Friday, October 9, 2026
Google search engine
Homeಕಾರ್ಕಳವಿದ್ಯಾರ್ಥಿಗಳಿಗೆ ಕ್ಷಮೆ ಬೇಕಿಲ್ಲ, ಅವರಿಗೆ ನ್ಯಾಯ ಕೊಡಿ: ರಾಹುಲ್ ಗಾಂಧಿ ಟಾಂಗ್

ವಿದ್ಯಾರ್ಥಿಗಳಿಗೆ ಕ್ಷಮೆ ಬೇಕಿಲ್ಲ, ಅವರಿಗೆ ನ್ಯಾಯ ಕೊಡಿ: ರಾಹುಲ್ ಗಾಂಧಿ ಟಾಂಗ್

‘ವಿದ್ಯಾರ್ಥಿಗಳಿಗೆ ಕ್ಷಮೆ ಬೇಕಿಲ್ಲ. ಅವರಿಗೆ ಬೇಕಿರುವುದು ನ್ಯಾಯ. ಅದನ್ನು ಕೊಡಿಸಿ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಮೂಲಕ, ರೀಲ್ಸ್ ಮೂಲಕ ಕ್ಷಮಿಸಿರುವುದಾಗಿ ಹೇಳಿದ ಪ್ರಧಾನಿ ಮೋದಿ ನಡೆಯನ್ನು ಟೀಕಿಸಿದ್ದಾರೆ. ನೀಟ್ ಪರೀಕ್ಷೆ ಅಕ್ರಮದಿಂದ ಆತ್ಮಹತ್ಯೆ ಮಾಡಿಕೊಂಡ ಗೋಪಿಕಾ, ರೋಶಿನಿ ಮತ್ತು ವೆಟ್ರಿ ಆನಂದನ್ ಎಂಬ ಮೂವರು ಯುವ ವೈದ್ಯಕೀಯ ಆಕಾಂಕ್ಷಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅವರು, ಈ ಕುರಿತು ಇನ್ ಸ್ಟಾಗ್ರಾಮ್‌ ನಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಭ್ರಷ್ಟ ವ್ಯವಸ್ಥೆಯ ಕಾರಣದಿಂದ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳು ಜೀವ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments