Friday, May 1, 2026
Google search engine
Homeಕಾರ್ಕಳಶಿವಪುರ ಶ್ರೀಶಂಕರ ದೇವ ದೇವಸ್ಥಾನದಲ್ಲಿ ಭಕ್ತಿ ವೈಭವದ ಬ್ರಹ್ಮ ಕಲಶಾಭಿಷೇಕ

ಶಿವಪುರ ಶ್ರೀಶಂಕರ ದೇವ ದೇವಸ್ಥಾನದಲ್ಲಿ ಭಕ್ತಿ ವೈಭವದ ಬ್ರಹ್ಮ ಕಲಶಾಭಿಷೇಕ

ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಇಂದು ಶುಕ್ರವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬ್ರಹ್ಮಕಲಶಾಭಿಷೇಕ ಭಕ್ತಿವೈಭವದಿಂದ ಕ್ಷೇತ್ರ ತಂತ್ರಿವರೇಣ್ಯರಾದ ಹೆರ್ಗ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ನೆರವೇರಿತು.

ಸಾವಿರಾರು ಭಕ್ತ ಸಮೂಹ ಸಂಭ್ರಮದ ಬ್ರಹ್ಮಕಲಾಭಿಷೇಕಕ್ಕೆ ಸಾಕ್ಷಿಯಾದರು. ಮಹಾ ಅನ್ನಸಂತರ್ಪಣೆ ನಡೆಯಿತು.

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್‌, ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್‌, ರ್ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ, ವಿವಿಧ ಉಪಸಮಿತಿಯ ಪ್ರಮುಖರು, ಸದಸ್ಯರು,ಗಣ್ಯರು, ಅರ್ಚಕ ವೃಂದ ಸೇರಿದಂತೆ ಸಾವಿರಾರು ಭಕ್ತಸಮೂಹ ಭಾಗಿಯಾದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments