Monday, August 24, 2026
Google search engine
Homeಕಾರ್ಕಳಯಕ್ಷತೀರ್ಥ ಕಲಾಸೇವೆ ನೂರಾಳ್ ಬೆಟ್ಟು: ಆ. 30ರಂದು 7ನೇ ವರ್ಷದ ಯಕ್ಷತೀರ್ಥ ಸಂಭ್ರಮ ವೈದ್ಯ...

ಯಕ್ಷತೀರ್ಥ ಕಲಾಸೇವೆ ನೂರಾಳ್ ಬೆಟ್ಟು: ಆ. 30ರಂದು 7ನೇ ವರ್ಷದ ಯಕ್ಷತೀರ್ಥ ಸಂಭ್ರಮ ವೈದ್ಯ ದಂಪತಿ ಡಾ| ಪ್ರಸಾದ್ ಬಿ. ಶೆಟ್ಟಿ ಮತ್ತು ಡಾ| ವಿನೋದಾ ಪಿ. ಶೆಟ್ಟಿ ದಂಪತಿಗಳಿಗೆ ಯಕ್ಷತೀರ್ಥ ಗೌರವ ಸನ್ಮಾನ ಜನಾರ್ಧನ ಅಮ್ಮು೦ಜೆ ಯವರಿಗೆ ಯಕ್ಷತೀರ್ಥ ಸಂಘಟನಾ ಪ್ರಶಸ್ತಿ

ಯಕ್ಷತೀರ್ಥ ಕಲಾಸೇವೆ ನೂರಾಳ್ ಬೆಟ್ಟು: ಆ. 30ರಂದು 7ನೇ ವರ್ಷದ ಯಕ್ಷತೀರ್ಥ ಸಂಭ್ರಮ

ವೈದ್ಯ ದಂಪತಿ ಡಾ| ಪ್ರಸಾದ್ ಬಿ. ಶೆಟ್ಟಿ ಮತ್ತು ಡಾ| ವಿನೋದಾ ಪಿ. ಶೆಟ್ಟಿ ದಂಪತಿಗಳಿಗೆ ಯಕ್ಷತೀರ್ಥ ಗೌರವ ಸನ್ಮಾನ

ಜನಾರ್ಧನ ಅಮ್ಮು೦ಜೆ ಯವರಿಗೆ ಯಕ್ಷತೀರ್ಥ ಸಂಘಟನಾ ಪ್ರಶಸ್ತಿ

ಯಕ್ಷತೀರ್ಥ ಕಲಾ ಸೇವೆ ಸೇವೆ ನೂರಾಳ್ ಬೆಟ್ಟು, ಇವರ 7ನೇ ವರ್ಷದ ಯಕ್ಷ ತೀರ್ಥ ಸಂಭ್ರಮ ಕಾರ್ಯಕ್ರಮ ಆ. 30ರಂದು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಜರುಗಲಿದೆ.ಯಕ್ಷ ತೀರ್ಥ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

2026ನೇ ಸಾಲಿನ ಯಕ್ಷತೀರ್ಥ ಗೌರವ ಸನ್ಮಾನಕ್ಕೆ ಯಕ್ಷಕಲಾ ಪೋಷಕರೂ, ಧಾರ್ಮಿಕ ನೇತಾರರು, ವಿಜಯ ಪಾಲಿಕ್ಲಿನಿಕಿಕ್ ಹೊಸ್ಮಾರು ಇಲ್ಲಿನ ವೈದ್ಯರಾದ ಡಾ| ಪ್ರಸಾದ್ ಬಿ. ಶೆಟ್ಟಿ(ಬಿ.ಎ.ಎಂ.ಎಸ್.) ಮತ್ತುಪತ್ನಿ ಡಾ| ವಿನೋದಾ ಪಿ. ಶೆಟ್ಟಿ(ಬಿ.ಎ.ಎಂ.ಎಸ್.) ನಾರಾವಿ ಆಯ್ಕೆಯಾಗಿದ್ದಾರೆ.

2026ರ ಯಕ್ಷತೀರ್ಥ ಸಂಘಟನಾ ಪ್ರಶಸ್ತಿ-2026 ಸ್ವೀಕಾರಕ್ಕೆ “ಯಕ್ಷಕಲಾ ಪೊಳಲಿ” ಸಂಸ್ಥೆಯ ಸಂಘಟಕರಾದ ಜನಾರ್ಧನ ಅಮ್ಮುಂಜೆಯವರು ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪುರಸ್ಕೃತರಿಗೆ ಚಿನ್ನದ ನಾಣ್ಯದೊಂದಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ

ಈ ಕಾರ್ಯಕ್ರಮದಲ್ಲಿ ವಾಲಿ ಸುಗ್ರೀವ ತಾಳಮದ್ದಳೆ ಹಾಗೂ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ(ರಿ.) ಸಿದ್ದಾಪುರ ತಂಡದಿಂದ, ಕವಿರತ್ನ ಕಾಳಿದಾಸ – ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನವೂ ಜರುಗಲಿರುವುದು ಎಂದು ಯಕ್ಷತೀರ್ಥ ಕಲಾಸೇವೆ ನೂರಾಳ್ ಬೆಟ್ಟು ಸಂಘಟಕ ಸದಾನಂದ ಆಚಾರ್ಯ ನೂರಾಳ್ ಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments