ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಸಹಭಾಗಿತ್ವದಲ್ಲಿ ನೂತನ ಲಿಯೊ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಉದ್ಘಾಟನೆ ಲಿಯೊ ಅಧ್ಯಕ್ಷೆಯಾಗಿ ಭೂಮಿಕಾ‌ ಶೆಟ್ಟಿ – ಕಾರ್ಯದರ್ಶಿಯಾಗಿ ಚಿರಂತ್ ಜಿ.

0

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಸಹಭಾಗಿತ್ವದಲ್ಲಿ ನೂತನ ಲಿಯೊ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಉದ್ಘಾಟನೆ

ಲಿಯೊ ಅಧ್ಯಕ್ಷೆಯಾಗಿ ಭೂಮಿಕಾ‌ ಶೆಟ್ಟಿ – ಕಾರ್ಯದರ್ಶಿಯಾಗಿ ಚಿರಂತ್ ಜಿ.

ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಸಹಭಾಗಿತ್ವದಲ್ಲಿ ನೂತನ ಲಿಯೊ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಉದ್ಘಾಟನೆಯು ನ. 27ರಂದು ಕ್ರಿಯೇಟಿವ್‌ಪಿಯು ಕಾಲೇಜಿನಲ್ಲಿ ಜರುಗಿತು. ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯು ಕಾಮರ್ಸ್‌ ವಿದ್ಯಾರ್ಥಿಗಳನ್ನೊಳಗೊಂಡ ಲಿಯೊ ತಂಡದ ಉದ್ಘಾಟನೆಯನ್ನು ಲಯನ್‌ ಜಿಲ್ಲೆ 317ಸಿ ಇದರ ಜಿಲ್ಲಾ ಗವರ್ನರ್‌ ಮೊಹಮ್ಮದ್‌ ಹನೀಫ್‌ ಅವರು ನೆರವೇರಿಸಿ ಶುಭ ಹಾರೈಸಿದರು.

ಫಸ್ಟ್‌ ವಿಡಿಜಿ ಸಪ್ನಾ ಸುರೇಶ್‌ ನೂತನ ಲಿಯೊ ತಂಡದ ಚಾರ್ಟರ್‌ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪ್ರಮಾಣವಚನವನ್ನು ನೀಡಿದರು. ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್‌ ಬಗ್ಗೆ ಮಾಹಿತಿಯನ್ನು ನೀಡುತ್ತಾ ಇಂದಿನ ಲಿಯೊ ಸದಸ್ಯರೆ, ಮುಂದಿನ ಲಯನ್‌ ಸದಸ್ಯರು ಎಂದು ನೂತನ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಲಿಯೊ ತಂಡದ ಅಧ್ಯಕ್ಷೆಯಾಗಿ ಭೂಮಿಕಾ ಶೆಟ್ಟಿ, ಕಾರ್ಯದರ್ಶಿಯಾಗಿ ಚಿರಂತ್ ಜಿ., ಕೋಶಾಧಿಕಾರಿಯಾಗಿ ಸಾನ್ವಿ ಆಚಾರ್ಯ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಓಂ ರಾಹುಲ್‌ ಜೊತೆಗೆ 25 ಮಂದಿ ಸದಸ್ಯರನ್ನೊಳಗೊಂಡ ನೂತನ ಚಾರ್ಟರ್‌ ತಂಡವು ರಚನೆಯಾಯಿತು.

ಜಿಲ್ಲೆಯ ಮಾಜಿ ಗವರ್ನರ್‌ ಎನ್‌. ಎಮ್‌. ಹೆಗ್ಡೆ ಅವರು ಸಾಂದರ್ಭಿಕವಾಗಿ ಮತಾತನಾಡಿ, ಲಯನ್ಸ್‌ ಮತ್ತು ಲಿಯೊ ಸದಸ್ಯರು ಯಾವ ರೀತಿಯಾಗಿ ಕ್ಲಬ್‌ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಮತ್ತು ಅವರ ಜವಾಬ್ದಾರಿಗಳನ್ನು ನಿಭಾಯಿಸುವ ಕುರಿತು ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಲಿಯೊ ಕೋ-ಆರ್ಡಿನೇಟರ್‌ ಮೊಹಮ್ಮದ್‌ ಮೌಲಾ, ಸಂಪುಟ ಕಾರ್ಯದರ್ಶಿ ಗಿರೀಶ್‌ ರಾವ್‌, ಕೋಶಾಧಿಕಾರಿ ಶ್ರೀನಿವಾಸ್‌ ಪೈ, ವಲಯಾಧ್ಯಕ್ಷ ಶಾಕೀರ್‌ ಹುಸೈನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಅಧ್ಯಕ್ಷೆ ಜ್ಯೋತಿ ರಮೇಶ್‌ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸ್ವಾಗತ ಮತ್ತು ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಾರ್ಥನೆಯನ್ನು ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿ, ಲಿಯೊ ಕೋ-ಆರ್ಡಿನೇಟರ್‌ ಜ್ಞಾನೇಶ್‌ ಕೋಟ್ಯಾನ್‌ ಧನ್ಯವಾದವಿತ್ತರು.

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಕಾರ್ಯದರ್ಶಿ ರಘುನಾಥ್ ಕೆ.ಎಸ್.‌, ಕೋಶಾಧಿಕಾರಿ ಟಿ. ಕೆ. ರಘುವೀರ್‌, ಬಿಓಡಿ ಸದಸ್ಯರಾದ ಪೂರ್ಣಿಮಾ ಶೆಣೈ, ನಿಹಾಲ್‌ ಶೆಟ್ಟಿ ಜಕ್ಕನ್‌ಮಕ್ಕಿ, ಶಾಲಿನಿ ಸುವರ್ಣ ಮತ್ತು ಕಾಲೇಜಿನ ಉಪನ್ಯಾಸಕ ವೃಂದದವರು ಸಹಕರಿಸಿದರು.ವಿದ್ಯಾರ್ಥಿನಿ ಹಿತ ನಿರೂಪಿಸಿದರು.

   

LEAVE A REPLY

Please enter your comment!
Please enter your name here