Monday, August 24, 2026
Google search engine
Homeಕಾರ್ಕಳಕಾರ್ಕಳ: ಚಿತ್ರ ಕಲಾವಿದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಗೌರವ.

ಕಾರ್ಕಳ: ಚಿತ್ರ ಕಲಾವಿದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಗೌರವ.

ಕಾರ್ಕಳದಲ್ಲಿ ವಾಸ್ತವ್ಯವಿರುವ ಗದಗ ಜಿಲ್ಲೆಯ ಖ್ಯಾತ ಚಿತ್ರಕಲಾವಿದ, ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾದ ಕಮಲ್ ಅಹ್ಮದ್ ಮಾಳೇಕೊಪ್ಪ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಷ್ಠಿತ “ಆರ್ಟಿಸ್ಟ್ ಇನ್ ರೆಸಿಡೆನ್ಸಿ” ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ದೊರಕಿದೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ 10 ದಿನಗಳ ಕಾಲ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತದೆಲ್ಲೆಡೆಯ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರತಿನಿಧಿಸುವ 12 ಮಂದಿ ಕಲಾವಿದರು ಭಾಗವಹಿಸಿದ್ದರು. ಇದರಲ್ಲಿ ಬನಾರಸ್ ಮ್ಯೂರಲ್, ಥಾಂಕಾ, ನಾಯಕ್, ಕೇರಳ ಮ್ಯೂರಲ್, ಬಸೋಹ್ಲಿ, ಸುರಪುರ ಹಾಗೂ ಮೈಸೂರು ಶೈಲಿಯ ಕಲಾವಿದರು ಸೇರಿದ್ದರು. ಅವರೆಲ್ಲರೂ ರಾಷ್ಟ್ರಪತಿ ಭವನದಲ್ಲೇ ವಾಸ್ತವ್ಯ ಹೂಡಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.

ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ಕಳೆದ ೩ ದಶಕಗಳಿಂದ ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾಗಿ ತಮ್ಮದೇ ಆದ ಒಂದು ಶೈಲಿಯನ್ನು ಕಂಡುಕೊಂಡು ಮೀನಿಚರ್ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿರುವ ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ರಾಷ್ಟ್ರಪತಿ ಭವನದಲ್ಲಿ ಒಂದು ಕಲಾಕೃತಿಯನ್ನು ರಚಿಸಿದ್ದಾರೆ.

ಅಲ್ಲದೇ ಒಂದು ಕಲಾಕೃತಿಯು ಪ್ರದರ್ಶಿಸಿದರು. ರಾಷ್ಟ್ರಪತಿ ಭವನದಲ್ಲಿ ಒಟ್ಟು ೨ ಕಲಾಕೃತಿಗಳನ್ನು ಪ್ರದರ್ಶಿಸಿದರು. ಅವುಗಳಲ್ಲಿ ೧ನ್ನು ‘ಪಂಚತಂತ್ರ’ ಕಥಾವಸ್ತುವಿನ ಆಧಾರದ ಮೇಲೆ ರಚಿಸಲಾಗಿತ್ತು.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಲಾವಿದರೊಂದಿಗೆ ಸಂವಾದ ನಡೆಸಿ, ಅವರ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಕಲಾವಿದರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಶಾಘಿಸಿದರು.

“ಆರ್ಟಿಸ್ಟ್ ಇನ್ ರೆಸಿಡೆನ್ಸಿ” ಕಾರ್ಯಕ್ರಮವು ಭಾರತದ ಶ್ರೀಮಂತ ಕಲಾ ಪರಂಪರೆಯನ್ನು ಆಚರಿಸುವ, ದೇಶದ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಭಾರತದ ಸಾಂಸ್ಕೃತಿಕ ಗುರುತನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾದ ವಿಶೇಷ ಕಾರ್ಯಕ್ರಮವಾಗಿದೆ.
ಗದಗ ಜಿಲ್ಲೆಯ ಕಮಲ್ ಅಹ್ಮದ್ ಮಾಳೇ ಕೊಪ್ಪ ಅವರ ಆಯ್ಕೆ ವಿಜಯನಗರ ಗರುಡಾದ್ರಿ ಯಿಂದ ಪ್ರಭಾವಿತ ಚಿತ್ರಕಲೆಗೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗೌರವ ಮತ್ತು ಮನ್ನಣೆಯನ್ನು ತಂದುಕೊಟ್ಟಿದೆ.

ಕಮಲ್ ಅಹ್ಮದ್ ಅವರು ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಶಿವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 18 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸೇವೆ ಸಲ್ಲಿಸಿದವರು.

ಕಮಲ್‌ ಅಹ್ಮದ್‌ ಅವರ ವಿವಿಧ ಕಲಾಕೃತಿಗಳು ಹೆಬ್ರಿ ಸರ್ಕಾರಿ ಕಛೇರಿ ಕಟ್ಟಡಗಳು, ವಿವಿಧ ಸಂಸ್ಥೆಗಳ ಗೋಡೆಗಳಲ್ಲಿ ಮೂಡಿ ಬಂದಿದೆ. ಎಲ್ಲರನ್ನೂ ಸೆಳೆಯುತ್ತಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments