Friday, October 30, 2026
Google search engine
Homeಕಾರ್ಕಳಸ್ಟಿಂಗ್ ಆಪರೇಷನ್ ಆರೋಪಿಗಳ ಬಂಧನಕ್ಕೆ ವಿಳಂಬ: ಸಿದ್ದರಾಮಯ್ಯ ಆಕ್ರೋಶ

ಸ್ಟಿಂಗ್ ಆಪರೇಷನ್ ಆರೋಪಿಗಳ ಬಂಧನಕ್ಕೆ ವಿಳಂಬ: ಸಿದ್ದರಾಮಯ್ಯ ಆಕ್ರೋಶ

ಸಚಿವ ಸಂಪುಟಕ್ಕೂ ಮುನ್ನ ಮೈಸೂರು ವಿಭಾಗದ ಸಚಿವರು, ಶಾಸಕರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಉಪಾಹಾರ ಕೂಟದ ಸಭೆ ನಡೆಸಿದ್ದು, ಈ ವೇಳೆ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಿಎಂ ಅಸಮಾಧಾನ ಹೊರಹಾಕಿದ್ದಾರೆ. ‘ಕಾವೇರಿ’ ನಿವಾಸದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಹಲವು ಸಚಿವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸ್ಟಿಂಗ್‌ ಆಪರೇಷನ್ ಪ್ರಕರಣದಲ್ಲಿ ರಾಕೇಶ್ ಶೆಟ್ಟಿ ಮತ್ತು ಕೆಪಿಸಿಸಿ ವಕ್ತಾರೆ ಕೃಪಾ ‘ಆಳ್ವಾ ಅವರ ಬಂಧನಕ್ಕೆ ಸರಕಾರ ಮೀನಮೇಷ ಎಣಿಸುತ್ತಿದೆ. ನಮ್ಮದೇ ಸರಕಾರ ಇದ್ದರೂ ಈ ರೀತಿ ಆಗುತ್ತಿರುವುದು ಬೇಸರದ ಸಂಗತಿ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಸಭೆಯ ಬಳಿಕ ಈ ಬಗ್ಗೆ ಕೆಲವು ಸಚಿವರು, ಶಾಸಕರನ್ನು ಕೇಳಿದಾಗ, ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿರುವುದನ್ನು ನಿರಾಕರಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments