ಎರ್ಲಪಾಡಿ ಗ್ರಾಮದ ಕಾಂತರಗೋಳಿಯ ಗಿರೀಶ್ ಆಚಾರ್ಯ (43) ಅವರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಆ.22ರಂದು ಸಂಭವಿಸಿದೆ.
ಮಣಿಪಾಲದಲ್ಲಿ ಉದ್ಯೋಗ ದಲ್ಲಿದ್ದ ಗಿರೀಶ್ ಅವರು ಜ್ವರದ ಕಾರಣ ಆ.21ರಂದು ಕೆಲಸಕ್ಕೆ ತೆರಳದೆ. ಮನೆಯಲ್ಲಿದ್ದರು. ಆ.22ರಂದು ಬೆಳಗ್ಗೆ ಏಕಾಏಕಿ ತೀವ್ರ ಅಸ್ವಸ್ಥಗೊಂಡ ಅವರನ್ನು ಬೈಲೂರಿನ ಆಸ್ಪತ್ರೆಗೆ ಕರೆದೊ ಯ್ಯಲಾಯಿತು. ಅಲ್ಲಿಂದ ವೈದ್ಯರ ಸಲಹೆಯಂತೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ
ಪರೀ ಕ್ಷಿಸಿದ ವೈದ್ಯರು ಗಿರೀವ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕಾರ್ಕಳನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















