Sunday, May 10, 2026
Google search engine
Homeಕಾರ್ಕಳಹೆಬ್ರಿ : ಶಿವಪುರ ಪಾಂಡುಕಲ್ಲು ಗುರುಪದಕ್ಕೆ ಕೇಮಾರು ಶ್ರೀ ಬೇಟಿ - ಹರಿದಾಸ ಬಿ. ಸಿ.ರಾವ್...

ಹೆಬ್ರಿ : ಶಿವಪುರ ಪಾಂಡುಕಲ್ಲು ಗುರುಪದಕ್ಕೆ ಕೇಮಾರು ಶ್ರೀ ಬೇಟಿ – ಹರಿದಾಸ ಬಿ. ಸಿ.ರಾವ್ ಶಿವಪುರ ಅವರಿಗೆ ಗೌರವಾರ್ಪಣೆ

ಶಿವಪುರ ಪಾಂಡುಕಲ್ಲು ಗುರುಪದಕ್ಕೆ ಶುಕ್ರವಾರ ಬೇಟಿ ನೀಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿದಾಸ ಬಿ. ಸಿ.ರಾವ್ ಶಿವಪುರ ಅವರನ್ನು ಗೌರವಿಸಿದರು.

ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ – ಕೇಮಾರು ಶ್ರೀ

ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎನ್ನುವ ಉದ್ದೇಶದಿಂದ ಸುಮಾರು 40 ವರ್ಷಗಳಿಂದ ಸಾವಿರಕ್ಕೂ ಮಿಕ್ಕಿ ಹರಿಕಥಾ ಕಾರ್ಯಕ್ರಮದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ ಹರಿದಾಸ ಬಿ.ಸಿ. ರಾವ್ ಅವರ ಭಕ್ತಿ ಮಾರ್ಗದ ಪ್ರಸಾರ ಶ್ಲಾಘನೀಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಶಿವಪುರ ಪಾಂಡುಕಲ್ಲು ಗುರುಪದಕ್ಕೆ ಶುಕ್ರವಾರ ಬೇಟಿ ನೀಡಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿದಾಸ ಬಿ. ಸಿ.ರಾವ್ ಶಿವಪುರ ಅವರನ್ನು ಗೌರವಿಸಿ ಆಶೀರ್ಚವದಿಸಿದರು.

ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದ ಬಿ.ಸಿ.ರಾವ್ ಶಿವಪುರ ಮಾತನಾಡಿ ನೇರ ನಡೆನುಡಿ ಸರಳತೆಯ ಮೂಲಕ ಎಲ್ಲರೊಂದಿಗೆ ಬೆರೆಯುವ ಕೇಮಾರು ಸ್ವಾಮಿಗಳು ನಮ್ಮ ಸಂಸ್ಕೃತಿ ಮತ್ತು ನಮ್ಮ ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜನರ ಸ್ವಾಮೀಜಿಯಾಗಿ ಜನಪ್ರಿಯರಾಗಿದ್ದಾರೆ ಎಂದರು. ಅಹಲ್ಯ ಸಿ. ರಾವ್ ಮೊದಲಾದವರು ಉಪಸ್ಥಿತರಿದ್ದರು. ಡಾ.ರಾಘವೇಂದ್ರ ಬಡ್ಕಿಲ್ಲಾಯ ಸ್ವಾಗತಿಸಿ, ನಿರೂಪಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments