Sunday, June 7, 2026
Google search engine
Homeಕಾರ್ಕಳಗ್ರಾಹಕರಿಗೆ ಶಾಕ್‌ – ಗೃಹಬಳಕೆ ಸಿಲಿಂಡರ್ ಬೆಲೆ 29 ರೂ. ಏರಿಕೆ

ಗ್ರಾಹಕರಿಗೆ ಶಾಕ್‌ – ಗೃಹಬಳಕೆ ಸಿಲಿಂಡರ್ ಬೆಲೆ 29 ರೂ. ಏರಿಕೆ

ದೇಶದ ಜನಸಾಮಾನ್ಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ರೂ. ಏರಿಕೆಯಾಗಿದೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಈ ನಿರ್ಧಾರ ಕೈಗೊಂಡಿದ್ದು ಇಂದಿನಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.

ಕಳೆದ ಮೂರು ತಿಂಗಳಲ್ಲಿ ಅಡುಗೆ ಅನಿಲ ದರ ಹೆಚ್ಚಳವಾಗಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ ಮಾರ್ಚ್ 7 ರಂದು ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ ಮಾಡಲಾಗಿತ್ತು.ಇದರೊಂದಿಗೆ ದೆಹಲಿಯಲ್ಲಿ ಇದುವರೆಗೆ 913 ಇದ್ದ ಸಿಲಿಂಡರ್ ಬೆಲೆ ಈಗ 942 ರೂ. ಕ್ಕೆ ತಲುಪಿದೆ.

ಜೂನ್ 1 ರಂದೇ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 42 ರೂ. ರಷ್ಟು ಹೆಚ್ಚಿಸಲಾಗಿತ್ತು. ಜಾಗತಿಕ ಮಾರುಕಟ್ಟೆಯ ಏರಿಳಿತದಿಂದಾಗಿ ಇತ್ತೀಚಿನ ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ (CNG) ದರಗಳಲ್ಲೂ ಸಹ ಏರಿಕೆ ಕಂಡುಬಂದಿದೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments