ಹಿಂದೂಗಳನ್ನು ದುರ್ಬಲಗೊಳಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕುತಂತ್ರ ನಡೆಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಹಿಂದೂಗಳನ್ನು ದುರ್ಬಲಗೊಳಿಸುವ ಜತೆಗೆ ಹಿಂದೂ ಧರ್ಮ ವಿಭಜಿಸುವ ಕುತಂತ್ರ ನಡೆದಿದೆ. ಹಿಂದೂಗಳ ರಕ್ಷಣೆಗೆ ನಿಂತಿರುವ ಆರೆಸ್ಸೆಸ್ ಗುರಿಯಾಗಿಸಿ ಖರ್ಗೆ ಮಾತನಾಡುತ್ತಿದ್ದಾರೆ. ಈ ಹೇಳಿಕೆಗಳು ಮತ್ತು ಬೆಳವಣಿಗೆಗಳ ಹಿಂದೆ ಹಿಂದೂ ವಿರೋಧಿ ಸಂಘಟನೆಗಳ ಕುಮ್ಮಕ್ಕಿನ ಅನುಮಾನ ಇದೆ ಎಂದರು.



















