Monday, August 24, 2026
Google search engine
Homeವಿಶೇಷಬೆಂಗಳೂರಲ್ಲಿ ನಕಲಿ ಔಷಧ ದಂಧೆ ಬಯಲು : ಮುಂಬೈ, ಹಿಮಾಚಲವರೆಗೂ ನಕಲಿ ಔಷಧ ಜಾಲ!- ದೇಶಾದ್ಯಂತ...

ಬೆಂಗಳೂರಲ್ಲಿ ನಕಲಿ ಔಷಧ ದಂಧೆ ಬಯಲು : ಮುಂಬೈ, ಹಿಮಾಚಲವರೆಗೂ ನಕಲಿ ಔಷಧ ಜಾಲ!- ದೇಶಾದ್ಯಂತ ಹೈ ಅಲರ್ಟ್

ಬೆಂಗಳೂರಿನ ಬಳಿ ಪತ್ತೆಯಾದ ನಕಲಿ ಔಷಧ ದಂಧೆಯ ಜಾಲ ದೇಶದ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಶಂಕೆ ಇದೀಗ ಮತ್ತಷ್ಟು ಬಲವಾಗಿದೆ. ಕರ್ನಾಟಕದ ಔಷಧ ನಿಯಂತ್ರಣ ಇಲಾಖೆ ನೀಡಿದ ಮಾಹಿತಿಯ ಆಧಾರದ ಮೇಲೆ ದೇಶದ ಎಲ್ಲ ರಾಜ್ಯಗಳ ಔಷಧ ನಿಯಂತ್ರಕರು ಹಾಗೂ ರಾಜ್ಯ ಪರವಾನಗಿ ಪ್ರಾಧಿಕಾರಗಳಿಗೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಿಂದ ಮುಂಬೈ, ತೆಲಂಗಾಣ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ನಡುವೆ ನಕಲಿ ಔಷಧ ಜಾಲದ ನಂಟು ಇರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಆಗಸ್ಟ್ 18ರಂದು ಕರ್ನಾಟಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಂಗ್ ಬಿದದಿ ಸಮೀಪದ ನಂ.34 ಕುರುಬರಹಳ್ಳಿ ಗ್ರಾಮದಲ್ಲಿರುವ ಲೈಸೆನ್ಸ್‌ರಹಿತ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿತ್ತು. ದಾಳಿಯ ವೇಳೆ ನಕಲಿ ಔಷಧಗಳು, ಬಲ್ಕ್ ಸ್ಟಾಕ್, ಪ್ಯಾಕೇಜಿಂಗ್ ಯಂತ್ರಗಳು, ಖಾಲಿ ವಯಲ್‌ಗಳು ಹಾಗೂ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 5,05,49,575 ಎಂದು ತಿಳಿದುಬಂದಿದೆ.

ಪ್ರಕರಣ ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕದ ಔಷಧ ಗುಣಮಟ್ಟ ಇಲಾಖೆ ದೇಶದ ಎಲ್ಲ ರಾಜ್ಯಗಳ ಔಷಧ ನಿಯಂತ್ರಕರಿಗೆ ಪತ್ರ ಬರೆದಿದೆ. ಅನುಮಾನಾಸ್ಪದ ಲೇಬಲಿಂಗ್ ಹೊಂದಿರುವ ಔಷಧಗಳು ಅಥವಾ ಕರ್ನಾಟಕದಲ್ಲಿ ನಿಷೇಧಿಸಿರುವ ಬ್ಯಾಚ್‌ಗಳ ಔಷಧಗಳು ತಮ್ಮ ರಾಜ್ಯಗಳಲ್ಲಿ ಪತ್ತೆಯಾದರೆ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು ಹಾಗೂ ಔಷಧ ವಿತರಕರಿಗೂ ಎಚ್ಚರಿಕೆ ನೀಡಲಾಗಿದೆ. ನಿಷೇಧಿತ ಬ್ಯಾಚ್‌ಗಳ ಔಷಧಗಳು ಬಳಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಪರ ಔಷಧ ನಿಯಂತ್ರಕ ಡಾ. ಉಮೇಶ್ ಅವರ ಮಾಹಿತಿ ಪ್ರಕಾರ, ಪ್ರಮುಖ ಹೋಲ್‌ಸೇಲ್ ಔಷಧ ಮಾರುಕಟ್ಟೆಗಳು, ಡಿಸ್ಟ್ರಿಬ್ಯೂಷನ್ ಹಬ್‌ಗಳು ಹಾಗೂ ರಿಟೇಲ್ ಮೆಡಿಕಲ್ ಶಾಪ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments