ರೋಟರಿ ಕ್ಲಬ್ ಕಾರ್ಕಳದ ವಾರದ ಸಭೆಯಲ್ಲಿ ಜೆಸಿಐ ಅಂತರಾಷ್ಟ್ರೀಯ ತರಬೇತುದಾರರು ಹಾಗೂ ಶಿಕ್ಷಕರಾದ ರಾಜೇಂದ್ರ ಭಟ್ ಕೆ. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ರಾಜೇಂದ್ರ ಭಟ್ ಅವರು ರೋಟರಿಯ ದ್ಯೇಯ ವಾಕ್ಯವಾದ “Unite for Good” ವಿಷಯದ ಕುರಿತು ಮಾತನಾಡಿ, ಸಮಾಜ ಸೇವೆಯಲ್ಲಿ ಏಕತೆ ಮತ್ತು ಸಹಕಾರದ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಇಂದಿರಾ ರಾಜೇಂದ್ರ ಭಟ್, ಇಸ್ರೋ ವಿಜ್ಞಾನಿ ರೋ. ಜನಾರ್ಧನ್ ಇಡ್ಯಾ, ರೋ. ವಸಂತ್ ಎಂ., ರೋ. ಬಾಲಕೃಷ್ಣ ದೇವಾಡಿಗ ಹಾಗೂ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.





























