ಶ್ರೀ ಜನಾರ್ದನ ವಿದ್ಯಾ ಮಂದಿರ ಎಳ್ಳಾರೆ ಇದರ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶ್ರೀ ಜಿ. ರಾಮಕೃಷ್ಣ ಆಚಾರ್ ತಮ್ಮ ಸಂಸ್ಥೆಯ ವತಿಯಿಂದ ರತ್ನಗಂಧಿ ಗಿಡದ ಬೀಜದ ಉಂಡೆಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ವಿಠ್ಠಲ ಪಾಟೀಲ್ ಅವರು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದೊಂದು ಗಿಡವನ್ನು ವಿತರಿಸಿದರು.
ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಮಾತನಾಡಿದ ಶ್ರೀ ವಿಠ್ಠಲ ಪಾಟೀಲ್ ಅವರು, “ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದ್ದರಿಂದ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಇಂದು ನೆಡುವ ಸಸಿಗಳನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರ ಮಾಡೋಣ” ಎಂದು ಹೇಳಿದರು.
ದೊಂಡೇರಂಗಡಿ ಉಪವಲಯ ಅರಣ್ಯ ಅಧಿಕಾರಿಗಳಾದ ಕರುಣಾಕರ ಜೆ. ಆಚಾರ್ಯ ಅವರು ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಹಾಗೂ ಗಿಡಗಳನ್ನು ಬೆಳೆಸುವ ಅಭಿರುಚಿ ಬೆಳೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಜನಾರ್ದನ ಎಜುಕೇಶನ್ ಟ್ರಸ್ಟ್ ಎಳ್ಳಾರೆ ಇದರ ಗೌರವಾಧ್ಯಕ್ಷರಾದ ಶ್ರೀ ದಿನೇಶ್ ಕಿಣಿ, ಕೋಶಾಧಿಕಾರಿಗಳಾದ ಶ್ರೀ ಗುರುಪ್ರಸಾದ್ ಕಿಣಿ, ಸದಸ್ಯರಾದ ಶ್ರೀ ದೇವೇಂದ್ರ ಕಾಮತ್, ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಅಶ್ವಿನಿ ಸುಕೇಶ್ ಹೆಗ್ಡೆ, ಶ್ರೀ ವಿಠ್ಠಲ ಪಾಟೀಲ್, ಕರುಣಾಕರ ಜೆ. ಆಚಾರ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು


















