ಮೋಟಾರ್ ಸೈಕಲ್‌ಗೆ ಗೂಡ್ಸ್ ವಾಹನ ಒಂದು ಡಿಕ್ಕಿ ಹೊಡೆದ ಘಟನೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಪುಲ್ಕೇರಿ ದಿವ್ಯ ಅಪಾರ್ಟ್‌ಮೆಂಟ್ ಎದುರು ನಡೆದಿದೆ.
ಜೂ. 14 ರಂದು ಈ ಅಪಘಾತ ನಡೆದಿದ್ದು, ಚೇತನ್ ಎಂಬವರು ತಮ್ಮ ಬೈಕಿನಲ್ಲಿ ಸ್ನೇಹಿತ ಸಂಪತ್ ಎಂಬವರೊಂದಿಗೆ ಮೂಡಬಿದ್ರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ಕಸಬಾ ಗ್ರಾಮದ ಪುಲ್ಕೇರಿ ದಿವ್ಯ ಅಪಾರ್ಟ್‌ಮೆಂಟ್ ಬಳಿ ಹಿಂದಿನಿಂದ ಬಂದ ಗೂಡ್ಸ್ ವಾಹನ ಒವರ್ ಟೇಕ್ ಮಾಡುವ ಭರದಲ್ಲಿ ಬೈಕಿಗೆ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಬೈಕ್ ಸವಾರ ಚೇತನ್ ಗಾಯಗೊಂಡು ಮಂಗಳೂರು ವೆನ್ಸಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹಸವಾರ ಸಂಪತ್ ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















