ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ (ಸಿಪಿಐ) ಮಂಜಪ್ಪ ಡಿ.ಆರ್. ಅವರು ನೂತನ ವರ್ಗಾವಣೆಗೊಂಡಿದ್ದು, ವೃತ್ತ ನಿರೀಕ್ಷಕರಾಗಿ ಸಂದೀಪ್ ಜಿ. ಎಸ್. ಅಧಿಕಾರ ಸ್ವೀಕರಿಸಿದ್ದಾರೆ.
ವರ್ಗಾವಣೆಗೊಂಡ ಮಂಜಪ್ಪ ಅವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದಾರೆ. ಮೂಲತಃ ಶಿವಮೊಗ್ಗದವರಾದ ಸಂದೀಪ್ ಜಿ.ಎಸ್. ಅವರು 2007ರಲ್ಲಿ ಪಿಎಸ್ಐ ಆಗಿ ಇಲಾಖೆಗೆ ಸೇರ್ಪಡೆಗೊಂಡು, ಹುಬ್ಬಳ್ಳಿ ಯಲ್ಲಿ ಕರ್ತವ್ಯ ಆರಂಭಿಸಿದ್ದರು. ಬಳಿಕ ಶಿವಮೊಗ್ಗ ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು. 2019ರಲ್ಲಿ ಇನ್‌ಸ್ಪೆಕ್ಟರ್‌ಆಗಿ ಬಡ್ತಿ ಪಡೆದ ಇವರು ಕರಾವಳಿ ಕಾವಲು ಪಡೆ, ಉಳ್ಳಾಲ ಹಾಗೂ ಬಜಪೆ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಕಾರ್ಕಳ ವೃತ್ತ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.


















