Monday, August 24, 2026
Google search engine
Homeಕಾರ್ಕಳಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ್ ಅರಸು ಜನ್ಮದಿನಾಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ್ ಅರಸು ಜನ್ಮದಿನಾಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ರತ್ನ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಬ್ಲಾಕ್ ಅಧ್ಯಕ್ಷ ಶುಭದರಾವ್ ಮಹನೀಯರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಗೈದು ಗೌರವಸಲ್ಲಿಸಿದರು.

ಕಾಂಗ್ರೆಸ್ ಉಡುಪಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಅವರು ಮಾತನಾಡಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಿಸಿದ ಪರಿಣಾಮ ಇಂದು ಜನ ಸಾಮಾನ್ಯನಿಗೂ ಸ್ಥಳೀಯಾಡಳಿತ ಸಂಸ್ಥೆಯಲ್ಲಿನ ಅಧಿಕಾರ ದೊರಕುವಂತಾಯಿತು ಎಂದರು. ದೇವಾರಾಜ ಅರಸುರವರು ಉಳುವವನೇ ಹೊಲದೊಡೆಯನಾಗುವ ಗುರಿಯೊಂದಿಗೆ ಉಳಿಗಮಾನ್ಯ ಪದ್ದತಿಯನ್ನು ನಿಷೇಧಿಸುವ ನೆಲೆಯಲ್ಲಿ ಭೂಸುಧಾರಣಾ ಮಸೂದೆಯನ್ನು ಜಾರಿತಂದರು ಎಂದರು

ಬ್ಲಾಕ್ ‌ಪ್ರಚಾರ ಸಮಿತಿ ಅಧ್ಯಕ್ಷ ಅನಿಲ್ ಪೂಜಾರಿ ಮಾಳ ಮಾತನಾಡಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಭೂಸುಧಾರಣಾ ಕಾಯ್ದೆಯನ್ನು ಕರ್ನಾಟಕ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಬಡವರಿಗೆ, ಭೂರಹಿತ ಕೃಷಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಟ್ಟರು, ಆದರೆ ಇಂದು ದೇವರಾಜ ಅರಸು ಅವರು ಅನುಷ್ಠಾನಗೊಳಿಸಿದ ಭೂಸುಧಾರಣಾ ಕಾಯ್ದೆಯ ಮೂಲಕ ಭೂಮಿ ಪಡೆದವರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುತ್ತಿರುವುದು ವಿಪರ್ಯಾಸ ಎಂದರು.

ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ಟಲಿನೋ‌ ಮಾತನಾಡಿ ರಾಜೀವ್ ಗಾಂಧಿಯವರು ದೇಶದಲ್ಲಿ ತಂತ್ರಜ್ಞಾನದ ಕ್ರಾಂತಿಯನ್ನು ಮಾಡಿದರು ಅದರ ಫಲವಾಗಿ ದೇಶದ ಕಟ್ಟಕಡೆಯ ವ್ಯಕ್ತಿಯು ಪ್ರಪಂಚದಾದ್ಯಂತ ನಡೆಯುವ ವಿಚಾರವನ್ನು ತಕ್ಷಣವೇ ತಿಳಿಯಲು ಸಹಕಾರಿಯಾಯಿತು ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ಅತ್ತೂರು ಸ್ವಾಗತಿಸಿ ಪುರಸಭಾ ಮಾಜಿ ಅಧ್ಯಕ್ಷೆ ಪ್ರತಿಮಾ ಧನ್ಯವಾದವಿತ್ತರು. ಈ ಸಂದರ್ಬದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಸಂತೋಷ್ ದೇವಾಡಿಗ, ಶೋಭಾ ಪ್ರಸಾದ್, ಹೇಮಂತ್ ಆಚಾರ್ಯ್, ಕಾಂತಿ ಶೆಟ್ಟೆ, ಮಹ್ಮದ್ ಹುಸೇನ್‌ ತೆಳ್ಳಾರ್ ಶಾಮ ದಾನಶಾಲೆ, ಪಿಲಿಫ್ ಮಸ್ಕರೇನಸ್ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments