Tuesday, August 25, 2026
Google search engine
Homeಕಾರ್ಕಳಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ.

ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ.

ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯು ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಇಲ್ಲಿ ನೆರವೇರಿತು

ಶ್ರೀ ನರೇಂದ್ರ ಕಾಮತ್ ಅಂತರಾಷ್ಟ್ರೀಯ ಯೋಗ ಪಟು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀ ಸಂತೋಷ ವಾಗ್ಲೆ ಇವರು ವಹಿಸಿದ್ದರು. ದಾನಿಗಳು, ವಿದ್ಯಾಭಿಮಾನಿಗಳು ಆಗಿರುವ ಶ್ರೀ ಸಚ್ಚಿದಾನಂದ ಪ್ರಭು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ನೀರೇಬೈಲೂರು, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಪ್ರಶಾಂತ ಶೆಟ್ಟಿ ಗುತ್ತು ಮನೆ, ಶ್ರೀ ರಮೇಶ ಕಿಣಿ ಉದ್ಯಮಿಗಳು, ಶ್ರೀ ಮಂಜುನಾಥ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಶ್ರೀ ಸ್ಟೀವನ್ ಡಿಸೋಜ ಸ್‌ಡಿಎಂಸಿ ಅಧ್ಯಕ್ಷರು, ಶ್ರೀ ರವೀಂದ್ರ ನಾಯಕ್ ನೀರೇ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಶ್ರೀ ವಿಕ್ರಂ ಹೆಗ್ಡೆ ಕಣಜಾರು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು, ಶ್ರೀ ರಮೇಶ ಕಲ್ಲಟ್ಟೆ ಶ್ರೀ ಹೈದರಾಲಿ, ಶ್ರೀ ಹರಿಶ್ಚಂದ್ರ ರಾವ್ ಶ್ರೀ ಸಂತೋಷ್ ನಾಯಕ್ ಎಸ್ ಡಿಎಂಸಿ ಸದಸ್ಯರು, ತಾಲೂಕು ಕ್ರೀಡಾ ಸಮಿತಿಯ ಸಂಯೋಜಕರಾದ ಶರತ್ ರಾವ್ ಹಾಗೂ ಸದಸ್ಯರಾದ ಸೌಜನ್ಯ ಹೆಗಡೆ, ಶ್ರೀ ನಾಗರಾಜ ಉಪ ಪ್ರಾಂಶುಪಾಲರು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಸೀತಾರಾಮ ಭಟ್ ಎಲ್ಲರನ್ನೂ ಸ್ವಾಗತಿಸಿದರು.

ಕ್ರೀಡಾ ಸಂಚಾಲಕರಾದ ಶ್ರೀ ನಾರಾಯಣ ಇವರು ಧನ್ಯವಾದ ಸಮರ್ಪಣೆ ಮಾಡಿದ ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ ಪ್ರಮೋದ್ ನಾಯಕ್ ನಿರೂಪಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments