ತಾಲೂಕು ಅಂಬೇಡ್ಕರ್ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೂವರು ನಾಮನಿರ್ದೇಶಿತ ಸದಸ್ಯರನ್ನು ಅನಧಿಕೃತವಾಗಿ ಆಯ್ಕೆ ಮಾಡಿದ್ದಾರೆ, ಎಂದು ದಲಿತ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಪತ್ರಿಕಾ ಭವನದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಮಾತನಾಡಿ, ಸುಧಾಕರ್ ದಾನಶಾಲೆ ಮೇ 4 ರಂದು ನಿಗದಿಯಾಗಿದ್ದ ಸಭೆಯನ್ನು ರದ್ದು ಗೊಳಿಸಿದ್ದ ಅಧಿಕಾರಿಗಳು, ತಾಲೂಕಿನ 7 ಪ್ರಮುಖ ದಲಿತ ಸಂಘಟನೆಗಳ ಗಮನಕ್ಕೆ ತರದೆ ರಹಸ್ಯವಾಗಿ 3 ಮಂದಿಯನ್ನು ಆಯ್ಕೆ ಮಾಡಿದ್ದಾರೆ. ಈ ಏಕಪಕ್ಷೀಯ ಆಯ್ಕೆಯನ್ನು ಜಿಲ್ಲಾಧಿಕಾರಿಗಳು ತತ್ ಕ್ಷಣ ರದ್ದುಪಡಿಸಬೇಕು. ಪುನಃ ಸಭೆ ನಡೆಸಿ ಒಮ್ಮತದಿಂದ ಹೊಸ ಸದಸ್ಯರನ್ನು ಆಯ್ಕೆ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಿ ಕ್ರಮವಹಿಸಬೇಕು. ಈ ಪ್ರಕ್ರಿಯೆ ನಡೆಯದಿದ್ದಲ್ಲಿ ತಾಲೂಕಿನಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಪ್ರಮುಖರಾದ ಸಂಘಟನೆಗಳ ಶ್ರೀನಿವಾಸ್ ಕಾರ್ಲ, ಸುನಿತಾ ಅಂಡಾರು, ಗೋವರ್ಧನ್ ಕಾರ್ಕಳ ಹಾಗೂ ಹರೀಶ್ ಬಜಗೋಳಿ ಉಪಸ್ಥಿತರಿದ್ದರು.



















