Tuesday, August 25, 2026
Google search engine
Homeಕಾರ್ಕಳವಿದ್ಯಾರ್ಥಿಗಳ ಸಹಕಾರ ಮನೋಭಾವ ಮನೆಯಿಂದಲೇ ಆರಂಭವಾಗಬೇಕು: ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿಯನ್ ಕೆ. ವಿಜೇಂದ್ರ...

ವಿದ್ಯಾರ್ಥಿಗಳ ಸಹಕಾರ ಮನೋಭಾವ ಮನೆಯಿಂದಲೇ ಆರಂಭವಾಗಬೇಕು: ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿಯನ್ ಕೆ. ವಿಜೇಂದ್ರ ಕುಮಾರ್.

“ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಸಹಕಾರ ಗುಣವನ್ನುತೋರಿಸಿ ಅದನ್ನು ಬೆಳೆಸಿ ಶಾಲಾ ಕಾಲೇಜುಗಳಲ್ಲಿ ಇಂಟರಾಕ್ಟ್ ಕ್ಲಬ್ಬಿನಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಬೆಳೆಯಬೇಕು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಿಂದಿನ ವರ್ಷ ಇಂಟರಾಕ್ಟ್ ಕ್ಲಬ್ಬಿನಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿರುವ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದು ಶ್ಲಾಘನೀಯ” ಎಂದು ಪ್ರಸಕ್ತ ವರ್ಷದ ಕೆ.ಎಮ್.ಇ.ಎಸ್ ಸಂಸ್ಥೆಯ ಇಂಟರಾಕ್ಟ್ ಕ್ಲಬ್ಬಿನ ಉಧ್ಘಾಟನೆ ಮಾಡುತ್ತಾ ಹೇಳಿದರು.
ಕಾರ್ಕಳದ ರೋಟರಿ ಕ್ಲಬ್ದಿನ ಕಾರ್ಯದರ್ಶಿಯಾಗಿರುವ ರೊಟೇರಿಯನ್ ಉದಯ ಕುಮಾರ್ ಕಡoಬರವರು ಮಾತನಾಡಿ” ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು, ಶಿಸ್ತು ವಿದ್ಯಾರ್ಥಿಗಳ ಜೀವನದ ಬೆಳವಣಿಗೆಗೆ ಪೂರಕವಾಗಿರುತ್ತದೆ.” ಎಂದು ಹೇಳಿದರು.

ರೊಟೇರಿಯನ್ ಶೇಖರ ಎಚ್.ರವರು ಮಾತನಾಡಿ,” ವಿದ್ಯಾರ್ಥಿಗಳು ಅವಕಾಶ ಬಂದಾಗ ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಇಂಟರಾಕ್ಟ್ ಕ್ಲಬ್ದಿನ ವರು ನಡೆಸುವ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು.” ಎಂದರು.

ಸಂಸ್ಥೆಯ ಪ್ರಾಂಶುಪಾಲರಾದ ಕೆ.ಬಾಲಕೃಷ್ಣರಾವ್ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ರವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪ್ರಸಕ್ತ ಸಾಲಿನ ಇಂಟರಾಕ್ಟ್ ಕ್ಲಬ್ದಿನ ಪದಾಧಿಕಾರಿಗಳು, ಪ್ರೌಢಶಾಲೆಯ ಮುಖ್ಯಸ್ಥೆ ಶ್ರೀಮತಿ ಪಾಟ್ಕರ್, ಪೈಮರಿ ಶಾಲೆಯ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ಉಪಸ್ಥಿತರಿದ್ದರು.

ಕಾರ್ಕಳ ರೋಟರಿ ಕ್ಲಬ್ಬಿನ ಎಲ್ಲಾ ಪದಾಧಿಕಾರಿಗಳು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರೌಢ ಶಾಲಾ ವಿಭಾಗದ ಶಿಕ್ಷಕಿ ಮತ್ತು ಇಂಟರಾಕ್ಟ್ ಕ್ಲಬ್ಬಿನ ಸಂಯೋಜಕರಾದ ಮನುಜರವರು ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments