Monday, May 18, 2026
Google search engine
Homeಕಾರ್ಕಳಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ - ಸಾಮಾಜಿಕ ಸೇವಾ ಟ್ರಸ್ಟ್ ಸಭೆ; ಜುಲೈ 7...

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ – ಸಾಮಾಜಿಕ ಸೇವಾ ಟ್ರಸ್ಟ್ ಸಭೆ; ಜುಲೈ 7 ರಂದು ಗೋಪಾಲ ಭಂಡಾರಿ 75ನೇ ಹುಟ್ಟುಹಬ್ಬ ಆಚರಣೆ : ಸಾಧಕರ ಸನ್ಮಾನ

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಜನನಾಯಕರಾಗಿದ್ದ ಗೋಪಾಲ ಭಂಡಾರಿ ಅವರ 75ನೇ ಹುಟ್ಟು ಹಬ್ಬವನ್ನು ಜುಲೈ 07 ರಂದು ಆಚರಿಸಲಾಗುತ್ತದೆ. ಗೋಪಾಲ ಭಂಡಾರಿ ಅವರ ಸ್ಮರಣೆಯಲ್ಲಿ ಹೆಬ್ರಿ ಬ್ಲಾಕ್‌ ವ್ಯಾಪ್ತಿಯ ಹಲವು ಸಾಧಕರಿಗೆ ಗೌರವ ಸನ್ಮಾನ ಮತ್ತು ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಅತ್ಯಧಿಕ ಅಂಕಗಳಿಸಿದ ತಲಾ ಒಬ್ಬ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಗೌರವ ನೀಡಲಾಗುತ್ತದೆ ಟ್ರಸ್ಟ್‌ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.

ಅವರು ಭಾನುವಾರ ಹೆಬ್ರಿ ಹುತ್ತುರ್ಕೆಯ ಗೋಪಾಲ ಭಂಡಾರಿ ಅವರ ನಿವಾಸದಲ್ಲಿ ನಡೆದ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ನ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ದೀಪಾ ಭಂಡಾರಿ ಚಾರಾ, ಟ್ರಸ್ಟ್ ಪದಾಧಿಕಾರಿಗಳಾದ ನವೀನ್. ಕೆ. ಅಡ್ಯಂತಾಯ, ಮುರ್ಸಾಲು ಮೋಹನದಾಸ ನಾಯಕ್ ಮೂರ್ಸಲು, ಬೈಕಾಡಿ ಮಂಜುನಾಥ್ ರಾವ್ ಶಿವಪುರ, ಜಗನ್ನಾಥ ಕುಲಾಲ್ ಶಿವಪುರ, ಶ್ವೇತಕುಮಾರ್, ರಾಘವೇಂದ್ರ ನಾಯ್ಕ್ ಹೆಬ್ರಿ ಉಪಸ್ಥಿತರಿದ್ದರು. ದೀಪಾ ಭಂಡಾರಿ ಸ್ವಾಗತಿಸಿ ರಾಘವೇಂದ್ರ ನಾಯ್ಕ್‌ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments