ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮುಕ್ತಕಂಠದಿಂದ ಹೊಗಳುತ್ತಾ ದೇಶದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗುತ್ತಿದೆ ಎಂದು ಹೇಳುವ ನಟ ವಿವೇಕ್ ಒಬೆರಾಯ್ ಮತ್ತು ಆರ್. ಮಾಧವನ್ ದುಬೈಯಲ್ಲಿ ನೆಲೆಸಿರುವುದೇಕೆ ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.
ಮುಂಬೈಯಲ್ಲಿ ಮಾತನಾಡಿ, ಮೋದಿ ಅವರ ಜೀವನಚರಿತ್ರೆ ಸಿನೆಮಾದಲ್ಲಿ ನಟಿಸಿ, ಅವರ ಪಾತ್ರ ನಿರ್ವಹಿಸಿದ ವಿವೇಕ್ ಒಬೆ ರಾಯ್ ಹಾಗೂ ಮೋದಿ ದೇಶಕ್ಕೆ ಉತ್ತಮ ಉದ್ಯಮ ಗಳನ್ನು ತರುತ್ತಿದ್ದಾರೆ ಎಂದು ಹೇಳುವ ಮಾಧವನ್ ಇಬ್ಬರೂ ದುಬೈಯಲ್ಲೇ ನೆಲೆಸಿದ್ದಾರೆ. ಮೋದಿ ಮೇಲೆ ನಂಬಿಕೆ ಇದ್ದರೆ ಭಾರತದಲ್ಲೇ ಇರಬೇಕು ಎಂದರು.




























