ಅಯೋಧ್ಯೆಯ ರಾಮಮಂದಿರದಂತೆಯೇ ಮುಂಬಯಿಯ ಸಿದ್ದಿ ವಿನಾಯಕ ದೇಗುಲದ ಲ್ಲಿಯೂ ಪ್ರತೀ ವರ್ಷ 18 ಕೋಟಿ ರೂ.ವರೆಗೆ ಕಾಣಿಕೆ ಕಳ್ಳತನವಾಗುತ್ತಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಸಂಸ್ಥಾಪಕ ರಾಜ್ ಠಾಕ್ರೆ ಆಪಾದಿಸಿದ್ದಾರೆ.
ಸಿದ್ಧಿ ವಿನಾಯಕ ದೇವಾಲಯದಲ್ಲಿ ಕಾಣಿಕೆ ದೋಚು ತ್ತಿದ್ದ ದೇವಾಲಯದ ಸಿಬಂದಿಯನ್ನು ಹಿಡಿದಿರುವ ಬಗ್ಗೆ ಟ್ರಸ್ಟಿಗಳು ತಮಗೆ ಪತ್ರ ಬರೆದು ತಿಳಿಸಿದ್ದಾರೆಂದು ಹೇಳಿದ ಅವರು, ‘ಕಾಣಿಕೆ ಚೋರರನ್ನು ಬಂಧಿಸಿದ ಮೇಲೆ ದೇವಾಲಯದ ವಾರದ ಕಾಣಿಕೆ 50 ಲಕ್ಷ ರೂ. ಗಳಷ್ಟಿದ್ದಿದ್ದು ಈಗ 1 ಕೋಟಿ ರೂ.ಗೆ ಏರಿಕೆಯಾಗಿದೆ. ವಾರ್ಷಿಕ ಆದಾಯವೂ 140 ಕೋಟಿ ರೂ.ಗಳಿಂದ 182 ಕೋಟಿ ರೂ.ಗಳಿಗೇರಿದೆ’ ಎಂದರು.
ಅಯೋಧ್ಯೆಯಲ್ಲಿ ₹1,400 ಕೋಟಿ ಕಳ್ಳತನ: ರಾಜ್ ಠಾಕ್ರೆ
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಕಳ್ಳತನ ವಾಗಿರುವುದು 1,400 ಕೋಟಿ ರೂ. ಎಂದು ರಾಜ್ ಠಾಕ್ರೆ ಆಪಾದಿಸಿದ್ದಾರೆ. ಪ್ರಕರಣದ ಬೆಳಕಿಗೆ ಬಂದ ಹೊಸತರಲ್ಲಿ 7-8 ಕೋಟಿ ರೂ. ಕಾಣಿಕೆ ದೋಚಿರುವ ಬಗ್ಗೆ ಆಪಾದನೆಗಳು ಕೇಳಿಬಂದಿ ದ್ದವು. ಪ್ರಾಥಮಿಕ ತನಿಖೆಯಲ್ಲಿ 2-3 ಕೋಟಿ ರೂ. ದೋಚಲಾಗಿದೆ. ಆದರೆ ಇಲ್ಲಿ 1,400 ಕೋಟಿ ಕಳ್ಳತನ ಮಾಡಲಾಗಿದೆ ಎಂದಿದ್ದಾರೆ.




























