Friday, October 30, 2026
Google search engine
Homeಕಾರ್ಕಳಕಾರ್ಕಳದಲ್ಲಿ ಸಿಂಧೂರ ಕಲಾವಿದೆರ್ ತಂಡದ ದಶ ಸಂಭ್ರಮ; ಹಿರಿಯ ನಟ ರವೀಂದ್ರ ಶಾಂತಿ ಪುಲ್ಕೇರಿಗೆ ಸನ್ಮಾನ

ಕಾರ್ಕಳದಲ್ಲಿ ಸಿಂಧೂರ ಕಲಾವಿದೆರ್ ತಂಡದ ದಶ ಸಂಭ್ರಮ; ಹಿರಿಯ ನಟ ರವೀಂದ್ರ ಶಾಂತಿ ಪುಲ್ಕೇರಿಗೆ ಸನ್ಮಾನ

ಕಳೆದ 10 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ, ಹಲವಾರು ನಾಟಕಗಳನ್ನು ರಂಗಭೂಮಿಗೆ ಸಮರ್ಪಿಸಿರುವ ಕಾರ್ಕಳದ ಹೆಮ್ಮೆಯ, ರಾಜ್ಯ ಪ್ರಶಸ್ತಿ ವಿಜೇತ ನಾಟಕ ತಂಡವಾದ ಸಿಂಧೂರ ಕಲಾವಿದೆರ್ ಕಾರ್ಕಳ ವತಿಯಿಂದ ದಶ ಸಂಭ್ರಮ ಕಾರ್ಯಕ್ರಮವನ್ನು ಅ. 31 ರಂದು ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ರಂಗಭೂಮಿಯಲ್ಲಿ 50 ವರ್ಷಗಳ ಸುದೀರ್ಘ ರಂಗಸೇವೆ ಸಲ್ಲಿಸಿರುವ ತಂಡದ ಹಿರಿಯ ನಟ ರವೀಂದ್ರ ಶಾಂತಿ ಪುಲ್ಕೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಕಾರ್ಯಕ್ರಮದ ಅಂಗವಾಗಿ ಸಿಂಧೂರ ತಂಡದ ಕಲಾವಿದರಿಂದ ಈ ವರ್ಷದ ಯಶಸ್ವಿ ತುಳು ನಾಟಕ ‘ಒಂಜಿ ಗುಜ್ಜೆದ ಕಥೆ’ ಪ್ರದರ್ಶನಗೊಳ್ಳಲಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments