Friday, October 30, 2026
Google search engine
Homeಕಾರ್ಕಳಸ್ಟಿಂಗ್ ಬಗ್ಗೆ ಸಿದ್ದರಾಮಯ್ಯ ತಪ್ಪು ಕಲ್ಪನೆ: ಸಿಎಂ

ಸ್ಟಿಂಗ್ ಬಗ್ಗೆ ಸಿದ್ದರಾಮಯ್ಯ ತಪ್ಪು ಕಲ್ಪನೆ: ಸಿಎಂ

ರಾಜ್ಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ‘ಸ್ಟಿಂಗ್’ ವಿವಾದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಸಂಪುಟದ ಸಹೋದ್ಯೋಗಿಗಳ ಜತೆಗೆ ಗುರುವಾರ ಸುದೀರ್ಘ ಚರ್ಚೆ ನಡೆಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೊಂದಿರುವ ತಪ್ಪು ಕಲ್ಪನೆಗಳು ಇಂದಲ್ಲ ನಾಳೆ ಪರಿಹಾರವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ದಿನಾಚರಣೆ ಸಂಬಂಧ ನಡೆದ ಸಭೆಯಲ್ಲಿ ಸ್ಟಿಂಗ್ ವಿಚಾರ ಸಂಬಂಧ ಸಿದ್ದರಾಮಯ್ಯ ಸಿಡಿಮಿಡಿ ವ್ಯಕ್ತಪಡಿಸಿದ ಬೆನ್ನಲ್ಲೇ ಸಂಪುಟ ಸಭೆಯ ಬಳಿಕ ನಡೆದ ಅನೌಪಚಾರಿಕ ಸಭೆಯಲ್ಲಿ ಸಿಎಂ ಈ ವಿಚಾರ ಪ್ರಸ್ತುತಪಡಿಸಿರುವುದು ಈಗ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಇದರೊಂದಿಗೆ ಸ್ಟಿಂಗ್ ಬಗ್ಗೆ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಕೆಲವು ಅಸಮಾಧಾನ ಇದೆ ಎಂಬ ವಿಚಾರ ಸ್ಪಷ್ಟವಾದಂತಾಗಿದೆ. ಈ ವಿಷಯವನ್ನೂ ಒಳಗೊಂಡಂತೆ 1 ಗಂಟೆ ಕಾಲ ಸಿಎಂ ತಮ್ಮ ಸಂಪುಟ ಸಹೋದ್ಯೋಗಿಗಳ ಜತೆಗೆ ಚರ್ಚೆ ನಡೆಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments