Monday, August 24, 2026
Google search engine
Homeಕಾರ್ಕಳಕಾರ್ಕಳ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ನಿಟ್ಟೆ ಕ್ರೀಡಾಪಟುಗಳ ಸಾಧನೆ

ಕಾರ್ಕಳ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ನಿಟ್ಟೆ ಕ್ರೀಡಾಪಟುಗಳ ಸಾಧನೆ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ನಿಟ್ಟೆ ಕ್ರೀಡಾಪಟುಗಳ ಸಾಧನೆ ವಿಶಿಷ್ಟವಾದುದು.
ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿರಾಗ್ ಪೂಜಾರಿ 200 ಮೀ ವಿಭಾಗದಲ್ಲಿ ಚಿನ್ನದ ಪದಕ ಮತ್ತು 100 ಮೀಟರ್, ಅಂಡರ್ -20 ವಿಭಾಗದಲ್ಲಿ ಬೆಳ್ಳಿ ಪದಕ, ಸ್ಥುತಿ ಪಿ. ಶೆಟ್ಟಿ ಹೊಸ ದಾಖಲೆಯೊಂದಿಗೆ 100 ಮೀ ಮತ್ತು 200 ಮೀ ವಿಭಾಗದಲ್ಲಿ 20 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಸಿನಾನ್ – ಹೈಜಂಪ್, ಅಂಡರ್ -20 ವಿಭಾಗದಲ್ಲಿ ಚಿನ್ನದ ಪದಕಗಳಿಸಿರುವರು. ಡಾ. ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜಿನ ರಾಘವೇಂದ್ರ ಆರ್. ನಾಯಕ್ ಜಾವೆಲಿನ್ ಎಸೆತ, 20 ವರ್ಷದೊಳಗಿನವರ ವಿಭಾಗದಲ್ಲಿ ಬೆಳ್ಳಿ ಪದಕ, ನಂದಿನಿ ಜಿ., 3000 ಮೀ, ಅಂಡರ್ -20 ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಸಮೃದ್ಧಿ 1500 ಮೀ ಮತ್ತು 800 ಮೀ, ಅಂಡರ್ -20 ವಿಭಾಗದಲ್ಲಿ ಕಂಚಿನ ಪದಕಗಳು ಪಡೆದಿರುತ್ತಾರೆ.
ಡಾ.ಎನ್.ಎಸ್.ಎ.ಎಂ ಪಿಯು ಕಾಲೇಜಿನ ರಶ್ಮಿತಾ ಗಣಪತಿ ದೇವಾಡಿಗ – ಹೈಜಂಪ್, 18 ವರ್ಷದೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿರುವರು ಹಾಗೂ ಡಾ.ಎನ್.ಎಸ್.ಎ.ಎಂ ಕನ್ನಡ ಮಾಧ್ಯಮ ಶಾಲೆಯ  ಪ್ರಣಾಮ್ – ಜಾವೆಲಿನ್ ಎಸೆತ, 16 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವರು. ನಿಟ್ಟೆ ಸಂಸ್ಥೆಯ ಆಡಳಿತ ಮಂಡಳಿ ಅಥ್ಲೆಟ್ ಗಳನ್ನು ಅಭಿನಂದಿಸಿದೆ.
ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments