ಹೆಬ್ರಿ: ಎಸ್.ಆರ್. ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕವಿಗೋಷ್ಠಿ
ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ವಿದ್ಯಾರ್ಥಿಗಳು ವೇದಿಕೆಗಳನ್ನು ಬಳಸಿಕೊಳ್ಳಬೇಕು. ಸಾಹಿತ್ಯದ ಆಸಕ್ತಿ ನಿಮ್ಮಲ್ಲಿದ್ದಾಗ ಇಂತಹ ವೇದಿಕೆಗಳು ಅದರ ಬೆಳವಣಿಗೆಗೆ ಪುಷ್ಟಿಯನ್ನು ನೀಡುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಗಳು ಅಧಿಕವಿರುವುದರಿಂದ ಅವಕಾಶಗಳು ದೊರಕುವುದು ವಿರಳ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಬರುವ ಅವಕಾಶಗಳನ್ನು ಪರಿಪೂರ್ಣವಾಗಿ ಬಳಸಿಕೊಂಡು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು. ಇಂತಹ ಸಾಹಿತ್ಯದ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಎಸ್.ಆರ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಅವರು ಹೇಳಿದರು.
ಇವರು ಎಸ್.ಆರ್.ಪದವಿ ಪೂರ್ವ ಕಾಲೇಜಿನಲ್ಲಿ, ನಡೆದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭ ಹಾಗು ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಆರ್. ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಗುರುಪ್ರಸಾದ್, ಕನ್ನಡ ಉಪನ್ಯಾಸಕರು ಹಾಗು ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕರಾದ ದೀಪಕ್.ಎನ್ ಅವರು ವಿದ್ಯಾರ್ಥಿಗಳು ವಾಚಿಸಿದ ಕವನಗಳಿಗೆ ಪ್ರತಿಕ್ರಿಯೆ ನೀಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆದ ಈ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ವರದಿಯನ್ನು ವಿದ್ಯಾರ್ಥಿನಿ ದೀಪಿಕಾ ವಾಚಿಸಿದರು.
ವಿದ್ಯಾರ್ಥಿ ಕವಿಗೋಷ್ಠಿ:
ಎಸ್.ಆರ್.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ, ನಿಶಾಂತ್, ಮಲ್ಲೇಶ್ ವೈ.ಸಿ, ಶಶಾಂಕ್, ಯಶಸ್ವಿನಿ ಸಿ.ಆರ್, ದಿಯಾ ಜಯಕರ ಪುತ್ರನ್, ಶರಣ್ಯ, ಅಮೂಲ್ಯ ಆರ್.ಶೆಟ್ಟಿ, ಅನುಷಾ ಎನ್.ಎಸ್, ದೀಪಿಕಾ, ಜೆ.ಟಿ.ಅನುಶ್ರೀ ರಾವ್, ಶ್ರದ್ಧಾ, ಕವನ ವಾಚಿಸಿದರು.
ವಿದ್ಯಾರ್ಥಿಗಳಾದ ತನುಶ್ರೀ ಸ್ವಾಗತಿಸಿ, ಶಬರೀಶ್ ವಂದಿಸಿ, ಪ್ರಿಯಾನಿ ಗೌಡ ಕಾರ್ಯಕ್ರಮ ನಿರೂಪಿಸಿದರು.