Friday, October 30, 2026
Google search engine
Homeಕಾರ್ಕಳನೆಟ್‌ಬಾಲ್: ಕಾರ್ಕಳ ಜ್ಞಾನಸುಧಾ ಇಬ್ಬರು ರಾಷ್ಟ್ರಮಟ್ಟಕ್ಕೆ ಆಯ್ಕೆ

ನೆಟ್‌ಬಾಲ್: ಕಾರ್ಕಳ ಜ್ಞಾನಸುಧಾ ಇಬ್ಬರು ರಾಷ್ಟ್ರಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀವಿದ್ಯಾನಿಕೇತನ ಪಿ.ಯು ಕಾಲೇಜು ಕೊಪ್ಪಳ ಇವರ ಸಹಯೋಗದಲ್ಲಿ ರಾಜ್ಯಮಟ್ಟದಲ್ಲಿ ನಡೆದ ನೆಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಹಾಸನದ ಡಾ.ವೇಣು ಬಿ ಎಂ ಮತ್ತು ಸುಮಾ ವೇಣು ದಂಪತಿಗಳ ಸುಪುತ್ರ ಆಯುಶ್ ಎಚ್ ವಿ ಹಾಗೂ ಬಾಬು ಎಸ್ ಎ ಹಾಗೂ ಸುಜಾತ ಟಿ ಆರ್ ದಂಪತಿಗಳ ಸುಪುತ್ರ ಪೂರ್ವಿಕ್ ಎಸ್ ಬಾಬು ಸಾಧಕ ವಿದ್ಯಾರ್ಥಿಗಳಾಗಿದ್ದಾರೆ.

ಈ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments