Friday, May 1, 2026
Google search engine
Homeಕಾರ್ಕಳಶಿವಪುರ ದೇವಸ್ಥಾನಕ್ಕೆ ಪಲಿಮಾರು ಹಿರಿಯ ಮತ್ತು ಕಿರಿಯ ಶ್ರೀಗಳು ಆಗಮನ

ಶಿವಪುರ ದೇವಸ್ಥಾನಕ್ಕೆ ಪಲಿಮಾರು ಹಿರಿಯ ಮತ್ತು ಕಿರಿಯ ಶ್ರೀಗಳು ಆಗಮನ

ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನಕ್ಕೆ ಇಂದು ಶುಕ್ರವಾರ ಉಡುಪಿಯ ಪಲಿಮಾರು ಮಠಾದೀಶ ಶ್ರೀ ಶ್ರೀ ವಿದ್ಯಾದೀಶ ಶ್ರೀಪಾದರು ಮತ್ತು ಕಿರಿಯ ಶ್ರೀಪಾದರು ಆಗಮಿಸಿದರು.

ಕ್ಷೇತ್ರದ ತಂತ್ರಿವೃರಣ್ಯರಾದ ಹೆರ್ಗ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್‌, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್‌ ಮತ್ತು ವಿವಿಧ ಪ್ರಮುಖರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಸಮಿತಿಯ ಪ್ರಧಾನ ಸಲಹೆಗಾರ ಚಂದ್ರಶೇಖರ ಶೆಟ್ಟಿ ಬಿಲ್ಲುಬೈಲು, ಕಾಮಗಾರಿ ಸಮಿತಿಯ ಸಂಚಾಲಕ ಶ್ರೀನಿವಾಸ ಹೆಬ್ಬಾರ್‌ ಶಿವಪುರ, ಉಪಾಧ್ಯಕ್ಷರಾದ ಶಿವಪ್ರಸಾದ್‌ ಅಡಿಗ, ರಾಮ ಬೆಳಿರಾಯ ನಾಯರಕೋಡು, ಆರ್ಥಿಕ ಸಮಿತಿಯ ಅಧ್ಯಕ್ಷ ಹುಣ್ಸೆಯಡಿ ಸುರೇಶ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್ , ಅರ್ಚಕ ಮಹಾಬಲೇಶ್ಚರ ಅಡಿಗ, ವಿವಿಧ ಪ್ರಮುಖರಾದ ಸುಬ್ರಹ್ಮಣ್ಯ ನಕ್ಷತ್ರಿ ಬೆಂಗಳೂರು, ರಮೇಶ್ ಕುಮಾರ್, ಸಂತೋಷ ಕುಮಾರ್ ಶೆಟ್ಟಿ, ಸಚಿನ್ ನಾಯ್ಕ್, ಜಗನ್ನಾಥ ಕುಲಾಲ್, ಸುಮಿತ್ರಾ ನಾಯ್ಕ್, ಭಾಸ್ಕರ ಶೆಟ್ಟಿ, ರಾಘವೇಂದ್ರ ಪ್ರಭು, ಶಿವಪ್ರಸಾದ್ ಅಡಿಗ, ಸುನಂದ ಕುಲಾಲ್, ಸಂಜಯ ಆಚಾರ್, ರೇಷ್ಮಾ ದೇವಾಡಿಗ ವಿಶಾಲಾಕ್ಷಿ ಶೆಟ್ಟಿ, ಪೂರ್ಣಿಮಾ ಹಾಂಡ ಸೇರಿದಂತೆ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಸ್ವಾಗತ ಸಮಿತಿ,ಅರ್ಚಕ ವೃಂದದವರು, ವಿವಿಧ ಉಪಸಮಿತಿಗಳ ಪ್ರಮುಖರು, ಸದಸ್ಯರು ಭಾಗಿಯಾದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments