Friday, June 5, 2026
Google search engine
Homeಕಾರ್ಕಳರೋಟರಿ ಕ್ಲಬ್ ಕಾರ್ಕಳ: ಡಾ.ಕೀರ್ತಿನಾಥ್ ಬಳ್ಳಾಲ್ ಬೀಳ್ಕೊಡುಗೆ

ರೋಟರಿ ಕ್ಲಬ್ ಕಾರ್ಕಳ: ಡಾ.ಕೀರ್ತಿನಾಥ್ ಬಳ್ಳಾಲ್ ಬೀಳ್ಕೊಡುಗೆ

ಭಡ್ತಿಗೊಂಡು ವರ್ಗಾವಣೆಗೊಂಡಿರುವ ಕಾರ್ಕಳ ರೋಟರಿ ಕ್ಲಬ್ಬಿನ ಸದಸ್ಯರೂ ಡಾ.ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇದರ ಅಸೋಸಿಯೇಟ್ ಪ್ರೊಫೆಸರ್, ಡಿಪಾರ್ಟ್ಮೆಂಟ್ ಆಫ್ ಕಮ್ಯುನಿಟಿಯ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ ಡಾ.ಕೀರ್ತಿನಾಥ್ ಬಳ್ಳಾಲ್ ರವರಿಗೆ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಡಾ.ಕೀರ್ತಿನಾಥ ಬಳ್ಳಾಲ್ ರವರು ರೋಟರಿ ಸಂಸ್ಥೆಯಿಂದ ಅನೇಕ ವಿಷಯಗಳನ್ನು ಕಲಿಯಲು ಸಹಕಾರಿಯಾಯಿತು ಎಂದರು.

ಈ ಸಂದರ್ಭದಲ್ಲಿ ಕ್ಲಬ್ಬಿನ ಹಿರಿಯ ಸದಸ್ಯರಾದ ರೋ. ತುಕಾರಾಮ ನಾಯಕ್, ರೋ. ಡಾ.ಭರತೇಶ್ ಆದಿರಾಜ್, ರೋ. ಜನಾರ್ಧನ್ ಇಡ್ಯಾ, ಒಕೇಶನಲ್ ಸರ್ವಿಸ್ ಚೇರ್ಮ್ಯಾನ್ ಶೈಲೇಂದ್ರ ರಾವ್ ಉಪಸ್ಥಿತರಿದ್ದರು. ರೋ.ಡಾ. ಭರತೇಶ್ ಆದಿರಾಜ್ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಶ್ರೀಶ ಭಟ್ ವಂದಿಸಿದರು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments