ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಹಲವಾರು ದೇಶಭಕ್ತರ ಬಲಿದಾನದ ಫಲ: ಎನ್.ಪಿ. ಸಮಾಹ ಸಂಸ್ಥೆಗಳ ಡೈರೆಕ್ಟರ್ ವಾಸುದೇವ ಭಟ್
” ಕೆ.ಎಮ್.ಎಸ್ ವಿದ್ಯಾ ಸಂಸ್ಥೆಗಳು ಸಮಾಜಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಈ ಸಂಸ್ಥೆಗಳ ವಿದ್ಯಾರ್ಥಿಗಳ ಶಿಸ್ತು, ಕಲಿಕೆ, ಸಂಸ್ಥೆಯ ಸುಸಜ್ಜಿತ ವಾತಾವರಣ ದೇಶಕ್ಕೆ ಮಾದರಿ. ಕಾಲೇಜಿನ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಈ ಸಂಸ್ಥೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ತಮ್ಮ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು. ನಮ್ಮ ದೇಶದ ಗಡಿ ಕಾಯುವ, ನಮ್ಮಲ್ಲರ ರಕ್ಷಣೆ ಮಾಡುವ ಯೋಧರನ್ನು ಗೌರವಿಸಬೇಕು” ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ದೇಶಕ್ಕಾಗಿ ಬಲಿದಾನಗೈದ ಸ್ವಾತಂತ್ರ ಯೋಧರನ್ನು, ದೇಶಭಕ್ತರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಉಪನ್ಯಾಸಕಿ ಶ್ವೇತ ಸ್ವಾಗತಿಸಿದರು.
ಪ್ರೌಢಶಾಲೆಯ ಮುಖ್ಯಸ್ಥರಾದ ಶ್ರೀಮತಿ ಪಾಟಕ್, ಪ್ರೈಮರಿ ಶಾಲೆಯ ಮುಖ್ಯಸ್ಥರಾದ ಲೊಲಿಟ ಡಿ’ಸಿಲ್ವ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸತಿಶ್ಚಂದ್ರ ಹೆಗ್ಡೆ ಸಹಕರಿಸಿದರು.
ಕಾಲೇಜಿನ ಉಪನ್ಯಾಸಕಿ ಶ್ವೇತ ರವರು ಸ್ವಾಗತಿಸಿದರೆ, ಶಿಕ್ಷಕಿ ಪ್ರತಿಭಾರವರು ಧನ್ಯವಾದಗೈದರು.





















