Monday, August 24, 2026
Google search engine
Homeಕಾರ್ಕಳಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಲಾಂಗ್‌ಟರ್ಮ್ ನೀಟ್ ಎರಡನೇ ಬ್ಯಾಚ್ ದಾಖಲಾತಿ ಆರಂಭ

ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಲಾಂಗ್‌ಟರ್ಮ್ ನೀಟ್ ಎರಡನೇ ಬ್ಯಾಚ್ ದಾಖಲಾತಿ ಆರಂಭ

ವಸತಿ, ಊಟ, ಕೋಚಿಂಗ್ ಸಂಪೂರ್ಣ ಉಚಿತ

ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಲಾಂಗ್‌ಟರ್ಮ್ ನೀಟ್‌ನ ಎರಡನೇ ಬ್ಯಾಚ್‌ಗೆ ದಾಖಲಾತಿ ಆರಂಭಗೊಂಡಿದೆ.

ಈ ತರಬೇತಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿರಲಿದೆ. ಯಾವೊಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಯೂ ಆರ್ಥಿಕ ಸಮಸ್ಯೆಯಿಂದಾಗಿ ನೀಟ್ ತರಬೇತಿಯಿಂದ ವಂಚಿತರಾಗಬಾರದು ಎಂಬುದು ಇದರ ಉದ್ದೇಶವಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ (ಪಿಸಿಎಂಬಿ) ಮುಗಿಸಿ ವೈದ್ಯರಾಗಬೇಕೆಂದು ಕನಸು ಕಾಣುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಅಪೂರ್ವ ಅವಕಾಶ ಸಿಗಲಿದೆ.

ಸೀಮಿತ ವಿದ್ಯಾರ್ಥಿಗಳ ವಿಶೇಷ ಎರಡನೇ ನೀಟ್ ಬ್ಯಾಚ್ ಇದಾಗಿದ್ದು, ಸೇರಬಯಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ಹಾಗೂ ಊಟದ ಸೌಲಭ್ಯ ಲಭ್ಯವಿದ್ದು ಜೊತೆಗೆ ಕೋಚಿಂಗ್ ಹಾಗೂ ಅಧ್ಯಯನ ಸಾಮಾಗ್ರಿಗಳು ಸಂಪೂರ್ಣವಾಗಿ ಉಚಿತವಾಗಿರಲಿದೆ. ಆಸಕ್ತರು ಈ ಕೂಡಲೇ ದೂರವಾಣಿ ಸಂಖ್ಯೆ 7204543688/ 9611474571 ಅಥವಾ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments