Monday, August 24, 2026
Google search engine
Homeಕಾರ್ಕಳಎಸ್ ಎನ್ ವಿ: 80ನೇ ಸ್ವಾತಂತ್ರ್ಯ ದಿನಾಚರಣೆ

ಎಸ್ ಎನ್ ವಿ: 80ನೇ ಸ್ವಾತಂತ್ರ್ಯ ದಿನಾಚರಣೆ

ಸ್ವಸ್ತಿ ಶ್ರೀ ನೇಮಿಸಾಗರ ವರ್ಣೀ ಜಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಇಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಯನ್ನು ಸಂಭ್ರಮದಿಂದ ಆಚರಿಸಲಾಯಿತು .

ಜ್ಞಾನ ಗಂಗಾ ದೀಪ ಕೋಚಿಂಗ್ ಸೆಂಟರ್ ಮೂಡಬಿದ್ರೆ ಇಲ್ಲಿನ ಮುಖ್ಯಸ್ಥರಾದ ಶ್ರೀಮತಿ ಪದ್ಮಜಾ ಇವರು ಧ್ವಜಾರೋಹಣವನ್ನು ನೆರವೇರಿಸಿದರು ನಂತರ ಮಾತನಾಡಿದವರು ಅವರು ”ನಾವು ನಮಗೆ ನಮ್ಮ ಹಿರಿಯರು ನೀಡಿದ ಸ್ವಾತಂತ್ರ್ಯವನ್ನು ಎಂದಿಗೂ ಕೂಡ ಮರೆಯುವಂತಿಲ್ಲ, ನಾವು ವಿದ್ಯಾರ್ಥಿಗಳಿಂದ ಹಿಡಿದು ನಮ್ಮ ಕೊನೆ ಉಸಿರಿನ ತನಕ ದೇಶಕ್ಕಾಗಿ ಶ್ರಮಿಸಬೇಕು, ದೇಶ ಸೇವೆಗೆ ಸದಾ ಸಿದ್ದರಾಗಿರಬೇಕು. ಮಹಾತ್ಮ ಗಾಂಧಿ ಭಗತ್ ಸಿಂಗ್ ನೆಹರು ಮುಂತಾದ ಅನೇಕ ಮಹಾನಾಯಕರು ದೇಶಕ್ಕಾಗಿ ಶ್ರಮಿಸಿದ್ದಾರೆ. ಇವರೆಲ್ಲರನ್ನು ನಾವು ಪ್ರತಿದಿನ ನೆನೆಯಬೇಕು. ನಾವು ವಿದ್ಯಾರ್ಥಿಗಳು ಶಿಕ್ಷಕರು ಹೇಳಿದಂತಹ ಪ್ರತಿಯೊಂದು ವಿಷಯಗಳನ್ನು ಗಮನವಿಟ್ಟು ಪಾಲಿಸಬೇಕು. ಶಿಕ್ಷಕರು ಮಕ್ಕಳಿಗೆ ನೀಡಿದ ಉಪದೇಶವನ್ನು ಚಾಚು ತಪ್ಪದೇ ಪಾಲಿಸಬೇಕು ಆಗ ಮಾತ್ರ ನಾವು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲು ಸಾಧ್ಯ ಎಂದರು.

ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಸ್ಕೌಟ್ಸ್ ಗೇಟ್ಸ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ,ಸ್ವಾತಂತ್ರ್ಯ ಹೋರಾಟಗಾರರ ಛ ದ್ಮ ವೇಷ ಸ್ಪರ್ಧೆ ಚಿತ್ರಕಲೆ ಸ್ಪರ್ಧೆಯನ್ನುಹಾಗೂ ಬಹುಮಾನ ವಿತರಣೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶರ್ಮಿಳಾ ಹೆಗ್ಡೆ ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಜ್ಯೋತಿಯವರು ನೆರವೇರಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments