Sunday, May 17, 2026
Google search engine
Homeಕಾರ್ಕಳಮೇ 20ರಂದು ಮೆಡಿಕಲ್ ಶಾಪ್‌ಗಳು ಬಂದ್

ಮೇ 20ರಂದು ಮೆಡಿಕಲ್ ಶಾಪ್‌ಗಳು ಬಂದ್

ಆನ್‌ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ಮೇ 20ರಂದು ದ.ಕ. ಜಿಲ್ಲೆಯಲ್ಲಿ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಲಾಗುವುದು ಎಂದು ದ.ಕ. ಔಷಧ ವ್ಯಾಪಾರಿಗಳ ಸಂಘ ತಿಳಿಸಿದೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಮಾತನಾಡಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಆಂಡ್ ಡ್ರಗ್ಗಿಸ್ಟ್ ಹಾಗೂ ಕರ್ನಾಟಕ ಕೆಮಿಸ್ಟ್ ಆ್ಯಂಡ್ ಅಸೋಸಿಯೇಶನ್ ಕರೆಯಂತೆ ರಾಷ್ಟ್ರವ್ಯಾಪಿ ಈ ಬಂದ್ ನಡೆಯಲಿದೆ. ಸೌತ್ ಕೆನರಾ ಕೆಮಿಸ್ಟ್ಸ್ ಆ್ಯಂಡ್ ಡ್ರಗಿಸ್ಟ್ ಅಸೋಸಿಯೇಶನ್‌ನ ಎಲ್ಲ ಸದಸ್ಯರು ಬೆಂಬಲಿಸಲಿದ್ದಾರೆ. ಮೇ 20ರಂದು 24 ಗಂಟೆಗಳ ಕಾಲ ಮೆಡಿಕಲ್ ಬಂದ್ ಇರಲಿದೆ ಎಂದು ಹೇಳಿದರು.

ಅನಿಯಂತ್ರಿತವಾಗಿ ಆನ್ ಲೈನ್ ಮೂಲಕ ಔಷಧ ಮಾರಾಟದಿಂದ ಶೆಡ್ಯೂಲ್ಡ್ ಡ್ರಗ್ಸ್ ಗಳ ದುರುಪಯೋಗ, ಸ್ವಯಂ ಚಿಕಿತ್ಸೆ ನಕಲಿ ಔಷಧ ಚೀಟಿಗಳ ಮೂಲಕ ಔಷಧ ಪಡೆದುಕೊಳ್ಳುವ ಅಪಾಯವಿದೆ. ಆನ್‌ಲೈನ್ ಮೂಲಕ ಪೂರೈಕೆಯಾಗುವ ಔಷಧ ಅಸುರಕ್ಷಿತ ದಾಸ್ತಾನು ಹಾಗೂ ಪೂರೈಕೆಯಾಗುವ ಸಾಧ್ಯತೆಯಿದೆ. ಆನ್‌ಲೈನ್ ಮೂಲಕ ಖರೀದಿಸಿದ ಔಷಧಗಳ ದುರುಪಯೋಗ ಉಂಟಾದಾಗ ಮೆಡಿಕಲ್ ಶಾಪ್‌ಗಳ ಬಗ್ಗೆ ಅನುಮಾನ ಮೂಡುತ್ತದೆ.

ಈ ಬಗ್ಗೆ ಕೇಂದ್ರ ಸರಕಾರಕ್ಕೆ ಎಐಒಸಿಡಿ ವತಿಯಿಂದ ಹಲವಾರು ಬಾರಿ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವೆಬ್‌ಸೈಟ್ ಪೋರ್ಟಲ್ ಮೂಲಕ ಅನ್‌ಲೈನ್ ಮಾದರಿಯಲ್ಲಿ ಔಷಧ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಬಂದ್ ನಡೆಸಲಾಗುತ್ತಿದೆ ಎಂದರು.

ಸಂಘದ ಕಾರ್ಯದರ್ಶಿ ಡಾ| ಎ. ಕೆ. ಜಮಾಲ್‌, ಉಪಾಧ್ಯಕ್ಷ ಅಮೃತ್‌ ಕಿರಣ್ ರೈ, ಜತೆ ಕಾರ್ಯದರ್ಶಿ ಶ್ರೀನಿವಾಸ ಭಟ್, ಕೋಶಾಧಿಕಾರಿ ಚಂದ್ರಶೇಖರ ಭಟ್, ಸಮಿತಿ ಸದಸ್ಯರಾದ ಸುರೇಶ್ ಆಳ್ವ ಶರಣಂ ಶೆಟ್ಟಿ ಉಪಸ್ಥಿತರಿದ್ದರು.
ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಶುಭಾಶಯಗಳು

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments