ಇರಾನ್- ಅಮೆರಿಕದ ಸಂಘರ್ಷ ಕೊನೆಗೊಂಡಿರುವುದಾಗಿ ಟ್ರಂಪ್ ಘೋಷಣೆ.
ಇದರಿಂದ ತೈಲ ಬೆಲೆ ಭಾರಿ ಇಳಿಕೆಯಾಗುವ ನಿರೀಕ್ಷೆ ಇದೆ. ಹಣದುಬ್ಬರದ ಆತಂಕವೂ ಕೊನೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಧನಾತ್ಮಕ ಬದಲಾವಣೆಯಾಗಿದ್ದು, ಲೋಹಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಚಿನ್ನ ಬೆಳ್ಳಿಯ ಬೆಲೆ ಭಾರಿ ಏರಿಕೆಯಾಗಿದೆ.
ಕಳೆದ ಎರಡೂವರೇ ತಿಂಗಳಿಂದ ನಡೆಯುತ್ತಿರುವ ಅಮೆರಿಕ- ಇರಾನ್ ಸಂಘರ್ಷ ಕಡೆಗೂ ಸಂಧಾನದಲ್ಲಿ ಕಡೆಗೂ ಯಶಸ್ವಿಯಾಗಿ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಧನಾತ್ಮಕ ಸಂಚಲನ ಉಂಟಾಗಿದ್ದು, ಚಿನ್ನ- ಬೆಳ್ಳಿ ಹೂಡಿಕೆಗಳು ಏರಿಕೆಯಾಗಿವೆ. ಕಳೆದ ನಾಲ್ಕ ದಿನದಿಂದಲೂ ಬೆಲೆ ಏರಿಕೆ ಆಗಿದ್ದು, 24 ಕ್ಯಾರೆಟ್ ಬೆಲೆ ಮತ್ತೆ ಒಂದೂವರೇ ಲಕ್ಷ ರೂಪಾಯಿಗೇರಿದೆ.
ಶುದ್ಧ ಚಿನ್ನದ ಇಂದಿನ ದರ
ಜೂನ್ 15 2026 ಸೋಮವಾರದಂದು , 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 245 ರೂ ಏರಿಕೆ ಆಗಿದ್ದು, 15,153 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆ 2450 ರೂ ಏರಿಕೆಯಾಗಿದ್ದು 1,51,530 ರೂಪಾಯಿ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯೂ ಹೆಚ್ಚಳವಾಗಿದೆ. 1 ಗ್ರಾಂ ಬೆಲೆ 225 ರೂ ಏರಿಕೆಯಾಗಿ 13890 ರೂ ಆಗಿದ್ದು 10 ಗ್ರಾಂ ಬೆಲೆ 2250 ರೂ ಏರಿದ್ದು, ಈಗ ಬೆಲೆ 1,38,900 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ಏರಿಕೆ
ಬೆಳ್ಳಿ ಬೆಲೆ ಇಂದು 5 ಸಾವಿರ ಹೆಚ್ಚಳವಾಗಿದೆ.. ಗ್ರಾಂ ಬೆಲೆ 265 ರೂ ಆಗಿದ್ದು,, 2,65,000 ರೂ ದಾಖಲಾಗಿದೆ.


















