ಡಾ.ರವೀಂದ್ರ ಶೆಟ್ಟಿ ಪ್ರಾಯೋಜಕತ್ವದಲ್ಲಿ ‘ಕರುನಾಡ ಸಿರಿ’ ಪ್ರಶಸ್ತಿ
ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆ
ಕಾರ್ಕಳ:ಡಾ.ರವೀಂದ್ರ ಶೆಟ್ಟಿ ಬಜಗೋಳಿ ಪ್ರಾಯೋಜಿಸಿರುವ ಪ್ರಸಕ್ತ ವರ್ಷದ ಕಾರ್ಕಳ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆಗೆ ನೀಡಲಾಗುವ ‘ಕರುನಾಡ ಸಿರಿ’ ಪ್ರಶಸ್ತಿಗೆ ಕಲ್ಯಾ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.
ಕಾರ್ಕಳ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆ ಹಿರಿಮೆಯೊಂದಿಗೆ ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡಿದ್ದು, ಶಿರ್ಲಾಲಿನ ನಾಲ್ಕೂರು ನರಸಿಂಗರಾವ್ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಡಿ.6ರಂದು ನಡೆಯುವ ಕಾರ್ಕಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನವಾಗಲಿದೆ.
”ಸರ್ಕಾರೀ ಶಾಲೆಗಳಿಗೆ ಉತ್ತೇಜನ ನೀಡಬೇಕು ಅನ್ನುವ ಉದ್ದೇಶದಿಂದ ‘ಕರುನಾಡ ಸಿರಿ’ ಪ್ರಶಸ್ತಿಯನ್ನು ನೀಡುತ್ತಿದ್ದೇವೆ.ಪ್ರಶಸ್ತಿಗೆ ಶಾಲೆಗಳನ್ನು ಆಯ್ಕೆ ಮಾಡುವುದು ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್.ಪ್ರಶಸ್ತಿ 10,000ರೂ ನಗದು ಮತ್ತು ಸ್ಮರಣಿಕೆ ನೀಡುತ್ತಿದೆ.ಸರ್ಕಾರೀ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎನ್ನುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ.ಕಳೆದ ವರ್ಷ ನಲ್ಲೂರು ಶಾಲೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಈ ವರ್ಷ ಕಲ್ಯಾ ಶಾಲೆ ಪಡೆದುಕೊಂಡಿದೆ”.
-ಡಾ.ರವೀಂದ್ರ ಶೆಟ್ಟಿ ಬಜಗೋಳಿ
ಶಾಲೆಯೊಂದು ತೆರೆದರೆ ಊರೊಂದು ಸುಸಂಸ್ಕೃತ ಗೊಂಡಂತೆ ಎಂಬ ಮಾತಿನಂತೆ ಕಲ್ಯಾ ಶಾಲೆಯು ಸಾರ್ಥಕ ನೂರು ಸಂವತ್ಸರವನ್ನು ಆಚರಿಸಿದ ಶತಮಾನೋತ್ಸವ ಶಾಲೆಯೆಂಬ ಶ್ರೇಷ್ಠ ಹೆಗ್ಗಳಿಕೆ ಈ ಶಾಲೆಗೆ ಸಂದಿದೆ. ಈ ಶಾಲೆಯಲ್ಲಿ ಅಂದಿನಿಂದ ಇಂದಿನವರೆಗೆ ಅದೆಷ್ಟೋ ವಿದ್ಯಾರ್ಥಿಗಳು ಬಡವರಿರಲಿ ಶ್ರೀಮಂತರಿರಲಿ ಕನ್ನಡ ಮಾತೃಭಾಷೆಯಲ್ಲಿ ಒಂದೇ ತಾಯ ಮಕ್ಕಳೆಂದು ವಿದ್ಯೆಯನ್ನು ಕಲಿತು ನಾಡಿಗೆ ದೇಶಕ್ಕೆ ಶ್ರೇಷ್ಠ ವ್ಯಕ್ತಿಗಳಾಗಿ ಮೂಡಿ ಬಂದಿರುತ್ತಾರೆ. ಒಂದು ಪುಟ್ಟ ಹಳ್ಳಿಯೆನಿಸಿದ ಕಲ್ಯಾ ಊರಿನಲ್ಲಿ ಅಂದು ಶಾಲೆಯ ಅವಶ್ಯಕತೆ ಇದ್ದಾಗ ಊರ ಹಿರಿಯ ಪ್ರಾಥಃಸ್ಮರಣೀಯ ಮಹನೀಯರು ಶುಭಸ್ಯಂ ಶೀಘ್ರಂ ಎಂದು ಭಾವಿಸಿ ತೆರೆದ ಶಾಲೆಯು ಇಂದು ಸಾಗಿ ಬಂದ ಹಾದಿಯ ಹೆಜ್ಜೆ ಗುರುತು ಆದರ್ಶವಾದುದು ಆನುಸರಣೀಯವಾದು.
ಇಂದು ಕೂಡ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆದರ್ಶ ಶಾಲಾಭಿವೃದ್ಧಿ ಸಮಿತಿ ಶಾಲಾ ಪೂರ್ವ ವಿದ್ಯಾರ್ಥಿಗಳು ಉದಾರ ದಾನಿಗಳು ಆಭಿಮಾನದ ಪೋಷಕರು ನುರಿತ ಆದರ್ಶ ಶಿಕ್ಷಕ ಬಂಧುಗಳು ಅಃತೆಯೇ ದೇಶದ ಭಾವಿ ಪ್ರಜೆಗಳೆನಿಸಿದ ವಿದ್ಯಾರ್ಥಿ ವೃಂದ ಈ ಶಾಲೆಯ ಸೊಬಗಿಗೆ ದೊಡ್ಡ ಆಸ್ತಿಯೆನಿಸಿದೆ.
ಇತ್ತೀಚೆಗೆ ದೇಶದ ಯೋಧ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ರವರ ಸ್ಮಾರಕ ನಿರ್ಮಾಣಗೊಂಡು ಬಿಸಿರಕ್ತದ ಗಂಡುಗಲಿ ಸೈನಿಕನ ದೇಶಪ್ರೇಮ ಮತ್ತು ಬಲಿದಾನದ ಪಾವಿತ್ರ್ಯತೆಯನ್ನು ವಿದ್ಯಾರ್ಥಿಗಳಿಗೆ ಆದರ್ಶವೆಂದು ಕಲಿಸಿಕೊಟ್ಟಿದೆ.
ಹಾಗಾಗಿ ಶಾಲೆಯ ಶತ ವರ್ಷದ ಸಂಭ್ರಮ ಶಾಲೆಯ ಮೂಲಭೂತ ಸೌಕರ್ಯ ಹಾಗೂ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಕನ್ನಡ ಮಾತೃಭಾಷಾ ಅಭಿಮಾನ ಕೈಗೊಂಡ ಕನ್ನಡ ನಾಡು ನುಡಿಯ ಕೈಕಂರ್ಯವನ್ನು ಪರಿಣಿಗಣಿಸಿ ಶಿಕ್ಷಣ ಪ್ರೇಮಿ ಡಾ ರವೀಂದ್ರ ಶೆಟ್ಟಿ ಬಜಗೋಳಿ ಇವರು ಪ್ರಾಯೋಜಿಸಿದ ಕರುನಾಡ ಸಿರಿ ಉತ್ತಮ ಶಾಲೆ ಪ್ರಶಸ್ತಿಯನ್ನು ಶಿರ್ಲಾಲಿನಲ್ಲಿ ನಡೆದ ಪ್ರೊ ಕೆ ಗುಣಪಾಲ ಕಂಡಬರ ಸಮ್ಮೇಳನ ಸರ್ವಧ್ಯಾಕ್ಷತೆಯಲ್ಲಿ ಸೇರಿದ ಸಮಸ್ತ ಕನ್ನಡ ಮನಸ್ಸುಗಳ ಉಪಸ್ಥಿತಿಯಲ್ಲಿ ನಡೆಯುವ ಕಾರ್ಕಳ ತಾಲೂಕು ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಾರ್ಕಳ ಪ್ರದಾನ ಮಾಡುತ್ತಿದೆ.