Thursday, May 14, 2026
Google search engine
Homeಕಾರ್ಕಳಮುನಿಯಾಲು ವರಂಗ ಗ್ರಾಮ ಪಂಚಾಯತ್ ಪಡುಕುಡೂರು ಭಾಗದ ನಿಕಟಪೂರ್ವ ಸದಸ್ಯರಾದ ಸಂತೋಷ ನಾಯ್ಕ್ ಹೃದಯಘಾತದಿಂದ ನಿಧನ

ಮುನಿಯಾಲು ವರಂಗ ಗ್ರಾಮ ಪಂಚಾಯತ್ ಪಡುಕುಡೂರು ಭಾಗದ ನಿಕಟಪೂರ್ವ ಸದಸ್ಯರಾದ ಸಂತೋಷ ನಾಯ್ಕ್ ಹೃದಯಘಾತದಿಂದ ನಿಧನ

ವರಂಗ ಗ್ರಾಮ ಪಂಚಾಯತ್ ಪಡುಕುಡೂರು ಭಾಗದ ನಿಕಟಪೂರ್ವ ಸದಸ್ಯರಾದ ಮುನಿಯಾಲು ಗಾಂಧಿಮೈದಾನ ನಿವಾಸಿ ಸಂತೋಷ ನಾಯ್ಕ್ ( 43 ) ಬುಧವಾರ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯದಿಂದ ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬುಧವಾರ ಮನೆಯಲ್ಲಿ ಅಸ್ವಸ್ಥಗೊಂಡಿದ್ದರು.
ಕೂಡಲೇ ಸಂತೋಷ ನಾಯ್ಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಶ್ರೀ ಮಹಾಗಣಪತಿ ಸೇವಾ ಸಮಿತಿಯ ಸಕ್ರಿಯ ಸದಸ್ಯ ಕಲಾ ಪೋಷಕರಾಗಿದ್ದರು.
ಮುನಿಯಾಲು ಆಟೋ ಚಾಲಕ ಸಂಘದ ಕಾರ್ಯದರ್ಶಿ ಸಂತೋಷ್ ನಾಯ್ಕ್ ಯಾಗಿದ್ದರು.

ಮೃತರಿಗೆ ಪತ್ನಿ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಡುಕುಡೂರಿನಲ್ಲಿ ಅಂತಿಮ ದರ್ಶನ : ಸಂತೋಷ ನಾಯ್ಕ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗುರುವಾರ 10 ಗಂಟೆಯ ಹೊತ್ತಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಹಲವಾರು ಮಂದಿ ಅಂತಿಮ ದರ್ಶನ ಪಡೆದರು. ಬಳಿಕ ಮುನಿಯಾಲು ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು, ಮಿತ್ರ ವರ್ಗದವರು ಸೇರಿದಂತೆ ಹಲವರು ಸೇರಿ ಸಂತೋಷ ನಾಯ್ಕ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಮುನಿಯಾಲಿಗೆ ಕೊಂಡೋಯ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments