Sunday, May 3, 2026
Google search engine
Homeಕಾರ್ಕಳಶಿವಪುರ ಶ್ರೀಶಂಕರದೇವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಸಂಪನ್ನ: ಧಾರ್ಮಿಕ ಸಭೆ , ದಾನಿಗಳಿಗೆ ಸನ್ಮಾನ- ಪೇಜಾವರ...

ಶಿವಪುರ ಶ್ರೀಶಂಕರದೇವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಸಂಪನ್ನ: ಧಾರ್ಮಿಕ ಸಭೆ , ದಾನಿಗಳಿಗೆ ಸನ್ಮಾನ- ಪೇಜಾವರ ಶ್ರೀ ಬೇಟಿ

ಊರಪರವೂರ ಭಕ್ತರ ಸಹಕಾರದಲ್ಲಿ ಜೀರ್ಣೋದ್ಧಾರ : ಉದಯ ಕುಮಾರ್‌ ಶೆಟ್ಟಿ

ಊರಪರವೂರ ಭಕ್ತರ ವಿಶೇಷ ಸಹಕಾರದಲ್ಲಿ ಎಲ್ಲರ ಒಗ್ಗೂಡುವಿಕೆಯಿಂದ ಶ್ರೀಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮತ್ತು ಬ್ರಹ್ಮಕಲಶಾಭಿಷೇಕವನ್ನು ಆಡಂಬರ ಇಲ್ಲದೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ. ಮನಸ್ಸು ತುಂಬಿ ಬಂದಿದೆ. ಸರ್ವರ ಶ್ರಮದ ಫಲವಾಗಿ ಕ್ಷೇತ್ರ ನಿರ್ಮಾಣವಾಗಿದೆ. ವೈಭವದ ಬ್ರಹ್ಮಕಲಶಾಭಿಷೇಕವಾಗಿದೆ. ಪ್ರಸಾದ ರೂಪದಲ್ಲಿ ಕೊಲ್ಲೂರು ಕ್ಷೇತ್ರದಿಂದ ಹೊರೆಕಾಣಿಕೆ ದೊರೆತಿರುವುದು ನಮ್ಮ ಸೌಭಾಗ್ಯ ಎಂದು ಶಿವಪುರ ಶ್ರೀಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಹೇಳಿದರು.ಅವರು ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಶುಕ್ರವಾರ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಹಸ್ರಾರು ಮಂದಿ ಭಕ್ತರಿರುವ ಶಿವಪುರ ಗ್ರಾಮದೇವರಾದ ಶಂಕರದೇವ ದೇವಸ್ಥಾನದಲ್ಲಿ ಪ್ರತಿ ಸಂಕ್ರಮಣದಂದು ಅನ್ನದಾನ ಸೇವೆ ಮತ್ತು ಪ್ರತಿ ಸೋಮವಾರ ವಿಶೇಷ ಪೂಜಾ ಸೇವೆ ನಡೆಯಬೇಕು. ಅದಕ್ಕಾಗಿ ಸರ್ವರೂ ಚಿಂತನೆ ಮಾಡಿ ಕೈಜೋಡಿಸಿ ಎಂದು ಅಪೇಕ್ಷಿಸಿದರು. ಕ್ಷೇತ್ರ ನಿರ್ಮಾಣದಲ್ಲಿ ಶಿವಪುರ ಶ್ರೀನಿವಾಸ ಹೆಬ್ಬಾರ್‌, ಸುರೇಶ್‌ ಶೆಟ್ಟಿ, ವಿಶ್ವನಾಥ ನಾಯಕ್‌, ವಾಸುದೇವ ಭಟ್‌, ಸಂತೋಷ ಕುಮಾರ್‌ ಶೆಟ್ಟಿ ಮತ್ತವರ ತಂಡದ ಕಾರ್ಯಕ್ಕೆ ಉದಯ ಕುಮಾರ್‌ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಾಧ್ಯಕ್ಷ ಅಜಿತ್‌ ಎಸ್‌ ಶೆಟ್ಟಿ ಸೇವೆಯನ್ನು ಸ್ಮರಿಸಿದರು.

ಧಾರ್ಮಿಕ ಸಭೆಯನ್ನು ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಉದ್ಘಾಟಿಸಿ ಅರ್ಚಕರ ಸಮರ್ಪಣಾಭಾವದ ಸೇವೆ ಮತ್ತು ಭಕ್ತರ ಪಾಲ್ಗೋಳ್ಳುವಿಕೆಯಿಂದ ಮಾತ್ರ ಕ್ಷೇತ್ರವು ಸಮೃದ್ಧವಾಗಿ ಬೆಳಗುತ್ತದೆ. ಎಲ್ಲರಿಗೂ ಜವಾಬ್ಧಾರಿಯಿದೆ. ಸರ್ವರೂ ಸಹಕಾರ ನೀಡಿ ಸಾನಿಧ್ಯ ವೃದ್ಧಿಗಾಗಿ ಪೂಜೆಸಲ್ಲಿಸಬೇಕು, ಕ್ಷೇತ್ರದ ಪರಂಪರೆಯನ್ನು ಉಳಿಸಿ ಮುನ್ನಡೆಯಿರಿ ಎಂದು ಆಶಿಸಿದರು. ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರದಿಂದ ಊರಿಗೆ ವಿಶೇಷ ಶಕ್ತಿ ಬರುತ್ತದೆ ಎಂದರು.

ಅದಾನಿ ಗ್ರೂಪ್‌ ಅಧ್ಯಕ್ಷ ಕಿಶೋರ್‌ ಆಳ್ವ ಮಾತನಾಡಿ ಪುರಾತನ ಕ್ಷೇತ್ರದ ಅಭಿವೃದ್ಧಿ ಪುಣ್ಯದ ಕಾರ್ಯ. ಕ್ಷೇತ್ರದ ಮುಂದಿನ ಅಭಿವೃದ್ಧಿಗೆ ನೆರವು ನೀಡುವುದಾಗಿ ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ನೆರವು ನೀಡಿದ ದಾನಿಗಳಾದ ಅಜಿತ್‌ ಎಸ್‌ ಶೆಟ್ಟಿ, ಚಿಟ್ಟೆಬೆಟ್ಟು ಹರೀಶ ಶೆಟ್ಟಿ ಪೂನಾ, ಖಜಾನೆ ಹರೀಶ ಶೆಟ್ಟಿ ಪೂನಾ, ರಾಜರಾಮ ಹೆಗ್ಡೆ ಹಿರಿಯಡ್ಕ, ಉದಯ ಕಡಂಬ ಶಿವಮೊಗ್ಗ, ಕಲ್ಯಾಣ ಸಿಂಗ್‌ ಉಡುಪಿ, ಯಳಗೋಳಿ ಪ್ರಸನ್ನ ಸಿ ಶೆಟ್ಟಿ ಮಧ್ಯಪ್ರದೇಶ, ಪ್ರಮೋದ ರೈ ಪಳಜ, ತೆಳ್ಳಾರು ಗಿರೀಶ್‌ ಶೆಟ್ಟಿ ಮುಂಬಯಿ, ಮುದ್ರಾಡಿ ಮಂಜುನಾಥ ಪೂಜಾರಿ, ಶಿಲ್ಪಿ ನಾರಾಯಣ ಆಚಾರ್ಯ ಉಡುಪಿ, ಸುಬ್ಬಯ್ಯ ಶೆಟ್ಟಿ ಹುಣ್ಸೆಯಡಿ ಸಹಿತ ದಾನಿಗಳು ಮತ್ತು ಸಹಕಾರ ನೀಡಿದ ಸರ್ವರನ್ನು ಗೌರವಿಸಲಾಯಿತು. ಅವದಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್‌ ಧಾರ್ಮಿಕ ಉಪನ್ಯಾಸ ನೀಡಿದರು. ಆರ್ಥಿಕ ಸಮಿತಿಯ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶಾಭಿಷೇಕದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಅಜಿತ್‌ ಎಸ್‌ ಶೆಟ್ಟಿ, ಉದ್ಯಮಿಗಳಾದ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ಪೂನಾ, ಖಜಾನೆ ಹರೀಶ ಶೆಟ್ಟಿ ಪೂನಾ, ಖಜಾನೆ ಫಾರ್ಮ್‌ ರಾಜರಾಮ ಹೆಗ್ಡೆ ಹಿರಿಯಡ್ಕ, ಉದಯ ಕಡಂಬ ಶಿವಮೊಗ್ಗ, ಕಲ್ಯಾಣ ಸಿಂಗ್‌ ಉಡುಪಿ, ಯಳಗೋಳಿ ಪ್ರಸನ್ನ ಸಿ ಶೆಟ್ಟಿ ಮಧ್ಯಪ್ರದೇಶ, ಪ್ರಮೋದ ರೈ ಪಳಜ ಪೆರ್ಡೂರು, ತೆಳ್ಳಾರು ಗಿರೀಶ್‌ ಶೆಟ್ಟಿ ಮುಂಬಯಿ, ಬೇಳಂಜೆ ಬಾದ್ಲು ಹರೀಶ ಶೆಟ್ಟಿ, ಪ್ರವೀಣ್‌ ಬಲ್ಲಾಳ್‌ ಹೆಬ್ರಿ, ಬಿಲ್ಲುಬೈಲು ಚಂದ್ರಶೇಖರ ಶೆಟ್ಟಿ, ಶೇಖರ ಪಿ.ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್‌, ದೇವಸ್ಥಾನದ ಕಾಮಗಾರಿ ಸಮಿತಿಯ ಸಂಚಾಲಕ ಶ್ರೀನಿವಾಸ ಹೆಬ್ಬಾರ್‌ ಶಿವಪುರ, ಆರ್ಥಿಕ ಸಮಿತಿಯ ಅಧ್ಯಕ್ಷ ಸುರೇಶ ಶೆಟ್ಟಿ, ಬೈಕಾಡಿ ಮಂಜುನಾಥ ರಾವ್ ಶಿವಪುರ, ಸಂತೋಷ ಕುಮಾರ್ ಶೆಟ್ಟಿ, ಸಚಿನ್ ನಾಯ್ಕ್, ಜಗನ್ನಾಥ ಕುಲಾಲ್, ರಾಘವೇಂದ್ರ ಪ್ರಭು, ಶಿವಪ್ರಸಾದ್ ಅಡಿಗ ಸೇರಿದಂತೆ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಸ್ವಾಗತ ಸಮಿತಿ, ಅರ್ಚಕ ವೃಂದದವರು, ವಿವಿಧ ಉಪಸಮಿತಿಗಳ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ ನಿರೂಪಿಸಿ ಮಂಜುನಾಥ ಕುಲಾಲ್‌ ಮತ್ತು ರಮಾನಂದ ಶೆಟ್ಟಿ ಸಹಕರಿಸಿದರು. ಮಾರ್ಮಕ್ಕಿ ವಿಶ್ವನಾಥ ನಾಯಕ್‌ ಸ್ವಾಗತಿಸಿ ಸುರೇಶ ಶೆಟ್ಟಿ ಹುಣ್ಸೆಯಡಿ ವಂದಿಸಿದರು.

ಪೇಜಾವರ ಶ್ರೀ ಬೇಟಿ :

ಶ್ರೀಶಂಕರದೇವ ದೇವಸ್ಥಾನದಲ್ಲಿ ಶುಕ್ರವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತಿವೈಭವದಿಂದ ನಡೆದ ಬ್ರಹ್ಮಕಲಶಾಭಿಷೇಕಕ್ಕೆ ಉಡುಪಿಯ ಪೇಜಾವರ ಮಠಾದೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಗಮಿಸಿದರು. ಶ್ರೀಗಳನ್ನು ಕ್ಷೇತ್ರದ ವತಿಯಿಂದ ಭವ್ಯವಾಗಿ ಸ್ವಾಗತಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್‌, ಅರ್ಚಕ ಮಹಾಬಲೇಶ್ಚರ ಅಡಿಗ, ವಿಶ್ವನಾಥ ನಾಯಕ್‌, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಶಿವಪ್ರಸಾದ್‌ ಅಡಿಗ, ರಾಮ ಬೆಳಿರಾಯ ನಾಯರಕೋಡು, ವಿವಿಧ ಪ್ರಮುಖರಾದ ಸುಬ್ರಹ್ಮಣ್ಯ ನಕ್ಷತ್ರಿ ಬೆಂಗಳೂರು, ರಮೇಶ್ ಕುಮಾರ್, ಸುರೇಶ ಶೆಟ್ಟಿ ಶಿವಪುರ ಸಹಿತ ಹಲವರಿದ್ದರು.

ಬ್ರಹ್ಮಕಲಶಾಭಿಷೇಕ ಸಂಪನ್ನ 
ಭಕ್ತಿವೈಭವದಿಂದ ಮೇ 1 ರ ತನಕ ಕ್ಷೇತ್ರದ ತಂತ್ರಿ ಹೇರ್ಗ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆದ ಶ್ರೀಶಂಕರದೇವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು. ಸಹಸ್ರಾರು ಮಂದಿ ಭಕ್ತರು ಮಹಾಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಅಂಕುರಾರೋಪಣ ಮತ್ತು ಮಹಾರಂಗಪೂಜೆ ನಡೆಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments