ಪ್ರಧಾನಿ ಮೋದಿ ಅವರಿಗೆ ಇತ್ತೀಚಿನ ದಿನಗಳಲ್ಲಿ ಜೆನ್‌ಜಿಗಳ ಬೆಂಬಲ ಹೆಚ್ಚಾಗಿದೆ. ಇದು ರಾಹುಲ್ ಗಾಂಧಿ ಅವರಲ್ಲಿ ಭಯವನ್ನು ಸೃಷ್ಟಿ ಮಾಡಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ರಾಹುಲ್ ತಮ್ಮನ್ನು ಯುವ ನಾಯಕ ಎಂದು ಬಿಂಬಿಸಿ ಕೊಂಡಿದ್ದರು. ಆದರೆ, ಇತ್ತೀ ಚೆಗೆ ಆ ಜನಪ್ರಿಯತೆ ಕುಸಿಯ ತೊಡಗಿದ್ದು ಮೋದಿ ಜನಪ್ರಿ ಯತೆ ಹೆಚ್ಚುತ್ತಿದೆ. ಅದೇ ಅವರ ಕಳವಳಕ್ಕೆ ಕಾರಣ ಎಂದು ಗೋಯಲ್ ತಿಳಿಸಿದರು. ಜೆನ್ ಜಿಗಳ ಬೆಂಬಲ ಬಿಜೆಪಿಗೆ ಹಿಂದಿನಿಂದಲೂ ಇದೆ. ವಿಕಸಿತ ಭಾರತವನ್ನು ನಿರ್ಮಾಣ ಮಾಡಲು ಜೆನ್ ಜಿಗಳು ಮೋದಿ ಅವರ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಿದರು.


















