ಬಂಟರ ಸಂಘ ಪಳ್ಳಿ ನಿಂಜೂರು ವಲಯ ಹಾಗೂ ಕಾರ್ಕಳ, ಹೆಬ್ರಿ, ಕಾಪು ಬಂಟರ ಸಂಘದ ಸಹಯೋಗದೊಂದಿಗೆ ಕಾರ್ಕಳ, ಹೆಬ್ರಿ, ಕಾಪು ತಾಲೂಕಿನ ಬಂಟ ಬಾಂಧವರ ಹೊನಲು ಬೆಳಕಿನ ಬಂಟರ ಕ್ರೀಡೋತ್ಸವವು ಮೇ 16 ರಂದು ಸಂಜೆ 5 ಗಂಟೆಗೆ ಪಳ್ಳಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಪಳ್ಳಿ-ನಿಂಜೂರು ವಲಯದ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಪಳ್ಳಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟಕರಾಗಿ ವಿಧಾನಪರಿಷತ್ ಶಾಸಕ ಮಂಜುನಾಥ ಭಂಡಾರಿ ಪಾಲ್ಗೊಳ್ಳಲಿದ್ದಾರೆ.
ಮೂರು ತಾಲೂಕುಗಳು ಒಟ್ಟಾಗಿ ನಡೆಸುವ ಈ ಕಾರ್ಯಕ್ರಮಕ್ಕೆ ಬಂಟ ಬಾಂಧವರು ಜೊತೆಗೂಡಿ ಕ್ರೀಡೋತ್ಸವ ಯಶಸ್ವಿಗೊಳಿಸುವಂತೆ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





































