
ಮಸೀದಿ ಸಮೀಕ್ಷೆಗೆ ಬಂದಾಗ ಹಿಂಸೆ-ಗೋಲಿಬಾರ್: 3 ಸಾವು
ಉತ್ತರ ಪ್ರದೇಶದ ಸಂಭಲ್ ನಲ್ಲಿ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿ ಆರಂಭವಾದ ವಿವಾದವು ಹಿಂಸಾಚಾರಕ್ಕೆ ತಿರುಗಿ,ಮೂವರು ಸಾವಿಗೆ ಕಾರಣವಾಗಿದೆ.ಈ ಘಟನೆಯಲ್ಲಿ 20 ಪೊಲೀಸರು ಸಹಿತ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮೊಘಲರ ಕಾಲದಲ್ಲಿ ದೇಗುಲವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಹೇಳಲಾಗಿರುವ ಮಸೀದಿಯ ಸಮೀಕ್ಷೆಯನ್ನು ವಿರೋಧಿಸಿ ಜನರ ಗೊಂಪೊಂದು ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯ ನಡೆಸಿದೆ. ಜತೆಗೆ ಪೊಲೀಸರತ್ತ ಕಲ್ಲು,ಚಪ್ಪಲಿ ತೂರಾಟ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಉದ್ರಿಕ್ಕ ಗುಂಪಿನತ್ತ ಗುಂಡು ಹಾರಿಸಿದ್ದಾರೆ. ಹೀಗಾಗಿ 3 ಮಂದಿ ಅಸುನೀಗಿದ್ದಾರೆ.
ರವಿವಾರ ಬೆಳೆಗ್ಗೆ 7.30 ಕ್ಕೆ ಕೋರ್ಟ್ ನಿಂದ ನಿಯೋಜಿತವಾಗಿರುವ ಕೋರ್ಟ್ ಆಯುಕ್ತರ ತಂಡ ಸಮೀಕ್ಷೆ ನಡೆಸಲು ಆಗಮಿಸುತ್ತಿದ್ದಂತೆಯೇ ಪ್ರತಿಘಟನಕಾರರು ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು.ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರವಾಯು ಪ್ರಯೋಗಿಸಿದರು.ಅದಕ್ಕೂ ಬಗ್ಗದೆ ಇದ್ದಾಗ ಪೊಲೀಸರು ಗುಂಡು ಹಾರಿಸಿದರು.ಹೀಗಾಗಿ ಮೂವರು ಮೃತಪಟ್ಟಿದಾರೆ.ಮುಂದಿನ 24 ಗಂಟೆಗಳ ಕಾಲ ಸಂಭಲ್ ತಾಲೂಕಿನಲ್ಲಿ ಮೊಬೈಲ್ ಇಂಟರನೆಟ್ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.
15 ಮಂದಿ ವಶಕ್ಕೆ
ಗಲಾಟಿಗೆ ಸಂಬಂಧಿಸಿ ಮೂವರು ಮಹಿಳೆಯರು ಸಹಿತ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಮೊರದಾಬಾದ್ ಪೊಲೀಸ್ ಆಯುಕ್ತ ಅನಂಜ್ಯ ಕುಮಾರ್ ಸಿಂಗ್ ಹೇಳಿದ್ದಾರೆ.



