ಆರೆಸ್ಸೆಸ್ ಸದಸ್ಯರ ವಿರುದ್ಧ ನಿರ್ಬಂಧ ವಿಧಿಸುವಂತೆ ಸೂಚಿಸಿರುವ ಅಮೆರಿಕದ ಸಂಸ್ಥೆ ವಿರುದ್ಧ ವಿದೇಶಾಂಗ ಸಚಿವಾಲಯವು ಹರಿಹಾಯ್ದಿದ್ದು, ಪಕ್ಷಪಾತಿ ಹಾಗೂ ವಿಶ್ವಾಸಾರ್ಹವಲ್ಲದ ಸಂಸ್ಥೆ ಎಂದು ಟೀಕಿಸಿದೆ.
ಆರ್‌ಎಸ್‌ಎಸ್ ಕೆಲ ಅಂಗಸಂಸ್ಥೆಗಳು ಅಲ್ಪಸಂಖ್ಯಾತರ ಮೇಲಿನ ದಾಳಿಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿರುವ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (ಯುಎಸ್‌ಸಿಐಆರ್‌ಎಫ್) ಆರೆಸ್ಸೆಸ್ ನಾಯಕರನ್ನು ನಿರ್ಬಂಧಿಸುವಂತೆ ಅಲ್ಲಿನ ಸರಕಾರಕ್ಕೆ ಶಿಫಾರಸು ನೀಡಿದೆ. ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾ ಲಯ, ಈ ಸಂಸ್ಥೆಯು ಕೆಲ ವರ್ಷಗಳಿಂದಲೂ ಭಾರತದ ವಿರುದ್ಧ ಆಯ್ದ ವಿಚಾರಗಳಲ್ಲಿ ಮಾತ್ರ ಅಭಿಪ್ರಾಯ ನೀಡುತ್ತಾ ಪಕ್ಷಪಾತ ತೋರಿಸಿದೆ ಎಂದಿದೆ.


















