ದಲಿತ ನಿಂದನೆ ಮಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡನನ್ನು ಶ್ರಮಿಕವರ್ಗದವರೇ ಸಮಾಜದಿಂದ ಒದ್ದೋಡಿಸುವ ಕೆಲಸ ಮಾಡಬೇಕಾಗಿದೆ-ಕಿರಣ್ ಹೆಗ್ಡೆ

0

ದಲಿತ ನಿಂದನೆ ಮಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡನನ್ನು ಶ್ರಮಿಕವರ್ಗದವರೇ ಸಮಾಜದಿಂದ ಒದ್ದೋಡಿಸುವ ಕೆಲಸ ಮಾಡಬೇಕಾಗಿದೆ-ಕಿರಣ್ ಹೆಗ್ಡೆ

ಹಿಂದೂ ಜಾಗರಣ ವೇದಿಕೆಯ ನಾಯಕರೊಬ್ಬರು ಮನುವಾದ ಸಂಸ್ಕೃತಿಯನ್ನು ಮುಂದಿಟ್ಟುಕೊಂಡು ದಲಿತರನ್ನು ನಿಂದನೆ ಮಾಡಿರುವುದನ್ನು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ ಕಾರ್ಕಳ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಶ್ರಮಿಕ ವರ್ಗದವರನ್ನು ಸಮಾಜದಲ್ಲಿ ಗೌರವ ಭಾವನೆಯಿಂದ ನೋಡಿಕೊಂಡೇ ಬರಲಾಗಿದೆ ಆ ಕೆಲಸವನ್ನು ಕಾಂಗ್ರೆಸ್ ಪಕ್ಷ ಕೂಡಾ ಮಾಡುತ್ತಲೇ ಬಂದಿದೆ.
ಶ್ರಮಿಕ ವರ್ಗದಲ್ಲಿ ದಲಿತ ಸಮಾಜದವರದ್ದೇ ಬಹು ಸಂಖ್ಯೆಯಾಗಿರುವುದರಿಂದ ಅವರನ್ನು ನಿಂದಿಸಿವುದು ಅಥವಾ ನಾಡು ಬಿಟ್ಟು ತೊಲಗುವಂತೆ ಮಾಡುವುದಕ್ಕೆ ಮನುವಾದಿ ಸಂಸ್ಕೃತಿಯ ನಾಯಕರಿಗೆ ಸಾಧ್ಯವಿಲ್ಲ. ಅಂಥ ಮುಖಂಡರನ್ನು ಶ್ರಮಿಕವರ್ಗದವರೇ ಸಮಾಜದಿಂದ ಒದ್ದೋಡಿಸುವ ಕೆಲಸ ಮಾಡಬೇಕಾಗಿದೆ ಎಂದು ಕಿರಣ್ ಹೆಗ್ಡೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ದಲಿತ ಸಮುದಾಯ,ಬಾಬಾ ಸಾಹೇಬ್ ಅಂಬೇಡ್ಕರ್ ಅವಹೇಳನ ಪ್ರಕರಣ:ಉಮೇಶ್ ನಾಯ್ಕ್ ನ್ಯಾಯಾಂಗ ಬಂಧನ ಹಿಂದೂ ಜಾಗರಣ ವೇದಿಕೆಯಿಂದ ಉಚ್ಚಾಟನೆ

   

LEAVE A REPLY

Please enter your comment!
Please enter your name here