ತಮಿಳುನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನಟಿ ತ್ರಿಶಾಗೆ ಮೊದಲ ಸಾಲಿನ ಆಸನ ನೀಡಿದ್ದನ್ನು ಪ್ರತಿಪಕ್ಷ ಡಿಎಂಕೆ ಟೀಕಿಸಿದೆ. ಇದನ್ನು ಡಿಎಂಕೆ ಮುಖವಾಣಿ ಸಂಪಾ ದಕೀಯದಲ್ಲಿ ಕಟುವಾಗಿ ಟೀಕಿಸ ಲಾಗಿದ್ದು, ‘ಮತ ಹಾಕಿ ಗೆಲ್ಲಿಸಿದ ಜನರಿಗೇ ಸಿಎಂ ಮುಖ ಕಾಣಿಸಲಿಲ್ಲ. ಆದರೆ, ನಟಿಗೆ ಮೊದಲ ಸಾಲಿನ ಆಸನ ನೀಡಲಾಯಿತು, ಪರಸ್ಪರ ಸೆಲ್ಯೂಟ್ ಹೊಡೆಯಲಾಯಿತು. ಇಂಥ ಕೀಳು ವರ್ತನೆ ಮೂಲಕ ಸಿಎಂ ಘನತೆಯನ್ನು ಗಾಳಿಗೆ ತೂರಲಾಯಿತು’ ಎಂದು ಬರೆಯಲಾಗಿದೆ.


















