ಕಾರ್ಕಳ ತಾಲೂಕಿನ ಸುತ್ತಮುತ್ತ ಶುಕ್ರವಾರ ಬೆಳಗ್ಗಿನಿಂದ ಮಧ್ಯಾ ಹ್ನದ ವರೆಗೂ ಧಾರಾಕಾರ ಮಳೆ ಸುರಿದ ಪರಿಣಾಮ ಕಾರ್ಕಳ, ಹೆಬ್ರಿ ಭಾಗದ ಕೆಲವು ಕಡೆ ಹೆದ್ದಾರಿ ರಸ್ತೆ, ಪೇಟೆಗಳ ಸಣ್ಣಪುಟ್ಟ ರಸ್ತೆಗಳಲ್ಲಿ ಮಳೆ ನೀರು ಹರಿದು ಜನರ ಓಡಾಟ ಹಾಗೂ ಸುಗಮ ಸಂಚಾರಕ್ಕೆ ತೊಡಕುಂಟಾಗಿತ್ತು. ಮಧ್ಯಾಹ್ನದ ಬಳಿಕ ಮಳೆ ಕೊಂಚ ತಗ್ಗಿದ್ದರೂ ರಾತ್ರಿವರೆಗೂ ಬಿಟ್ಟು ಬಿಟ್ಟು ಸುರಿದಿದೆ.
ಕಾರ್ಕಳ ಪೇಟೆ, ಬಜಗೋಳಿ, ಅಂಡಾರು, ಕಬ್ಬಿನಾಲೆ, ಮುನಿಯಾಲು, ಮುದ್ರಾಡಿ, ಹಿರಿಯಂಗಡಿ, ಸಾಣೂರು, ಮಿಯಾರು, ಈದು, ಹೊಸ್ಮಾರು, ಮಾಳ, ಕೆರ್ವಾಶೆಭಾಗದಲ್ಲಿ ಬಿಟ್ಟುಬಿಟ್ಟು ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ ಕಾರ್ಕಳ 20.9 ೨ ಮಿ.ಮೀ, ಹೆಬ್ರಿ 15.4ಮಿ.ಮೀ ಸರಾಸರಿ ಮಳೆ ಸುರಿದಿದೆ.


















