Sunday, June 7, 2026
Google search engine
Homeಕಾರ್ಕಳಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮಡಾಮಕ್ಕಿಯ ಉಷಾ ಪ್ರಕಾಶ್ ಶೆಟ್ಟಿ ನೇಮಕ

ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮಡಾಮಕ್ಕಿಯ ಉಷಾ ಪ್ರಕಾಶ್ ಶೆಟ್ಟಿ ನೇಮಕ

ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮಡಾಮಕ್ಕಿಯ ಉಷಾ ಪ್ರಕಾಶ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರ ಸಂಪೂರ್ಣ ಒಪ್ಪಿಗೆ ಹಾಗೂ ಮಾರ್ಗದರ್ಶನದಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆದಿದೆ. ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್ ಅವರು ಹೊಸ ಪದಾಧಿಕಾರಿಗಳ ಅಧಿಕೃತ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದು, ಪಕ್ಷಕ್ಕಾಗಿ ಶ್ರಮಿಸಿದ ಸಕ್ರಿಯ ಮಹಿಳಾ ನಾಯಕಿಯರಿಗೆ ಸಮಿತಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.

ಉಷಾ ಪ್ರಕಾಶ್ ಶೆಟ್ಟಿಯವರು 2020-21ರ ಸಾಲಿನಲ್ಲಿ ಸಂಜೀವಿನಿ ಸಂಘದಲ್ಲಿ ಮಡಾಮಕ್ಕಿ ಗ್ರಾಮ ಪಂಚಾಯತ್ ಒಕ್ಕೂಟದ ಸ್ಥಾಪಕಾಧ್ಯಕ್ಷರಾಗಿ, ಶ್ರೀ ಉಮಾಮಹೇಶ್ವರ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಬೆಪ್ಡೆಯ ಸಕ್ರಿಯ ಸದಸ್ಯೆಯಾಗಿ , ಗ್ರಾಮ ವಿಕಾಸ ಉಡುಪಿ ಜಿಲ್ಲಾ ಮತ್ತು ಸಂಸ್ಕಾರದ ಸಂಯೋಜಕಿಯಾಗಿ, ಲಯನ್ಸ್ ಕ್ಲಬ್ ಆರ್ಡಿ- ಬೆಳ್ವೆ ಗೋಳಿಯಂಗಡಿಯ ಸಕ್ರಿಯ ಸದಸ್ಯರಾಗಿ ಇನ್ನು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಸಮಾಜಕ್ಕಾಗಿ ಸ್ವಲ್ಪ ಸಮಯ ಹಾಗೂ ಸಂಸ್ಕಾರ ಕೊಡುವುದು ಜೀವನದ ದ್ಯೇಯೋದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೀವನದ ಮೌಲ್ಯಗಳನ್ನು, ಪ್ರಾಮಾಣಿಕತೆ, ನೈತಿಕತೆ, ಧೈರ್ಯ, ಸಾಹಸ, ಸಜ್ಜನಿಕೆ ಮತ್ತು ಶಿಸ್ತು, ಇವುಗಳನ್ನು ಬಾಲ್ಯದಿಂದಲೇ ಆಟ, ಪಾಠ, ಕಥೆಗಳ ಮೂಲಕ ತಿಳಿಸಿ ಕೊಡುವ ನೂತನ ಚಟುವಟಿಕೆಯಾಗಿರುವ ಶ್ರೀ ರಾಮ ಬಾಲಗೋಕುಲದ ಮಾತೃಮಂಡಳಿಯನ್ನು ಉಳಿದ ಮಾತೆಯರ ಜೊತೆಗೂಡಿ ಬೆಪ್ಡೆಯಲ್ಲಿ ರಚಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments