಾಯ..?

ಆಸ್ಪತ್ರೆ ಯಲ್ಲಿ ರೋಗಿಗೆ ನೀಡುವ ಪ್ರತಿಯೊಂದು ಮೆಡಿಸಿನ್ ಮೇಲೆ GST ಹಾಕಿ ಡಿಸ್ಚಾರ್ಜ್ ಆದಮೇಲೆ ಬಿಲ್ಲಿನ ಮೇಲೆ ಕೂಡಾ gst ಬರೆ ಹಾಕುತ್ತಿರುವುದು ಅತ್ಯಂತ ಅಮಾನವೀಯವಾಗಿದೆ, ಕೇಂದ್ರದ ಬಿಜೆಪಿ ಸರ್ಕಾರ ಜನರ ಮೇಲೆ ವಿಧಿಸುತ್ತಿರುವ ಅಮಾನುಷ ತೆರಿಗೆಯನ್ನು ಪುನಃ ಪರಿಷ್ಕರಿಸಬೇಕಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಜು.24)ಉಡುಪಿ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ

0

 

ಕರಾವಳಿ ಜಿಲ್ಲೆಗಳಾದ್ಯಂತ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಜಿಲ್ಲೆಯ ಅಂಗನವಾಡಿ, ಶಾಲೆ, ಐ.ಟಿ.ಐ. ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದ್ದಾರೆ.

ಮಳೆ ಹೆಚ್ಚಿರುವ ಪರಿಣಾಮ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ನೀರಿನ ಹರಿವು ಹೆಚ್ಚಿರುವ ಪ್ರದೇಶ, ಬೆಟ್ಟ-ಗುಡ್ಡಗಳ ತಪ್ಪಲಿನ ನಿವಾಸಿಗಳಿಗೆ ಎಚ್ಚರದಿಂದಿರಲು ಸೂಚಿಸಿದೆ. ಅಲ್ಲದೆ, ಕಡಲು ಪ್ರಕ್ಷುಬ್ಧವಾಗಿದ್ದು, ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಸಿದೆ.